– ಹಿಂದೂ ಮಂದಿರ ನಿರ್ಮಾಣಕ್ಕೆ ಷರತ್ತು ಹಾಕಿ ತಡೆಯುತ್ತಾರೆ
– ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ ಎಂದ ನಗರಸಭೆ
ಬಾಗಲಕೋಟೆ: ಅನುಮತಿ ಇಲ್ಲದೇ ವಾರ್ಡ್ ನಂ.1 ರಲ್ಲಿ ಮಸೀದಿ (Mosque) ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ (BJP) ಕಾರ್ಯಕರ್ತರು ನಗರ ಸಭೆ ಕಾರ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಈ ಮಸೀದಿ ನಿರ್ಮಾಣಕ್ಕೆ ನಗರ ಸಭೆಯಿಂದ (Bagalkote City Municipal Council) ಯಾವುದೇ ಅನುಮತಿ ಪಡೆದಿಲ್ಲ. ನಿರ್ಮಾಣ ಕಾಮಗಾರಿ ವಿರುದ್ಧ ನಗರಸಭೆ ಆಯುಕ್ತರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಪೊಲೀಸರು (Police) ಹಿಂದೂ ಮಂದಿರಗಳ ನಿರ್ಮಾಣದ ವೇಳೆ ಹತ್ತಾರು ಷರತ್ತು ಹಾಕಿ ತಡೆಯುತ್ತಾರೆ. ಆದರೆ ಇಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ನಗರದಲ್ಲಿನ ಅನಧಿಕೃತ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬಾರದು. ಕೂಡಲೇ ಆಯುಕ್ತರು ತಡೆಯದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಹಿಂದು ಜಾಗರಣ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಎಚ್ಚರಿಕೆ ನೀಡಿದ್ದಾರೆ ಇದನ್ನೂ ಓದಿ: ಮತಾಂತರ ಮಾಸ್ಟರ್ಮೈಂಡ್ ಛಂಗುರ್ ಬಾಬಾನ 5 ಕೋಟಿ ಮೌಲ್ಯದ ಮನೆ ಉಡೀಸ್ – ಬುಲ್ಡೋಜರ್‌ನಿಂದ ನೆಲಸಮ
ಹಳೆ ಬಾಗಲಕೋಟೆ ಹಾಗೂ ನವನಗರ ಎರಡು ಕಡೆ 20 ಕ್ಕೂ ಅಧಿಕ ಮಸೀದಿಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಇವರ ಆರೋಪ. ಖಾಸಗಿ ಭೂಮಿಯಲ್ಲಿ ಮಸೀದಿ ನಿರ್ಮಾಣ ಮಾಡಬೇಕಾದರೂ ಅನುಮತಿ ಕಡ್ಡಾಯ. ಆದರೆ ಇಲ್ಲಿ ಮಸೀದಿ ಕಟ್ಟುತ್ತಿದ್ದರೂ ಅದಕ್ಕೆ ಅನುಮತಿ ಪಡೆಯುತ್ತಿಲ್ಲ. ಇನ್ನೊಂದು ಕಡೆ ಇದೆಲ್ಲ ಗೊತ್ತಿದ್ದರೂ ನಗರಸಭೆ ಆಯುಕ್ತರು, ಸಿಬ್ಬಂದಿ ಕಂಡು ಕಾಣದಂತಿರುತ್ತಾರೆ ಎಂದು ದೂರಿದ್ದಾರೆ.
ಮಸೀದಿಗಳ ನಿರ್ಮಾಣದ ಬಗ್ಗೆ ನಗರಸಭೆ ಬಿಜೆಪಿ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದೆ. ಅನಧಿಕೃತ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬೇಡಿ ಎಂದು ಆಯುಕ್ತರಿಗೆ ತಿಳಿಸಿದ್ದಾರೆ. ಆದರೂ ಆಯುಕ್ತರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತದ ಹಾನಿಯ ಒಂದೇ ಒಂದು ಫೋಟೋ ತೋರಿಸಿ – ವಿದೇಶಿ ಮಾಧ್ಯಮಗಳ ವಿರುದ್ಧ ದೋವಲ್ ಕೆಂಡಾಮಂಡಲ
ನಗರಸಭೆ ಆಯುಕ್ತ ವಾಸಣ್ಣ ಅವರನ್ನು ಕೇಳಿದಾಗ, ನಾವು ಈ ಬಗ್ಗೆ ಯಾವುದೇ ಅನುಮತಿ ಕೊಟ್ಟಿಲ್ಲ. ಅವರು ಅನುಮತಿ ಕೇಳಿದರೂ ಅನುಮತಿ ಕೊಟ್ಟಿಲ್ಲ. ಆದರೂ ನಗರಸಭೆ ರಜಾ ದಿನದಲ್ಲಿ ಇಂತಹ ಕೃತ್ಯ ಮಾಡಿದ್ದಾರೆ. ಈ ಬಗ್ಗೆ ನೋಟಿಸ್ ಕೊಟ್ಟಿದ್ದೇವೆ. ಈಗಲೂ ನಾವು ನಮ್ಮ ಎಂಜಿನಿಯರ್ ಮೂಲಕ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಅನಧಿಕೃತ ಮಸೀದಿ ನಿರ್ಮಾಣ ಕಾರ್ಯ ಹೀಗೆ ಬಿಟ್ಟರೆ ಮುಂದೆ ಮತ್ತಷ್ಟು ಗಲಾಟೆ ನಡೆಯುವ ಸಾಧ್ಯತೆ ಇದೆ. ಆದಷ್ಟು ಬೇಗ ನಗರಸಭೆ ಅಧಿಕಾರಿಗಳು ಸೂಕ್ತ ತೀರ್ಮಾನ ಕೈಗೊಂಡು ವಿವಾದವಾಗದಂತೆ ತಡೆಯಬೇಕಿದೆ.