ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಹೈಡ್ರಾಮಾ – ವಕ್ಫ್ ಪ್ರತಿ, ಜಾಕೆಟ್‌ ಹರಿದು ಪ್ರತಿಭಟಿಸಿದ ಎನ್‌ಸಿ ಶಾಸಕರು

Public TV
2 Min Read

ಶ್ರೀನಗರ : ನೂತನ ವಕ್ಫ್‌ ಕಾಯ್ದೆಗೆ ಬಗ್ಗೆ ಚರ್ಚೆಗೆ ಅವಕಾಶ ನೀಡದ ಹಿನ್ನಲೆ ಜಮ್ಮು ಕಾಶ್ಮೀರ (Jammu Kashmir) ವಿಧಾನಸಭೆಯಲ್ಲಿ ಆಡಳಿತರೂಢ ನ್ಯಾಷನಲ್‌ ಕಾನ್ಫರೆನ್ಸ್‌ (National Conference) ಪಕ್ಷದ ಶಾಸಕರು ಮೋದಿ ಸರ್ಕಾರದ (Modi Government) ವಿರುದ್ಧ ಘೋಷಣೆಗಳನ್ನು ಕೂಗಿದರು.

ಸದನ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಶಾಸಕರು ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದರು. ಆದರೆ ಚರ್ಚೆಗೆ ಅನುಮತಿ ನೀಡದ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ನಿಯಮ 56 ಮತ್ತು 58 (7) ಅನ್ನು ಉಲ್ಲೇಖಿಸಿ ನಿಲುವಳಿ ಸೂಚನೆಯನ್ನು ವಜಾಗೊಳಿಸಿದರು. ಈ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಇರುವುದರಿಂದ ಮತ್ತು ಅದರ ಪ್ರತಿಯನ್ನು ನಾನು ಹೊಂದಿರುವುದರಿಂದ, ನಾವು ಆ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಎಂದು ನಿಯಮವು ಸ್ಪಷ್ಟವಾಗಿ ಹೇಳುತ್ತದೆ ಎಂದು ಹೇಳಿದರು.

ಇದರಿಂದ ವಿಧಾನಸಭೆಯಲ್ಲಿ ಪ್ರತಿಭಟನೆ ಭುಗಿಲೆದ್ದಿತು. ಎನ್‌ಸಿ ಶಾಸಕರಾದ ಹಿಲಾಲ್ ಲೋನ್ ಮತ್ತು ಸಲ್ಮಾನ್ ಸಾಗರ್ ವಕ್ಫ್ ಕಾಯ್ದೆಯ ಪ್ರತಿಗಳನ್ನು ಹರಿದು ಹಾಕಿದರು. ಎನ್‌ಸಿ ಶಾಸಕ ಅಬ್ದುಲ್ ಮಜೀದ್ ಲಾರ್ಮಿ ಪ್ರತಿಭಟನೆಯಲ್ಲಿ ಸದನದಲ್ಲಿ ತಮ್ಮ ಜಾಕೆಟ್ ಹರಿದು ಸಿಟ್ಟು ಪ್ರದರ್ಶಿಸಿದರು. ಇದನ್ನೂ ಓದಿ: ವಕ್ಫ್‌ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ

 

ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆದಂತೆ ಮೋದಿ ಸರ್ಕಾರ ವಕ್ಫ್ ಕಾನೂನನ್ನು ಹಿಂಪಡೆಯಬೇಕು. ಈ ಕಾನೂನನ್ನು ಹಿಂತೆಗೆದುಕೊಳ್ಳುವವರೆಗೆ ನಾವು ವಿಧಾನಸಭೆಯ ಕಲಾಪಗಳನ್ನು ನಡೆಸಲು ಬಿಡುವುದಿಲ್ಲ. ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ. ಅದಕ್ಕಾಗಿಯೇ ನಾನು ನನ್ನ ಜಾಕೆಟ್ ಹರಿದುಕೊಂಡೆ ಎಂದು ಶಾಸಕ ಅಬ್ದುಲ್ ಮಜೀದ್ ಲಾರ್ಮಿ ಹೇಳಿದರು‌.  ಇದನ್ನೂ ಓದಿ: ಕಚ್ಚಾ ತೈಲ ದರ ಭಾರೀ ಇಳಿಕೆ- ಭಾರತದಲ್ಲೂ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಾಗುತ್ತಾ?

ಎನ್‌ಸಿಯ ನಡೆಯನ್ನು ಖಂಡಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ, ಆಡಳಿತ ಪಕ್ಷದ ಬೇಡಿಕೆಯು “ಅತ್ಯಂತ ಅಸಾಂವಿಧಾನಿಕ” ಎಂದು ಕರೆದರು. ಸಂಸತ್ತು ಮಸೂದೆಯನ್ನು ಅಂಗೀಕರಿಸಿದೆ, ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ ಅದು ಈಗ ಕಾನೂನಾಗಿದೆ. ಸದ್ಯ ವಿಷಯವು ನ್ಯಾಯಾಂಗದಲ್ಲಿದ್ದಾಗ, ಈ ವಿಧಾನಸಭೆಗೆ ಅದರ ಬಗ್ಗೆ ಚರ್ಚಿಸಲು ಯಾವುದೇ ಅಧಿಕಾರವಿಲ್ಲ ಎಂದರು.

ಸ್ಪೀಕರ್ ಅವರ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ ನಿರ್ಧಾರವನ್ನು ತೀವ್ರ ನಿರಾಶಾದಾಯಕ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಅವರು, ಬಹುಮತವಿದ್ದರೂ, ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟವು ಬಿಜೆಪಿಯ ಮುಸ್ಲಿಂ ವಿರೋಧಿ ಕಾರ್ಯಸೂಚಿಗೆ ಸಂಪೂರ್ಣವಾಗಿ ಮಣಿದಿದೆ, ಎರಡೂ ಕಡೆಯವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

 

Share This Article