ತಾಯಿಯ ಆಯ್ಕೆಯೇ ಅಂತಿಮ – 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಹೈಕೋರ್ಟ್ ಅಸ್ತು

Public TV
1 Min Read

ನವದೆಹಲಿ: 33 ವಾರಗಳ ಗರ್ಭಿಣಿಯ (Pregnant Women) ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್ (Delhi High Court) ಅನುಮತಿ ನೀಡಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಎಂ. ಸಿಂಗ್ (Prathiba M Singh), ತಾಯಿಯ ಆಯ್ಕೆಯೇ ಅಂತಿಮವಾಗಿದ್ದು, ಅದರ ಆಧಾರದ ಮೇಲೆ ಅನುಮತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

33 ವಾರಗಳ ಗರ್ಭಿಣಿಯಾಗಿರುವ 26 ವರ್ಷದ ಮಹಿಳೆಯೊಬ್ಬರು ತಮ್ಮ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಸಿಂಗ್, ಎನ್‌ಎನ್‌ಜೆಪಿ ಆಸ್ಪತ್ರೆ (LNJP Hospital) ವೈದ್ಯರ ಸಲಹೆ ಕೇಳಿದ್ದರು. ಆದರೆ ವರದಿಯಲ್ಲಿ ವೈದ್ಯರು ಗರ್ಭಪಾತವನ್ನು ತಿರಸ್ಕರಿಸಿದ್ದರು. ಇದನ್ನೂ ಓದಿ: ಭಾರತ ಜಾತ್ಯತೀತ ರಾಷ್ಟ್ರ ಎಂದ ಸುಪ್ರೀಂ – ಠಾಕೂರ್‌ ಚಂದ್ರರನ್ನು ʼಪರಮಾತ್ಮʼ ಎಂದು ಘೋಷಿಸಲು ಕೋರಿದ್ದ PIL ವಜಾ

ಬಳಿಕ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಮತ್ತು ಸ್ತ್ರೀರೋಗತಜ್ಞರಿಂದ ವರದಿ ಕೇಳಿದರು. ನರಶಸ್ತ್ರಚಿಕಿತ್ಸಕರು ಮಗುವಿಗೆ ಏನಾದರೂ ನ್ಯೂನತೆ ಇರುವ ಸಾಧ್ಯತೆಯಿದೆ, ಮಗುವಿನ `ಜೀವನದ ಗುಣಮಟ್ಟ’ವನ್ನು ಊಹಿಸಲು ಸಾಧ್ಯವಿಲ್ಲ ಎಂದು ವರದಿ ನೀಡಿದ್ದರು. ಆದರೆ ಮಗುವಿನ ಜನನದ ಬಳಿಕ ಸುಮಾರು 10 ವಾರಗಳ ನಂತರ ಕೆಲವು ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ತಿಳಿಸಿದ್ದರು.

ವರದಿ ಆಧರಿಸಿ ತೀರ್ಪು ನೀಡಿದ ನ್ಯಾ. ಪ್ರತಿಭಾ ಸಿಂಗ್, ಭಾರತದ ಕಾನೂನಿನಲ್ಲಿ ಮಹಿಳೆ ತಾನು ಗರ್ಭಾವಸ್ಥೆಯಲ್ಲಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುದು ಅಂತಿಮವಾಗಿ ಅವರೇ ನಿರ್ಧರಿಸಬೇಕು. ಈ ರೀತಿಯ ಪ್ರಕರಣಗಳಲ್ಲಿ ಮಹಿಳೆಯ ತೀವ್ರ ಸಂದಿಗ್ಧತೆಯನ್ನು ಎತ್ತಿ ತೋರಿಸುತ್ತವೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಗರ್ಭಪಾತ ಮಾಡಬಹುದು ಎಂದು ಆದೇಶಿಸಿದರು. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ

ತಾಯಿಯ ಆಯ್ಕೆ ಮೇಲೆ ಈ ಆದೇಶ ನೀಡಲಾಗುತ್ತಿದ್ದು, ಅರ್ಜಿದಾರ ಮಹಿಳೆ ಎನ್‌ಎನ್‌ಜೆಪಿ ಅಥವಾ ಇತರೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಬಹುದು ಎಂದು ತಿಳಿಸಿದರು. ವೈದ್ಯರು ಅಗತ್ಯ ನೆರವು ನೀಡುವಂತೆ ನಿರ್ದೇಶಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *