ಉಪಚುನಾವಣೆ: ಯುಗಾದಿ ಹಬ್ಬದಂದೇ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ

1 Min Read

ಬೆಂಗಳೂರು: ಉಪಚುನಾವಣೆಗೆ (By Elections) ಯುಗಾದಿ ಹಬ್ಬದಂದೇ ಬಿಜೆಪಿ (BJP) ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

- Advertisement -

ಬಾಗಲಕೋಟೆ ಕ್ಷೇತ್ರಕ್ಕೆ ವೀರಣ್ಣ ಚರಂತಿಮಠ, ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ ಟಿ ದಾಸಕರಿಯಪ್ಪ ಅವರನ್ನು ಅಭ್ಯರ್ಥಿಗಳಾಗಿ ಬಿಜೆಪಿ ಘೋಷಿಸಿದೆ. ದಾವಣಗೆರೆ ರೆಬೆಲ್ ಬಣದ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಿದೆ. ಇದನ್ನೂ ಓದಿ: ಉಪಚುನಾವಣೆ| ಸಿಎಂ ಕಚೇರಿಯಲ್ಲಿ ಸಂಧಾನ ಸಭೆಗೆ ವ್ಯಾಪಕ ಟೀಕೆ

- Advertisement -

ದಾವಣಗೆರೆ ದಕ್ಷಿಣದಲ್ಲಿ ಜಾತಿ ಲೆಕ್ಕಾಚಾರದಲ್ಲಿ ತಂತ್ರವನ್ನು ಬಿಜೆಪಿ ಹೆಣೆದಿದೆ. ಎಸ್‌ಟಿ ಸಮುದಾಯದ ಟಿ.ಶ್ರೀನಿವಾಸದಾಸ ಕರಿಯಪ್ಪಗೆ ಟಿಕೆಟ್ ನೀಡಿದೆ. ಈ ಮೂಲಕ ಅಹಿಂದ ಮತ್ತು ಲಿಂಗಾಯತ ವರ್ಗದ ಮತಗಳ ಮೇಲೆ ಪಕ್ಷ ಕಣ್ಣಿಟ್ಟಿದೆ. ದಾವಣಗೆರೆ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿತ್ತು. ಯಾವಾಗ ನ್ಯೂಟ್ರಲ್ ಅಭ್ಯರ್ಥಿ ಚರ್ಚೆ ಮುನ್ನೆಲೆಗೆ ಬಂತೋ ಆಗ ಸಿದ್ದೇಶ್ವರ್ – ರೇಣುಕಾಚಾರ್ಯ ಬಣಗಳಿಂತ ಒಗ್ಗಟ್ಟಿನ ಜಪ ಮಾಡಲಾಗಿತ್ತು.

- Advertisement -

- Advertisement -

ಯಾರಿಗೇ ಟಿಕೆಟ್ ಕೊಟ್ರೂ ಕೆಲಸ ಮಾಡೋದಾಗಿ ಎರಡೂ ಬಣಗಳಿಂದ ಘೋಷಣೆ ಮಾಡಲಾಗಿದೆ. ಹೀಗಾಗಿ, ಸಿದ್ದೇಶ್ವರ್ ಬಣದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರೂ ರೇಣುಕಾಚಾರ್ಯ ಬಣದ ಜತೆಗೂ ಉತ್ತಮ ಬಾಂಧವ್ಯ ಇಟ್ಟುಕೊಂಡ ಶ್ರೀನಿವಾಸ ದಾಸಕರಿಯಪ್ಪಗೆ ಟಿಕೆಟ್ ಒಲಿದು ಬಂದಿದೆ. ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪಚುನಾವಣೆ | ಕಾಂಗ್ರೆಸ್‌ ಸಭೆಯಲ್ಲಿ ಗದ್ದಲ – ಬೇಸರದಿಂದ ಹೊರನಡೆದ ಉಸ್ತುವಾರಿ ಸಮಿತಿ ಸದಸ್ಯರು

Share This Article