ವಂದೇ ಮಾತರಂಗೆ ರಾಷ್ಟ್ರಗೀತೆಯಷ್ಟೇ ಸ್ಥಾನ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ ಅಶ್ವಿನಿ ಉಪಾಧ್ಯಾಯ ವಿರುದ್ಧ ‘ಹೈ’ ಗರಂ

Public TV
2 Min Read

ನವದೆಹಲಿ: ವಂದೇ ಮಾತರಂ ಗೀತೆಗೆ ಜನ ಗಣ ಮನ ರಾಷ್ಟ್ರಗೀತೆಯಷ್ಟೇ ಸ್ಥಾನ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ವಕೀಲ, ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ವಿರುದ್ಧ ದೆಹಲಿ ಹೈಕೋರ್ಟ್ ಗರಂ ಆಗಿದೆ. ಅರ್ಜಿ ಸಲ್ಲಿಕೆ ಬೆನ್ನಲ್ಲೇ ಮಾಧ್ಯಮಗಳಿಗೆ ದಾಖಲೆ ಬಿಡುಗಡೆ ಹಿನ್ನೆಲೆ ಕೋರ್ಟ್ ನಿಮ್ಮದು ಪ್ರಚಾರದ ತಂತ್ರವಲ್ಲದೇ ಇನ್ನೇನು ಎಂದು ಕೋರ್ಟ್‍ನಲ್ಲಿ ಛೀಮಾರಿ ಹಾಕಿತು.

ಅಶ್ವಿನಿ ಉಪಾಧ್ಯಾಯ ನಿನ್ನೆ ದೆಹಲಿ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇಂದು ಹಂಗಾಮಿ ಮುಖ್ಯ ನ್ಯಾ. ವಿಪಿನ್ ಸಂಘಿ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿ ಸಲ್ಲಿಕೆ ಬೆನ್ನಲ್ಲೇ ಮಾಧ್ಯಮಗಳಿಗೆ ದಾಖಲೆ ಮಾಡಿದಕ್ಕೆ ಆಕ್ರೋಶ ವ್ಯಕ್ತಪಡಿಸಿತು. ಪ್ರಚಾರದ ಕಾರಣಕ್ಕೆ ಇಂತಹ ಪಿಐಎಲ್‍ಗಳನ್ನು ಮಾಡುತ್ತೀರಾ ಎಂದು ಪ್ರಶ್ನೆ ಮಾಡಿತು. ಇದನ್ನೂ ಓದಿ: ಕುತುಬ್ ಮಿನಾರ್ ಬಳಿ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ – ASI ಖಡಕ್ ಉತ್ತರ

court order law

ಅಶ್ವಿನಿ ಉಪಾಧ್ಯಾಯ ಮನವಿ ಬಳಿಕ ಕೋರ್ಟ್ ವಿಚಾರಣೆ ಆರಂಭಿಸಿತು. ಈ ವೇಳೆ ವಾದ ಮಂಡಿಸಿದ ಅವರು, ವಂದೇ ಮಾತರಂ ಗೀತೆಯನ್ನು ನಿಯಂತ್ರಿಸುವ ಯಾವುದೇ ಕಾನೂನುಗಳಿಲ್ಲ, ರಾಷ್ಟ್ರೀಯ ಗೌರವ ಕಾಯಿದೆಯಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ. ಇದರಿಂದಾಗಿ ಸಿನಿಮಾ, ಧಾರವಾಹಿ ಹಾಗೂ ರಾಕ್ ಬ್ಯಾಂಡ್‍ಗಳಲ್ಲೂ ಈ ಗೀತೆಯನ್ನು ಮನಸ್ಸಿಗೆ ತೋಚಿದಂತೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಶ್ಯಾಮ್ ನಾರಾಯಣ್ ಚೌಕ್ಸೆ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚನೆ ಮಾಡಿ ವರದಿ ಸಲ್ಲಿಕೆಗೆ ಸೂಚಸಿದೆ. ಆದರೆ ಅದು ಯಾವುದೇ ಪ್ರಗತಿಯನ್ನು ಕಂಡಿಲ್ಲ. 2017 ರಲ್ಲಿ ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆ ಎಂದು ಗುರುತಿಸಿ ವಾರಕ್ಕೊಮ್ಮೆ ಶಾಲೆ ಕಾಲೇಜುಗಳಲ್ಲಿ ಹಾಡಲು ಸೂಚಿಸಿದೆ. ಆ ಆದೇಶ ಪಾಲನೆಯಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ

ಹೀಗಾಗಿ ವಂದೇ ಮಾತರಂ ಗೀತೆಯನ್ನು ನಾಟಕೀಯವಾಗಿ ಬಳಕೆ ಮಾಡಬಾರದು. ಅದಕ್ಕೆ ರಾಷ್ಟ್ರಗೀತೆಯಷ್ಟೇ ಗೌರವ ನೀಡಬೇಕು ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಬಾರದು ಅಲ್ಲದೇ ಶಾಲೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಹಾಡಲು ಸೂಚಿಸಬೇಕು ಎಂದು ಮನವಿ ಮಾಡಿದರು.

ವಾದ ಆಲಿಸಿದ ಪೀಠ, ಅರ್ಜಿ ವಿಚಾರಣೆ ನಡೆಸಲು ಅನುಮತಿ ನೀಡಿತು. ಅಲ್ಲದೇ ಎಲ್ಲ ಪ್ರತಿವಾದಿಗಳಿಗೆ ಪ್ರಕರಣ ಸಂಬಂಧ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿ ಆರು ವಾರಗಳಲ್ಲಿ ಸಮಯವನ್ನು ನೀಡಿದೆ. ನವೆಂಬರ್ 9 ರಂದು ಮತ್ತೆ ಈ ಬಗ್ಗೆ ವಿಚಾರಣೆ ನಡೆಯಲಿದ್ದು ಪ್ರಕರಣದ ವಿಸ್ತೃತ ವಿಚಾರಣೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *