ಫೈನಲ್ ತಲುಪಿದ ಕನ್ನಡಿಗ, ಈಜುಪಟು ಶ್ರೀಹರಿ ನಟರಾಜ್

Public TV
1 Min Read

ಬರ್ಮಿಂಗ್‍ಹ್ಯಾಮ್: ಈಜುಪಟು, ಕನ್ನಡಿಗ ಶ್ರೀಹರಿ ನಟರಾಜ್ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಫೈನಲ್‍ಗೆ ಪ್ರವೇಶ ಮಾಡಿದ್ದಾರೆ.

100 ಮೀಟರ್ ಬ್ಯಾಕ್ ಸ್ಟ್ರೋಕ್‍ನ ಹೀಟ್ಸ್‌ನ ಸೆಮಿಫೈನಲ್ಸ್‌ನಲ್ಲಿ ಶ್ರೀಹರಿ ನಟರಾಜ್(21) ಅವರು 4ನೇ ಸ್ಥಾನ ಪಡೆದಿದ್ದು, ಫೈನಲ್ ತಲುಪಿದ್ದಾರೆ.

ಶ್ರೀಹರಿ ಅವರು 54.55 ಸೆಕೆಂಡ್‍ಗಳಲ್ಲಿ ಗುರಿ ಮುಟ್ಟಿದ್ದು, ಸೆಮಿಫೈನಲ್ ಹೀಟ್ 2 ರಲ್ಲಿ 4ನೇ ಸ್ಥಾನ ಮತ್ತು ಮೂರನೇ ಸ್ಥಾನ ಹಾಗೂ ಒಟ್ಟಾರೆ 8 ಕ್ವಾಲಿಫೈಯರ್‌ಗಳಲ್ಲಿ 7ನೇ ಸ್ಥಾನ ಗಳಿಸಿದರು. ಇದನ್ನೂ ಓದಿ:  ಅಂಬುಲೆನ್ಸ್ ಟಯರ್ ಬದಲಿಸಲು ಸಹಾಯ ಮಾಡಿ ರೇಣುಕಾಚಾರ್ಯ 

ಈ ಮೂಲಕ ಶ್ರೀಹರಿ ಅವರು ಬರ್ಮಿಂಗ್‍ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮೊದಲ ದಿನ ಫೈನಲ್‍ಗೆ ತಲುಪಿದ ಭಾರತದ ಏಕೈಕ ಅಥ್ಲೆಟ್ ಆಗಿದ್ದಾರೆ.

Indian swimmer Srihari Nataraj rewrites national record but fails to make cut for Tokyo 2020- The New Indian Express

ಶ್ರೀಹರಿ ಅವರು ಬೆಂಗಳೂರು ಮೂಲದ ಈಜುಪಟು. ವೈಯಕ್ತಿಕವಾಗಿ 53.77 ಸೆಕೆಂಡ್‍ನಲ್ಲಿ ಗುರಿಮುಟ್ಟಿದ ಬೆಸ್ ದಾಖಲೆ ಹೊಂದಿದ್ದಾರೆ. ಅಂತಿಮ ಸ್ಪರ್ಧೆ ಜುಲೈ 31ರ ಮಧ್ಯರಾತ್ರಿ 1:30ಕ್ಕೆ ನಡೆಯಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *