ಗಡ್ಡ ಬೆಳೆಸಿ ಒಲಿಂಪಿಕ್ಸ್ ಗೆದ್ದು ಮೀಸೆ ತಿರುವಿದ ಶೂರರು

Public TV
1 Min Read

ಬರ್ಲಿನ್: ಒಲಿಂಪಿಕ್ಸ್ ಮುಗಿದು, ಪ್ಯಾರಾ ಒಲಿಂಪಿಕ್ಸ್ ಕೂಡ ಮುಗಿದಿರುವ ಈ ವೇಳೆ ಗಡ್ಡಕ್ಕೂ ಒಲಿಂಪಿಕ್ಸ್ ಸ್ಪರ್ಧೆಯನ್ನು ಜರ್ಮನಿಯಲ್ಲಿ ಮಾಡಲಾಗಿದೆ.

ಜರ್ಮನಿಯಲ್ಲಿ ಶನಿವಾರ ಬಿಯರ್ಡ್ ಒಲಿಂಪಿಕ್ಸ್ ನಡೆದಿದ್ದು, ಇದಕ್ಕೆ ಸ್ಪರ್ಧೆ ಮಾಡಲು ಗಡ್ಡ ಮತ್ತು ಮೀಸೆಯನ್ನು ಹೊಂದಿದ ಸುಮಾರು 100 ಪುರುಷರು ಭಾಗಿಯಾಗಿದ್ದರು. ಇವರಲ್ಲಿ ಯಾರು ಉತ್ತಮ ಮೀಸೆ ಹೊಂದಿರುತ್ತಾರೆ ಅವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತೆ. ಬಿಯರ್ಡ್ ಒಲಿಂಪಿಕ್ಸ್ ಮತ್ತು ಜರ್ಮನ್ ಬಿಯರ್ಡ್ ಚಾಂಪಿಯನ್‍ಶಿಪ್‍ಗಳಲ್ಲಿ ಭಾಗವಹಿಸಲು ನೆದರ್‍ಲ್ಯಾಂಡ್ಸ್, ಆಸ್ಟ್ರಿಯಾ, ಇಟಲಿ, ಸ್ವಿಟ್ಜರ್‍ಲ್ಯಾಂಡ್, ಇಸ್ರೇಲ್ ಹಾಗೂ ಜರ್ಮನಿಯಿಂದ ಬಂದಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ 160 ಬಡವರ ಮನೆಗಳ ನೆಲಸಮಕ್ಕೆ ನೋಟಿಸ್ – ಬಲಾಢ್ಯರಿಗೆ ಯಾಕಿಲ್ಲ ನೋಟಿಸ್?

ಈ ಬಿಯರ್ಡ್ ಒಲಿಂಪಿಕ್ಸ್ ಅನ್ನು ಜರ್ಮನಿಯ ಪುಲ್‍ಮ್ಯಾನ್ ಸಿಟಿಯ ವೆಸ್ಟರ್ನ್ ಥೀಮ್ ಪಾರ್ಕ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಗಡ್ಡವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಅದಕ್ಕೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಈಸ್ಟ್ ಬವೇರಿಯನ್ ಬಿಯರ್ಡ್ ಮತ್ತು ಮೀಸೆ ಕ್ಲಬ್‍ನ ಅಧ್ಯಕ್ಷ ಕ್ರಿಶ್ಚಿಯನ್ ಫೀಚ್ಟ್ ಹೇಳಿದರು.

7 ಜನ ತೀರ್ಪುಗಾರರು ಗಡ್ಡ, ಮೀಸೆಯ ಉದ್ದ ಲೆಕ್ಕಾಚಾರ ಮಾಡಿ ಫಲಿತಾಂಶ ಪ್ರಕಟಿಸುತ್ತಾರೆ ಎಂದು ವಿವರಿಸಿದರು. ಜರ್ಮನ್ ಬಿಯರ್ಡ್ ಒಲಿಂಪಿಕ್ಸ್ ಚಾಂಪಿಯನ್‍ಶಿಪ್‍ಗಾಗಿ ಸ್ಪರ್ಧಿಸುವವರು ಜರ್ಮನಿಯ ನಿವಾಸಿಗಳಾಗಿರಬೇಕು ಅಥವಾ ಕ್ಲಬ್‍ನ ಸದಸ್ಯರಾಗಿರಬೇಕಾಗುತ್ತದೆ. ಇದನ್ನೂ ಓದಿ: ಜನರನ್ನು ನೇರವಾಗಿ ಮಾತನಾಡಿಸಬೇಕು ಎಂದು ಬುಲೆಟ್ ಪ್ರೂಫ್ ಶೀಲ್ಡ್ ತೆಗೆದ ಶಾ

Share This Article
Leave a Comment

Leave a Reply

Your email address will not be published. Required fields are marked *