ಅಧಿವೇಶನಕ್ಕೂ ಮುನ್ನವೇ ಮೈತ್ರಿ ಸರ್ಕಾರ ಕೆಡವಲು ಮತ್ತೆ ಹರಸಾಹಸ!

Public TV
1 Min Read

ಬೆಂಗಳೂರು: ಮೈತ್ರಿ ಸರ್ಕಾರವನ್ನು ಉರುಳಿಸುವ ರಣತಂತ್ರವನ್ನು ರೂಪಿಸುವುದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬ್ಯುಸಿ ಆಗಿದ್ದು, ಕೇರಳಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ.

ಅಧಿವೇಶನಕ್ಕೂ ಮುನ್ನವೇ ಸರ್ಕಾರ ಕೆಡವಲು ಮತ್ತೆ ಹರಸಾಹಸ ಮಾಡಲಾಗುತ್ತಿದ್ದು, ಬಿಜೆಪಿ ಆಂಡ್ ಕಾಂಗ್ರೆಸ್ ಅತೃಪ್ತರಿಂದ ಈಗಾಗಲೇ ಗುಪ್ತ್ ಗುಪ್ತ್ ರಣತಂತ್ರ ನಡೆದಿದೆ. ಆರೋಗ್ಯದ ಕಡೆ ಒತ್ತುಕೊಡುವ ನೆಪದಲ್ಲಿ ಬಿಎಸ್‍ವೈ ಇಂದು ಕೇರಳಕ್ಕೆ ಶಿಫ್ಟ್ ಆಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಎಸ್ ಯಡಿಯೂರಪ್ಪ ಪ್ರಕೃತಿ ಚಿಕಿತ್ಸೆಗೆ ಎಂದು ಕೇರಳಕ್ಕೆ ಹೊರಡಲಿದ್ದು, ಡಿಸೆಂಬರ್ 8ರ ಬಳಿಕ ರಾಜ್ಯಕ್ಕೆ ಮತ್ತೆ ವಾಪಸ್ ಆಗಲಿದ್ದಾರೆ. ಪ್ರಕೃತಿ ಚಿಕಿತ್ಸೆ ಜೊತೆ ವಿಶ್ರಾಂತಿ, ಪೂಜೆ ಪುನಸ್ಕಾರಗಳಲ್ಲಿ ಬಿಎಸ್‍ವೈ ಭಾಗಿಯಾಗಲಿದ್ದಾರೆ. ಇದೇ ಅವಧಿಯಲ್ಲಿ ಬಿಜೆಪಿ ಆಪರೇಷನ್ ಮಾಡಲಿದಿಯಾ ಎಂಬ ಸಂಶಯ ವ್ಯಕ್ತವಾಗಿದೆ. ನಿಜಕ್ಕೂ ಬಿಎಸ್‍ವೈ ಚಿಕಿತ್ಸೆಗಾಗಿ ಹೋಗುತ್ತಿದ್ದಾರಾ ಅಥವಾ ಮೈತ್ರಿ ಕೆಡವಲು ಹೊಸ ರಣತಂತ್ರ ರೂಪಿಸಲು ತೆರಳುತ್ತಿದ್ದಾರಾ ಎಂಬ ಪ್ರಶ್ನೆಗಳು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.

ಅತ್ತ ಕಾಂಗ್ರೆಸ್‍ನ 10ಕ್ಕೂ ಹೆಚ್ಚು ಅತೃಪ್ತರ ತಂಡ ಮಹಾರಾಷ್ಟ್ರಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದ್ದು, ಇಂದು ಸಂಜೆ ಮಹಾರಾಷ್ಟ್ರಕ್ಕೆ ತೆರಳಲು ಕೈ ಶಾಸಕರು ಪ್ಲಾನ್ ನಡೆಸಿದ್ದಾರೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಹೈಕಮಾಂಡ್ ನಿಂದ ಆದೇಶ ಬಂದರೆ 6 ಅಥವಾ 7ರಂದು ಸಂಪುಟ ವಿಸ್ತರಣೆಯ ಸಭೆಯನ್ನು ನಡೆಸುವ ಸಾಧ್ಯತೆ ಇದೆ. ಹೀಗಾಗಿ ಇಂದು ಸಂಜೆ ವೇಳೆಗೆ ಅತೃಪ್ತರ ನಿರ್ಧಾರ ಬದಲಾದರೂ ಅಚ್ಚರಿ ಏನು ಇಲ್ಲ ಎಂದು ಹೇಳಲಾಗುತ್ತಿದೆ.

ಈಗಾಗಲೇ ಬಿಜೆಪಿ ಆಪರೇಷನ್ ಮಾಡಲು ಮುಂದಾಗಿದ್ದು, ಸೋತಿತ್ತು. ಈಗ ಮತ್ತೆ ಕೇರಳಕ್ಕೆ ಹೋಗುವ ಮೂಲಕ ಮತ್ತೊಮ್ಮೆ ಆಪರೇಷನ್ ಕಮಲ ಮಾಡಲು ಮುಂದಾಗುತ್ತಿದೆ. ಇನ್ನೊಂದು ಕಡೆ ಬಿ.ಎಸ್ ಯುಡಿಯೂರಪ್ಪ ಅನಾರೋಗ್ಯದ ಕಾರಣದಿಂದ ಪ್ರಕೃತಿ ಚಿಕಿತ್ಸೆ ಪಡೆಯಲು ಕೇರಳಕ್ಕೆ ಹೋಗುತ್ತಿದ್ದು, ಎಂಟು ದಿನಗಳ ಕಾಲ ಕೇರಳದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *