ಸಿದ್ದರಾಮಯ್ಯ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಕುಸಿತ – ಇದು ಬಿಎಸ್‍ವೈ ಬ್ರೇಕಿಂಗ್ ನ್ಯೂಸ್

Public TV
1 Min Read

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಸಿದ್ದರಾಮಯ್ಯ ಸರ್ಕಾರ ವೈಫಲ್ಯವನ್ನು ತೋರಿಸುವ ಅಂಶಗಳಿರುವ 5 ನಿಮಿಷಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

ಯಡಿಯೂರಪ್ಪ ಬೈಟ್ ಉಪಯೋಗಿಸಿ ಗ್ರಾಫಿಕ್ಸ್ ಮಾಡಿ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

ಆರ್ಥಿಕ ವ್ಯವಸ್ಥೆ ಕುಸಿತ, ಕೃಷಿ ಬೆಳವಣಿಗೆ ಕುಸಿತ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ವಿಶ್ವಾಸದ್ರೋಹವೆಸಗುತ್ತಿದೆ. ನಿರೀಕ್ಷೆ ಹುಸಿಗೊಳಿಸುವಲ್ಲಿ ನಂಬರ್ 1 ಆಗಿದ್ದು ಅಭಿವೃದ್ಧಿಗೆ ಬ್ರೇಕ್ ಬಿದ್ದಿದೆ ಎಂದು ವಿವರಿಸುವ ಅಂಕಿ ಅಂಶಗಳು ಈ ವಿಡಿಯೋದಲ್ಲಿದೆ.

ಗುರುವಾರ ಟ್ವೀಟ್ ಮಾಡಿ ಶುಕ್ರವಾರ ಸಂಜೆ 5 ಗಂಟೆಗೆ ಬ್ರೇಕಿಂಗ್ ನ್ಯೂಸ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೆ ಇಂದು ಸಂಜೆ 5 ಗಂಟೆಗೆ ರಿಲೀಸ್ ಮಾಡದೇ 5.44ಕ್ಕೆ ವಿಡಿಯೋ ಬಿಡುಗಡೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *