ದಾವಣಗೆರೆ ಉಪಚುನಾವಣೆ: ಸ್ಟ್ರಾಂಗ್ ರೂಂ ಓಪನ್ ಮಾಡಲು ಪರದಾಡಿದ ಅಧಿಕಾರಿಗಳು

0 Min Read

– ಬೀಗ ಒಡೆದು ಸ್ಟ್ರಾಂಗ್ ರೂಂ ಓಪನ್

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಹಿನ್ನೆಲೆ ಮತ ಎಣಿಕೆಗೆ ಸ್ಟ್ರಾಂಗ್ ರೂಂ ಓಪನ್ ಮಾಡಲು ಅಧಿಕಾರಿಗಳು ಪರದಾಡಿದ ಪ್ರಸಂಗ ನಡೆಯಿತು.

ಮತ ಎಣಿಕೆ ಹಿನ್ನೆಲೆ ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ, ಚುನಾವಣಾಧಿಕಾರಿ ಸಂತೋಷ್ ಪಾಟೀಲ್ ಆಗಮಿಸಿದ್ದರು. 25 ಜನ ಅಭ್ಯರ್ಥಿಗಳು, ಏಜೆಂಟ್‌ಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯುವ ಕಾರ್ಯ ನಡೆಯಿತು. ಸ್ಟ್ರಾಂಗ್ ರೂಂ ಓಪನ್ ಮಾಡಲು ಸಿಬ್ಬಂದಿ ಗೊಂದಲಗೊಂಡರು. ‘ಸರಿಯಾಗಿ ಕೀ ಓಪನ್ ಮಾಡು’ ಎಂದು ಸಿಬ್ಬಂದಿಗೆ ಡಿಸಿ ಕ್ಲಾಸ್ ತೆಗೆದುಕೊಂಡರು. ಕೊನೆಗೆ ಈಟಿ, ಸುತ್ತಿಗೆಯಿಂದ ಬಾಗಿಲು ಒಡೆದು ಸ್ಟ್ರಾಂಗ್ ರೂಂ ಓಪನ್ ಮಾಡಿದರು. ಇದನ್ನೂ ಓದಿ: ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ – ಬಿಜೆಪಿ ಅಭ್ಯರ್ಥಿಗೆ ಜಯಭೇರಿ

ಡಿಆರ್‌ಆರ್ ಶಾಲಾ ಆವರಣದಲ್ಲಿ ಮತ ಎಣಿಕೆ ಕಾರ್ಯ ಆಯೋಜನೆ ಮಾಡಲಾಗಿತ್ತು. ಮತ ಎಣಿಕಾ ಕೇಂದ್ರದಲ್ಲಿ ಮೂರು ವಿಭಾಗದಲ್ಲಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕಾ ಕೇಂದ್ರದ ನೂರು ಮೀಟರ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಒಳಗೆ ಯಾರು ಬರುವಂತಿಲ್ಲ. ಅಭ್ಯರ್ಥಿಗಳಿಗೆ ಕೌಂಟಿಂಗ್ ಬೂತ್‌ಗಳಲ್ಲಿ ಕೂರುವ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕಾ ಸಿಬ್ಬಂದಿ, ಅಭ್ಯರ್ಥಿ, ಏಜೆಂಟ್‌ಗಳಿಗೆ ಕ್ಯೂಆರ್ ಕೋಡ್ ಇರುವಂತಹ ಗುರುತಿನ ಪತ್ರ ನೀಡಲಾಗಿದೆ.‌

ಅಹಿತಕರ ಘಟನೆ ನಡೆಯದಂತೆ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದೆ. ನೀತಿಸಂಹಿತೆ ಜಾರಿ ಇರುವ ಹಿನ್ನೆಲೆ ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ. ಬೀಗ ಓಪನ್ ಮಾಡಲು ಸಿಬ್ಬಂದಿ ಹರಸಾಹಸಪಟ್ಟರು. ಕೊನೆಗೆ ಬಾಗಿಲು ಹೊಡೆದು ಬೀಗ ಓಪನ್ ಮಾಡಿದರು. ಮತ್ತೊಂದು ಸ್ಟ್ರಾಂಗ್ ರೂಂನ ಕೀ ಕೂಡ ಓಪನ್ ಆಗಲಿಲ್ಲ. ಅವರನ್ನೂ ಡಿಸಿ ತರಾಟೆಗೆ ತೆಗೆದುಕೊಂಡರು. ಕೊನೆಗೆ ರೂಂನ ಚಿಲಕ ಒಡೆದು ಬಾಗಿಲು ತೆರೆದರು. ನಂತರ ಅಂಚೆ ಮತ ಎಣಿಕೆ ಪ್ರಾರಂಭವಾಯಿತು.

ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಏ 9ರಂದು ಜಿದ್ದಾಜಿದ್ದಿನ ಚುನಾವಣೆ ನಡೆದಿತ್ತು. 2,31,072 ಒಟ್ಟು ಮತದಾರರಿದ್ದು, 1,58,131 (68.43%) ಮತ ಚಲಾವಣೆ ಆಗಿತ್ತು. 25 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: Assam Election Results | ಹ್ಯಾಟ್ರಿಕ್‌ ಗೆಲುವಿನ ಉತ್ಸಾಹದಲ್ಲಿ ಬಿಜೆಪಿ

Share This Article