ಮೋದಿ ಮನೆ ಹೊರಗಿನ ನಾಯಿಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ಎಂಎಲ್‌ಸಿ

Public TV
2 Min Read

ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಎಂಎಲ್‌ಸಿ ಅಶೋಕ್‌ ಎ ಜಗತಾಪ್‌ ಅಲಿಯಾಸ್‌ ಭಾಯ್ ಜಗತಾಪ್ ಚುನಾವಣಾ ಆಯೋಗದ (Election Commission) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ವಿವಾದಕ್ಕೆ ಗುರಿಯಾಗಿದ್ದಾರೆ. ʻಚುನಾವಣಾ ಆಯೋಗ ಮೋದಿ ಮನೆಯ ಹೊರಗಿನ ನಾಯಿಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ ಎಂದು ಜಗತಾಪ್ (Bhai Jagtap) ನಾಲಿಗೆ ಹರಿಬಿಟ್ಟಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ (Maharashtra Assembly Elections Result) ಕುರಿತು ಮಾತನಾಡಿದ ಭಾಯ್‌ ಜಗತಾಪ್‌, ಚುನಾವಣಾ ಆಯೋಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಹೇಳಿಕೆಗೆ ಕ್ಷಮೆ ಯಾಚಿಸಲ್ಲ ಎಂದು ಮೊಂಡುತನ ತೋರಿದ್ದಾರೆ. ಇದನ್ನೂ ಓದಿ: ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನೂ ಮುಸ್ಲಿಂ ಮದುವೆಗಳಿಗೆ ಹೋಗ್ತಿನಿ – ಚಂದ್ರಶೇಖರ ಸ್ವಾಮೀಜಿ ಯೂಟರ್ನ್‌

ನನ್ನ ಹೇಳಿಕೆಗೆ ನಾನು ಸ್ವಲ್ಪವೂ ಕ್ಷಮೆಯಾಚಿಸಲ್ಲ. ಆಯೋಗವು ಮೋದಿ ಮತ್ತು ಇತರ ಮಂತ್ರಿಗಳ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರೆ ನಾನು ಹೇಳಿದ್ದು ಸರಿ ಎಂದಿದ್ದಾರೆ. ಚುನಾವಣಾ ಆಯೋಗ ಇರುವುದು ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಬಲಪಡಿಸಲು ಹೊರತು ಯಾರ ಸೇವೆ ಮಾಡಲು ಅಲ್ಲ. ಹಾಗಾಗಿ ನಾನು ಕ್ಷಮೆಕೇಳಲ್ಲ ಎಂದಿದ್ದಾರೆ. ಇದನ್ನೂ ಓದಿ: Cyclone Fengal | ಚೆನ್ನೈ ಏರ್‌ಪೋರ್ಟ್‌ನಿಂದ 13 ವಿಮಾನಗಳ ಯಾನ ರದ್ದು

ಚುನಾವಣಾ ಆಯೋಗ ಇರೋದು ಪ್ರಜಾಪ್ರಭುತ್ವ ಬಲಪಡಿಸಲು, ದುರದೃಷ್ಟವಶಾತ್ ಅವುಗಳನ್ನು ದುರುಪಯೋಗ ಪಡಿಸಿಕೊಳ್ಳುವಂತಹ ಕೆಲಸ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ನಡೆಯುತ್ತಿವೆ. ಮಹಾರಾಷ್ಟ್ರದಲ್ಲಿ ರಾಜ್ಯದ ಜನರು ಮಹಾಯುತಿ ಆಡಳಿತವನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಆದ್ರೂ ಜಯ ಸಿಕ್ಕಿದೆ ಅಂದ್ರೆ, ಇದರ ಸಂಪೂರ್ಣ ಕ್ರೆಡಿಟ್ ಇವಿಎಂಗಳಿಗೆ ಸಲ್ಲುತ್ತದೆ. ಇಲ್ಲಿ ಇವಿಎಂಗಳನ್ನು ತಿರುಚಲಾಗಿದೆ, ಕೆಲವು ಸ್ಥಳಗಳಲ್ಲಿ ಹ್ಯಾಕ್ ಮಾಡಲಾಗಿದೆ ಎಂದು ಒತ್ತಿ ಹೇಳಿದ್ದಾರೆ.

ಮುಂಬೈ ಪೊಲೀಸರಿಗೆ ಬಿಜೆಪಿ ದೂರು:
ಚುನಾವಣಾ ಆಯೋಗದ ವಿರುದ್ಧ ನಾಲಿಗೆ ಹರಿಬಿಟ್ಟ ಜಗತಾಪ್‌ ವಿರುದ್ಧ ಬಿಜೆಪಿ ನಾಯಕರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಚುನಾವಣಾ ಆಯೋಗಕ್ಕೂ ಪತ್ರಬರೆದಿದ್ದಾರೆ. ಇದನ್ನೂ ಓದಿ: ವಾರಣಾಸಿ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಬಳಿ ಆಕಸ್ಮಿಕ ಬೆಂಕಿ – 200 ದ್ವಿಚಕ್ರ ವಾಹನಗಳು ಭಸ್ಮ

ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ, ಸಾಂವಿಧಾನಿಕ ಸಂಸ್ಥೆಯನ್ನು ಅವಮಾನಿಸುವುದು, ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ. ಈಗ ಅವರು ಚುನಾವಣಾ ಆಯೋಗವನ್ನ ಅನುಮಾನಿಸುತ್ತಿದ್ದಾರೆ. ಜಾರ್ಖಂಡ್, ಜಮ್ಮು-ಕಾಶ್ಮೀರ, ವಯನಾಡ್, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಚುನಾವಣೆ ನಡೆದಾಗ ಚುನಾವಣಾ ಆಯೋಗ ಚೆನ್ನಾಗಿತ್ತು. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಚೆನ್ನಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article