ಕಾಂಗ್ರೆಸ್ ಬ್ರಿಟಿಷ್ ವಂಶಾವಳಿ – ಬೇರು ಸಮೇತ ಕಿತ್ತು ಹಾಕಬೇಕಿದೆ: ಬೊಮ್ಮಾಯಿ

Public TV
1 Min Read

ಬೆಳಗಾವಿ: ಕಾಂಗ್ರೆಸ್ (Congress) ಬ್ರಿಟಿಷ್ (British) ಸಾಮ್ರಾಜ್ಯದ ವಂಶಾವಳಿ, ಇದು ಸಣ್ಣ ಪ್ರಮಾಣದಲ್ಲಿ ದೇಶದಲ್ಲಿ ಉಳಿದುಕೊಂಡಿದೆ. ಆ ಬ್ರಿಟಿಷ್ ಸಾಮ್ರಾಜ್ಯದ ವಂಶಾವಳಿಯನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ. ಆ ಕುಟುಂಬದಲ್ಲಿ ಆ ವಂಶಾವಳಿ ಆಡಳಿತ ನಡೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದ್ದಾರೆ.

ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ನಡೆದ ಬಿಜೆಪಿ (BJP) ವಿಜಯ ಸಂಕಲ್ಪಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷರು ನಮ್ಮ ವೈರಿ. ಸ್ವಾತಂತ್ರ‍್ಯ ಬಂದ ಬಳಿಕ ಬಡತನ ನಮ್ಮ ವೈರಿಯಾಗಿತ್ತು. ಅದನ್ನು ಹೋಗಲಾಡಿಸಲು ಏನೂ ಮಾಡಲಿಲ್ಲ. ಆ ಕಾರ್ಯ ಈಗ ಮೋದಿ (Narendra Modi) ಮಾಡುತ್ತಿದ್ದಾರೆ ಎಂದು ನುಡಿದರು.

ರಾಯಣ್ಣನಂತಹ ಗುಣಧರ್ಮ ಮೋದಿಯಲ್ಲಿ ಇದೆ. ರಾಯಣ್ಣನಂತೆ ಮೋದಿ ಹೋರಾಟ ಮಾಡುತ್ತಿದ್ದಾರೆ. ಅದುವೆ ಕಾಂಗ್ರೆಸ್ ಮುಕ್ತ ಹೋರಾಟ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಯಾರನ್ನೂ ಸೋಲಿಸುವುದು ನಮ್ಮ ಅಜೆಂಡಾ ಅಲ್ಲ: ಜನಾರ್ದನ ರೆಡ್ಡಿ

ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಎನ್ನುತ್ತಾರೆ. ಆದರೆ ಅವರು ಮಾತ್ರ ಮುಂದೆ ಬಂದಿದ್ದಾರೆಯೇ ಹೊರತು, ಹಿಂದುಳಿದ ವರ್ಗದವರನ್ನು ಅಲ್ಲಿಯೇ ಇಟ್ಟಿದ್ದೀರಿ. ಭಾಷಣದಿಂದ ಸಾಮಾಜಿಕ ನ್ಯಾಯ ಬರುವುದಿಲ್ಲ. ಮೀಸಲಾತಿ ಹೆಚ್ಚಿಸಬೇಕು. ಆ ದಿಟ್ಟ ನಿಲುವು ಮಾಡಿದ್ದು ನಮ್ಮ ಸರ್ಕಾರ. ನಾವು ಮಾಡಿದ ಮೇಲೆ ಮೊಸರಿನಲ್ಲಿ ಕಲ್ಲು ಹುಡುಕುತ್ತಿದ್ದೀರಿ ಎಂದು ಆರೋಪಿಸಿದರು.

ನೀವು ಎಸ್‌ಸಿ, ಎಸ್‌ಟಿ ಜನರನ್ನು 5 ವರ್ಷ ಬಾವಿಯಲ್ಲಿ ಇಟ್ಟಿದ್ದೀರಿ. ಎಲೆಕ್ಷನ್ ಬಂದಾಗ ಮಾತ್ರ ಅವರನ್ನು ಮೇಲೆ ಎತ್ತುತ್ತೀರಿ. ಎಲೆಕ್ಷನ್ ಮುಗಿದ ಬಳಿಕ ಮತ್ತೆ ಅದೇ ಬಾವಿಗೆ ಹಾಕುತ್ತೀರಿ ಎಂದು ಸಿಎಂ ಬೊಮ್ಮಾಯಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶೂರ, ವೀರರಿಗೆ ಜನ್ಮ ನೀಡಿದ ನೆಲ ಕರ್ನಾಟಕ – ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣನೆ

Share This Article
Leave a Comment

Leave a Reply

Your email address will not be published. Required fields are marked *