ನಟ ಕೋಮಲ್ ವಿರುದ್ಧ ಸ್ವೆಟರ್ ಹಗರಣ ಆರೋಪ

Public TV
2 Min Read

ಬೆಂಗಳೂರು: ಸದಾ ಒಂದಿಲ್ಲೊಂದು ಭ್ರಷ್ಟಾಚಾರ ಕೂಪದ ಮೂಲಕ ಹೆಸರು ವಾಸಿಯಾಗಿರುವ ಬಿಬಿಎಂಪಿಗೆ ಇದೀಗ ಮತ್ತೊಂದು ಭ್ರಷ್ಟಾಚಾರ ಸುತ್ತಿಕೊಂಡಿದ್ದು, ಈ ಹಗರಣಕ್ಕೆ ಹಾಸ್ಯ ನಟ ಕೋಮಲ್ ಸಾಥ್ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

2020-21 ಸಾಲಿನಲ್ಲಿ ಪಾಲಿಕೆ ಶಾಲೆಗಳಿಗೆ ಸ್ವೆಟರ್ ಪೂರೈಕೆ ಮಾಡಲು ನಿರ್ಧಾರ ಮಾಡಲಾಗಿತ್ತು. ತರಾತುರಿಯಲ್ಲಿ ಸ್ವೆಟರ್ ಪೂರೈಕೆ ಮಾಡ್ಬೇಕಾಗಿರೋದ್ರಿಂದ ಟೆಂಡರ್ ಕರೆಯದೇ 4ಜಿ ವಿನಾಯಿತಿ ಪಡೆದು ಕರ್ನಾಟಕ ಕೈಮಗ್ಗ ನಿಗಮಕ್ಕೆ ಸ್ವೆಟರ್‍ಗಳನ್ನು ಸರಬರಾಜು ಮಾಡಲು ಆದೇಶವೂ ಆಗಿತ್ತು. ಆದರೆ ಅದನ್ನು ದುರುಪಯೋಗ ಮಾಡಿಕೊಳ್ಳಲಾಗಿದ್ದು, ಬಿಬಿಎಂಪಿಗೆ ನಟ ಕೋಮಲ್ ಸಹ ಸಾಥ್ ನೀಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪ ಮಾಡಿದೆ. ಇದನ್ನೂ ಓದಿ: ತಟ್ಟೆಯಲ್ಲಿ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜಿ ಕೊಕೇನ್ ಸೇವಿಸಿದ್ದ ರಾಗಿಣಿ 

ದಲಿತ ಸಂಘರ್ಷದ ರಾಜ್ಯಾಧ್ಯಕ್ಷ ರಘು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇಷ್ಟು ದಿನ ಕೇವಲ ಬಿಬಿಎಂಪಿ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗುತ್ತಿದ್ದರು. ಆದ್ರೆ ಈ ಬಾರಿ ಪಾಲಿಕೆಯ ಭ್ರಷ್ಟಚಾರ ಸ್ಯಾಂಡಲ್‍ವುಡ್‍ಗೆ ಅಂಟಿಕೊಂಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 16,167 ಮಕ್ಕಳಿಗೆ ಸ್ವೆಟರ್ ಪೂರೈಕೆ ಮಾಡುವ ಜವಾಬ್ದಾರಿಯನ್ನು ನಟ ಜಗ್ಗೇಶ್ ತಮ್ಮ ಕೋಮಲ್ ಹೊತ್ತಿದ್ದರು. ಅವರಿಗೆ 1.75 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಆರ್ ಅಶೋಕ್, ನಟ ಜಗ್ಗೇಶ್ ಅವರು ಒತ್ತಡ ಹಾಕಿಸಿ ಹಣ ಬಿಡುಗಡೆ ಮಾಡಿಸಿದ್ದರು. ಆದರೆ ಕೋವಿಡ್ ಕಾರಣದಿಂದ ಕಳೆದ ವರ್ಷ ತರಗತಿಗಳೇ ನಡೆದಿಲ್ಲ. ಸ್ವೆಟರ್ ಹಂಚಿಕೆ ಮಾಡದೆಯೇ 1.75 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ನಮ್ಮನ್ನು ಬಿಟ್ಟುಬಿಡಿ ಎಂದು ಕಣ್ಣೀರಿಟ್ಟ ಸಂಜನಾ ತಾಯಿ

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಕೋಮಲ್, ನನ್ನ ಮೇಲೆ ಬಂದಿರೋ ಆರೋಪಗಳೆಲ್ಲವೂ ಸುಳ್ಳು. ಅಸಲಿಗೆ ನಾನು ಟೆಂಡರ್ ಪಡೆದೇ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಹಾಸ್ಯ ನಟ ಕೋಮಲ್ ಇತ್ತೀಚೆಗೆ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಚಿಕಿತ್ಸೆಗೆ ಹಣದ ಅವಶ್ಯಕತೆ ಇತ್ತು. ಆದರೆ ಟೆಂಡರ್ ಪಡೆದ ಕೋಮಲ್ ಅವರಿಗೆ ಹಣ ನೀಡೋಕೆ ಬಿಬಿಎಂಪಿ ಅಧಿಕಾರಿಗಳು ಲಂಚ ಕೇಳ್ತಿದ್ದಾರೆ ಎಂದು ನಟ ಜಗ್ಗೇಶ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದರು. ಇದಾದ ಬಳಿಕ ತಮ್ಮ ಪ್ರಭಾವ ಬಳಸಿ, ಕಂದಾಯ ಸಚಿವ ಆರ್ ಅಶೋಕ್ ಅವರ ಮೂಲಕ ಮತ್ತು ಬಿಬಿಎಂಪಿ ವಿಶೇಷ ಆಯುಕ್ತರ ಮೂಲಕ ಒತ್ತಡ ಹಾಕಿಸಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *