CWG 2022: 40ರ ಹುಮ್ಮಸ್ಸಿನಲ್ಲೂ TTಯಲ್ಲಿ ಚಿನ್ನ ಗೆದ್ದ ಅಚಂತ ಶರತ್

Public TV
1 Min Read

ಲಂಡನ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತೀಯ ಕ್ರೀಡಾಪಟುಗಳು ಕೊನೆಯ ದಿನವೂ ಪದಕಗಳ ಬೇಟೆಯಾಡುತ್ತಿದ್ದಾರೆ. ಟೇಬಲ್ ಟೆನ್ನಿಸ್ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ 40 ವಯಸ್ಸಿನ ಅಚಂತ್ ಶರತ್ ಕಮಲ್ ಚಿನ್ನ ಗೆದ್ದು ತೋರಿಸಿದ್ದಾರೆ.

ಶರತ್ ಎನ್‌ಇಸಿ ಅರೇನಾದಲ್ಲಿ 11-13, 11-7, 11-2, 11-6, 11-8 ಅಂಕಗಳ ಮೂಲಕ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಸೋಲಿಸಿದರು. 2006ರಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದಿದ್ದ ಶರತ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 13 ಪದಕಗಳನ್ನು ಗೆದ್ದುಕೊಂಡಿದ್ದಾರೆ.

TT, ಬ್ಯಾಡ್ಮಿಂಟನ್‌ನಲ್ಲಿ ಕಂಚು:
ಭಾರತೀಯ ಟೇಬಲ್ ಟೆನ್ನಿಸ್ ಸೆನ್ಸೇಷನ್ ಸತ್ಯನ್ ಜ್ಞಾನಶೇಖರನ್ ಅವರು ಇಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ಪುರುಷರ ಸಿಂಗಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಸತ್ಯನ್ ಅವರು ಇಂಗ್ಲೆಂಡ್‌ನ ಪಾಲ್ ಡ್ರಿಂಕ್‌ಹಾಲ್ ಅವರನ್ನು ಸೋಲಿಸಿ, ಪಂದ್ಯವನ್ನು 4-3 ಅಂಕಗಳ ಅಂತರದಲ್ಲಿ ಗೆದ್ದಿದ್ದಾರೆ. ಇದನ್ನೂ ಓದಿ: ಕೈಜಾರಿದ ಚಿನ್ನ – ಹಾಕಿಯಲ್ಲಿ ಬೆಳ್ಳಿಗೆ ತೃಪ್ತಿಪಟ್ಟ ಭಾರತ

ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಷಟ್ಲರ್ ಕಿಡಂಬಿ ಶ್ರೀಕಾಂತ್ ಕಂಚಿನ ಪದಕವನ್ನು ಗೆದ್ದಿದ್ದಾರೆ. ಶ್ರೀಕಾಂತ್ ಅವರು ಸಿಂಗಾಪುರದ ಜಿಯಾ ಹೆಂಗ್ ತೆಹ್ ಅವರನ್ನು 21-15, 21-18 ರಿಂದ ಸೋಲಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: CWG 2022: ಬ್ಯಾಡ್ಮಿಂಟನ್‍ನಲ್ಲಿ 20ರ ಹರೆಯದ ಯುವಕನಿಗೆ ಚಿನ್ನದ ಹಾರ – ದಿಗ್ಗಜರ ಸಾಲಿಗೆ ಸೇರಿದ ಲಕ್ಷ್ಯ ಸೇನ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *