ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ (Ranveer Singh) ಅಭಿನಯದ ‘ಧುರಂಧರ್ 2’ (Dhurandhar 2) ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾಗಿ ಕೇವಲ ಮೂರು ದಿನಗಳಲ್ಲೇ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡಿದ್ದು, ವಿಶ್ವದಾದ್ಯಂತ 500 ಕೋಟಿ ರೂ. ಕ್ಲಬ್ ಸೇರಿದೆ.
ಬಿಡುಗಡೆಯಾದ ಎರಡು ದಿನಗಳಲ್ಲಿ ಭಾರತದಲ್ಲಿ ಸಿನಿಮಾ 226.27 ಕೋಟಿ ರೂ. ಗಳಿಸಿತ್ತು. ಮೂರನೇ ದಿನ 113 ಕೋಟಿ ರೂ. ಸಂಗ್ರಹಿಸಿದೆ ಎಂದು ಇಂಡಸ್ಟ್ರಿ ಟ್ರ್ಯಾಕರ್ ಸಕ್ನಿಲ್ಕ್ ಹೇಳಿದ್ದಾರೆ. ದೇಶದಲ್ಲಿ ಒಟ್ಟು 339.27 ಕೋಟಿ ರೂ. ಸಂಗ್ರಹವಾಗಿದೆ. ಇದನ್ನೂ ಓದಿ: ರಿಲೀಸ್ ದಿನವೇ ಎಲ್ಲಾ ಬಾಕ್ಸಾಫೀಸ್ ರೆಕಾರ್ಡ್ ಉಡೀಸ್ ಮಾಡಿದ ಧುರಂಧರ್ 2 – ಗಳಿಸಿದ್ದೆಷ್ಟು?
ಪುಷ್ಪ 2 ಸಿನಿಮಾದ ಆರಂಭಿಕ ವಾರಾಂತ್ಯದ ದಾಖಲೆಯನ್ನು ಧುರಂಧರ್ 2 ಉಡೀಸ್ ಮಾಡುವ ಹಾದಿಯಲ್ಲಿದೆ. ಭಾರತದಲ್ಲಿ ಸಾರ್ವಕಾಲಿಕ ಅತಿ ದೊಡ್ಡ ವಾರಾಂತ್ಯದ ಆರಂಭಿಕ ಚಿತ್ರವಾಗುವ ಗುರಿಯನ್ನು ಹೊಂದಿದೆ. ಅಲ್ಲು ಅರ್ಜುನ್ ಅವರ ಚಿತ್ರದ ಆರಂಭಿಕ ವಾರಾಂತ್ಯದ ಕಲೆಕ್ಷನ್ ಎಲ್ಲಾ ಭಾಷೆಗಳನ್ನು ಒಳಗೊಂಡಂತೆ ಭಾರತದಲ್ಲಿ 354 ಕೋಟಿ ರೂ. ಆಗಿತ್ತು.
ಸಿನಿಮಾ ವಿಶ್ವಾದ್ಯಂತ 501.04 ಕೋಟಿ ರೂ. ಗಳಿಕೆ ಮಾಡಿದೆ. ಉತ್ತರ ಅಮೆರಿಕಾದ ಬಾಕ್ಸ್ ಆಫೀಸ್‌ನಲ್ಲಿ (ಯುಎಸ್ಎ ಮತ್ತು ಕೆನಡಾ) ಅಭೂತಪೂರ್ವ ಪ್ರದರ್ಶನ ಕಾಣುತ್ತಿದೆ. ಇಲ್ಲಿ ಬಿಡುಗಡೆಯಾದ ಮೂರನೇ ದಿನದಂದು ಚಿತ್ರದ ಒಂದು ದಿನದ ಗಳಿಕೆ $4.0 ಮಿಲಿಯನ್ (35 ಕೋಟಿ ರೂ.) ನಿಂದ $4.5 ಮಿಲಿಯನ್ (40 ಕೋಟಿ ರೂ.) ತಲುಪಿದೆ.
ಧುರಂಧರ್ 2 ಈಗಾಗಲೇ ಕಳೆದ ಕೆಲವು ವರ್ಷಗಳ ಹಿಂದಿನ ಸಿನಿಮಾಗಳ ದೊಡ್ಡ ಹಿಟ್‌ಗಳನ್ನು ಮೀರಿಸಿದೆ. ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲಿ ಈ ಚಿತ್ರವು 226.27 ಕೋಟಿ ರೂ. ಗಳಿಸಿದ್ದರೂ, ಶಾರುಖ್ ಖಾನ್ ಅವರ ಜವಾನ್, ಪಠಾಣ್ ಮತ್ತು ರಣಬೀರ್ ಕಪೂರ್ ಅವರ ಅನಿಮಲ್ ನಂತಹ ಹಿಟ್ ಚಿತ್ರಗಳನ್ನು ಹಿಂದಿಕ್ಕಿದೆ. ಪಠಾಣ್ ಮತ್ತು ಜವಾನ್ ಬಿಡುಗಡೆಯಾದ ಎರಡು ದಿನಗಳಲ್ಲಿ ಕ್ರಮವಾಗಿ 127.50 ಕೋಟಿ ಮತ್ತು 128.23 ಕೋಟಿ ರೂ. ಗಳಿಸಿದರೆ, ಅನಿಮಲ್ 130.07 ಕೋಟಿ ರೂ. ಗಳಿಸಿತ್ತು. ಇದನ್ನೂ ಓದಿ: ವಿಶ್ವದಾದ್ಯಂತ ‘ಧುರಂಧರ್ 2’ ರಿಲೀಸ್ – ರಣವೀರ್ ಸಿಂಗ್ ಕಮಾಲ್
ಚಿತ್ರದ ತಮಿಳು ಮತ್ತು ತೆಲುಗು ಆವೃತ್ತಿಗಳು ತೆರೆಗೆ ಬರುತ್ತಿದ್ದಂತೆ, ಅದರ ಸಂಗ್ರಹ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಭಾನುವಾರ ಚಿತ್ರವು 100 ಕೋಟಿ ರೂ. ಕಲೆಕ್ಷನ್ ಮೀರುವ ನಿರೀಕ್ಷೆಯಿದೆ.

