ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ – ಶನಿವಾರ, ಭಾನುವಾರ ಕಂಪ್ಲೀಟ್‌ ಬಂದ್

Public TV
2 Min Read

ನವದೆಹಲಿ: ಕೊರೊನಾ, ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೆ ಮುಂದಾಗಿದೆ.

ದೆಹಲಿಯಲ್ಲಿ ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ, ಭಾನುವಾರ ಕಂಪ್ಲಿಟ್ ಬಂದ್ ಇರಲಿದೆ. ವಾಣಿಜ್ಯ ಚಟುವಟಿಕೆಗಳಿಗೆ ಶೇ. 50 ರಷ್ಟು ಮಾತ್ರ ಅವಕಾಶವನ್ನು ನೀಡಲಾಗಿದೆ. ಕೋವಿಡ್ ನಿಂದಾಗಿ ಕೇಂದ್ರದ ಶೇ. 50 ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ನೀಡಲಾಗಿದೆ. ಕಾರ್ಯದರ್ಶಿ ರ‍್ಯಾಂಕ್‌ಗಿಂತ ಕೆಳಗಿನ ಶೇ.50 ರಷ್ಟು ಮಂದಿಗೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಈ ಪ್ರಕಾರ ದಿವ್ಯಾಂಗರು, ಗರ್ಭಿಣಿಯರು ಕಚೇರಿಗೆ ಹಾಜರಾಗುವುದರಿಂದ ವಿನಾಯ್ತಿ ನೀಡಲಾಗಿದೆ.

ಕಂಟೈನ್ಮೆಂಟ್ ವಲಯದ ಸಿಬ್ಬಂದಿ ಆ ವಲಯಗಳನ್ನು ಕೋವಿಡ್ ಕಂಟೈನ್ಮೆಂಟ್ ಮುಕ್ತವಾಗಿಸುವವರೆಗೆ ಕಚೇರಿಗೆ ಬರುವಂತಿಲ್ಲ. ಕಚೇರಿಯಲ್ಲಿ ಹೆಚ್ಚಿನ ಜನದಟ್ಟಣೆ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕಚೇರಿಯ ಒಟ್ಟಾರೆ ಸಂಖ್ಯೆಯ ಶೆ. 50 ರಷ್ಟು ಮಂದಿಗೆ ಮಾತ್ರವೇ ಕಚೇರಿಯಲ್ಲಿರಬೇಕು. ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಕೊರೊನಾ

ಕಳೆದ 24 ಗಂಟೆಗಳಲ್ಲಿ 4,099 ಹೊಸ ಕೇಸ್‍ಗಳು ಪತ್ತೆಯಾಗಿದೆ. ದೆಹಲಿಯ ಪಾಸಿಟಿವ್ ರೆಟ್ ಶೇ.6.46ಕ್ಕೆ ಏರಿದೆ. 6,288 ಕೊರೊನಾ ಸೋಂಕಿತರು ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದವರು ಹೋಂ ಐಸೋಲೇಶನ್‍ಲ್ಲಿ ಇದ್ದಾರೆ. ದೆಹಲಿಯಲ್ಲಿ ನಿನ್ನೆ ದಾಖಲೆ ಮಟ್ಟದಲ್ಲಿ ಕೊರೊನಾ ಸಾವಿನ ಸಂಖ್ಯೆ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂವನ್ನು ಸರ್ಕಾರ ಜಾರಿ ಮಾಡಿದೆ. ಇದನ್ನೂ ಓದಿ: ಕೇಂದ್ರದ ಶೆ.50ರಷ್ಟು ಸಿಬ್ಬಂದಿಗೆ ವರ್ಕ್ ಫ್ರಂ ಹೋಂ

ದೆಹಲಿ ಸರ್ಕಾರ ನಾಲ್ಕು ಬಣ್ಣಗಳಲ್ಲಿ ಕೊರೊನಾ ಅಪಾಯ ಗುರುತಿಸಿದೆ. ಸೋಂಕಿನ ಪ್ರಮಾಣ ಆಧರಿಸಿ ನಾಲ್ಕು ಹಂತಗಳಲ್ಲಿ ವಿಭಾಗವನ್ನು ಮಾಡಲಾಗಿದೆ. ಹಳದಿ, ಹಳದಿ ಮತ್ತು ಕಿತ್ತಳೆ ಮಿಶ್ರಣ, ಕಿತ್ತಳೆ ಮತ್ತು ರೆಡ್ ಝೋನ್ ಆಗಿ ವಿಂಗಡಿಸಲಾಗಿದೆ. ಸೋಂಕಿನ ಪ್ರಮಾಣ 0.5% ರಷ್ಟಿದ್ದರೇ ಹಳದಿ, 1-2 % ನಷ್ಟಿದ್ದರೇ ಹಳದಿ ಮತ್ತು ಕಿತ್ತಳೆ ಮಿಶ್ರಿತ ಬಣ್ಣ2-5% ವರೆಗೂ ಕಿತ್ತಳೆ, 5% ಹೆಚ್ಚಿದ್ದರೆ ರೆಡ್ ಝೋನ್ ಎಂದು ವಿಭಾಗಿಸಿದೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಿದೆ. ಟಫ್ ರೂಲ್ಸ್ ಜಾರಿಗೆ ರಾಜ್ಯ ಸರ್ಕಾರದ ಚಿಂತನೆ ಮಾಡುತ್ತಿದ್ದು, ಇಂದು ತಜ್ಞರ ಸಭೆ ಬಳಿಕ ಕಠಿಣ ನಿಯಮಗಳ ಜಾರಿಗೆ ತರಲು ಸರ್ಕಾರ ತಯಾರಿ ನೆಡೆಸಿದೆ. ದೆಹಲಿ, ಮಹಾರಾಷ್ಟ್ರ ಮಾಡೇಲ್ ಆಧರಿಸಿ ರಾಜ್ಯದಲ್ಲಿ ನಿಯಮಗಳು ಜಾರಿ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *