ಬಿಜೆಪಿ ಹೈಕಮಾಂಡ್‍ಗೆ ಕರ್ನಾಟಕದ ಸಿಎಂಗಳೆಂದರೆ ಕೈ ಗೊಂಬೆ ಇದ್ದಹಾಗೆ ಆಡಿಸಿಯೂ ನೋಡ್ತಾರೆ, ಬೀಳಿಸಿಯೂ ನೋಡ್ತಾರೆ: ಕಾಂಗ್ರೆಸ್

Public TV
2 Min Read

ಬೆಂಗಳೂರು: ಬಿಜೆಪಿ ಹೈಕಮಾಂಡ್‍ಗೆ ಕರ್ನಾಟಕದ ಸಿಎಂಗಳೆಂದರೆ ಕೈ ಗೊಂಬೆ ಇದ್ದಹಾಗೆ ಆಡಿಸಿಯೂ ನೋಡುತ್ತಾರೆ, ಬೀಳಿಸಿಯೂ ನೋಡುತ್ತಾರೆ ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಟ್ವೀಟ್‍ನಲ್ಲಿ ಏನಿದೆ:
ಬಿಜೆಪಿ ಹೈಕಮಾಂಡ್‍ಗೆ ಕರ್ನಾಟಕದ ಸಿಎಂಗಳೆಂದರೆ ಕೈ ಗೊಂಬೆ ಇದ್ದಹಾಗೆ, ಆಡಿಸಿಯೂ ನೋಡುತ್ತಾರೆ, ಬೀಳಿಸಿಯೂ ನೋಡುತ್ತಾರೆ! ಯಡಿಯೂರಪ್ಪ ಅವರಂತಹ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳುಹಿಸಿರುವಾಗ ಬೊಂಬೆ ಸಿಎಂ ಬೊಮ್ಮಾಯಿ ಅವರು ಯಾವ ಲೆಕ್ಕ! ಸಂತೋಷ ಕೂಟಕ್ಕೆ ಸಂತೋಷಪಡಿಸುವ ಬೊಮ್ಮಾಯಿಯವರ ಪ್ರಯತ್ನ ವಿಫಲವಾಗಿದೆ. ಹಗರಣ ಮತ್ತು ವೈಫಲ್ಯಗಳ ಕೊಡ ತುಂಬಿದೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಆಸ್ತಿ ಸೀಜ್: ಅಲೋಕ್ ಕುಮಾರ್

ಯಡಿಯೂರಪ್ಪ ಅವರನ್ನು ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವದ. ಸಂಭ್ರಮದ ಸಂದರ್ಭದಲ್ಲೇ ಕಣ್ಣೀರು ಹಾಕಿಸಿ ಕಳುಹಿಸಲಾಗಿತ್ತು. ಈಗ ಬಸವರಾಜ ಬೊಮ್ಮಾಯಿ ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸುವ ವೇದಿಕೆ ಸಜ್ಜಾಗುತ್ತಿದೆ. 1 ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸ ಕೈಗೊಂಡರೂ ಕೈಗೊಂಬೆ ಸಿಎಂಗೆ ಸಂಪುಟ ಸಂಕಟ ಬಗೆಹರಿಸಲಾಗದ್ದೇ ಇದಕ್ಕೆ ಸಾಕ್ಷಿ! ಕರ್ನಾಟಕದ ಸಿಎಂಗಳು ಹೈಕಮಾಂಡ್ ಕೈಗೊಂಬೆಗಳು. ಬಿಎಸ್‍ವೈರನ್ನು ಹೇಳದೇ ಕೇಳದೇ ಮನೆಗೆ ಕಳಿಸಿದ್ರು. ಇನ್ನು ಬೊಮ್ಮಾಯಿ ಯಾವ ಲೆಕ್ಕ. ಇದನ್ನೂ ಓದಿ: ಸಿಎಂ ಬದಲಾವಣೆ ಬಗ್ಗೆ ಯಾರೂ ಚರ್ಚೆ ಮಾಡಬಾರ್ದು, ಇದನ್ನು ಇಲ್ಲಿಗೇ ನಿಲ್ಲಿಸಿ: ಬಿಎಸ್‍ವೈ

ಅಶೋಕ್ ಅವರೇ, ಬಿಎಸ್‍ವೈ ಅವರು ಪುತ್ರನಿಗೆ ಟಿಕೆಟ್ ಘೋಷಿಸಿ ಹೈಕಮಾಂಡ್ ಬೆದರಿಕೆಗೆ ಯೂಟರ್ನ್ ಹೊಡೆದರು ಹೀಗಿರುವಾಗ ತಮ್ಮ ಅಭಿಪ್ರಾಯಕ್ಕೆ ಬೆಲೆ ಇದೆಯೇ? ನಿಮಗಿಂತ ಜೂನಿಯರ್ ಅಶ್ವಥ್ ನಾರಾಯಣರಿಗೆ ಇರುವ ಪ್ರಾಮುಖ್ಯತೆ ನಿಮಗೆ ಇಲ್ಲದಾಗುತ್ತಿತ್ತೇ? ಅಂದಹಾಗೆ ಸಿಎಂ ಎಂಬ ಮಾವಿನ ಹಣ್ಣಿಗಾಗಿ ಮರದ ಕೆಳಗೆ ತಾವೂ ಕಾದು ಕುಳಿತಿದ್ದೀರಿ ಅಲ್ಲವೇ. 40% ಸರ್ಕಾರದ ಹಗರಣಗಳ ಸರಮಾಲೆ ಬೆಳೆಯುತ್ತಲಿದೆ. ಸುಪ್ರೀಂ ಕೋರ್ಟ್ ನಿರ್ದೇಶಿಸಿದ ನಿಯಮಾವಳಿಗಳನ್ನು ಉಲ್ಲಂಘಿಸಿ (ಭ್ರಷ್ಟಾಚಾರ ಡೆವಲಪ್ಮೆಂಟ್ ಅಥಾರಿಟಿ) ಬಿಡಿಎ ಗೃಹಸಚಿವರು ಸೇರಿದಂತೆ ಬಿಜೆಪಿಗರಿಗೆ ಬೃಹತ್ ನಿವೇಶನ ಮಂಜೂರು ಮಾಡಿದ್ದು ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ. ಬೊಮ್ಮಾಯಿ ಅವರೇ, ಇದೇನಾ ನಿಮ್ಮ ಪ್ರಾಮಾಣಿಕ ಆಡಳಿತ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *