ನಾದಿನಿಯ ಮೇಲೆ ಕಣ್ಣಾಕಿ ಹೆಣವಾದ ಬಾವ – ಸಿನಿಮೀಯ ಶೈಲಿಯಲ್ಲಿ ಅಪಹರಿಸಿ ಬರ್ಬರ ಕೊಲೆ

Public TV
1 Min Read

ಬೆಂಗಳೂರು: ಹೆಂಡತಿ (Wife) ಮೇಲೆ ಕಣ್ಣಾಕಿದ್ದ ಬಾವನನ್ನು ಮುಗಿಸುವ ಸಲುವಾಗಿ ಆತನ ಕಾರ್‌ನಲ್ಲೇ ಅಪಹರಿಸಿ ಬರ್ಬರ ಹತ್ಯೆ ಮಾಡಿದ ಘಟನೆ ಹೊಸಕೋಟೆ (Hosakote) ವ್ಯಾಪ್ತಿಯಲ್ಲಿ ನಡೆದಿದೆ.

ಮೊಹಮದ್ ಅಖ್ತರ್ ಅಲಿ (44) ಕೊಲೆಯಾದ ದುರ್ದೈವಿ. ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಕಬ್ಬನ್ ಪೇಟೆಯ ಜುಮ್ಮಾ ಮಸೀದಿ ಬಳಿಯಿಂದ ಮೊಹಮದ್ ಅಖ್ತರ್ ಅಲಿಯನ್ನು ಅಪಹರಿಸಲಾಗಿದ್ದು, ಬಳಿಕ ಆತನ ಕತ್ತು ಬಿಗಿದು ಹತ್ಯೆಗೈದು ಹೊಸಕೋಟೆ ಸಮೀಪದ ಕಾಲುವೆಯಲ್ಲಿ ಶವ ಎಸೆದಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿದ್ದ ಕಾರನ್ನು ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲೇ ತಂದು ನಿಲ್ಲಿಸಿದ್ದಾರೆ. ಅಕ್ತರ್ ಅಲಿ ಹೆಂಡತಿ ನೀಡಿದ ಮಿಸ್ಸಿಂಗ್ ಕಂಪ್ಲೆಂಟ್‌ನಿಂದ ಕೊಲೆ ರಹಸ್ಯ ರಿವೀಲ್ ಆಗಿದೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದವ್ಳು ಪರಪುರುಷನ ಜೊತೆ ಡೇಟಿಂಗ್- ರೊಚ್ಚಿಗೆದ್ದ ಪತಿ ಮಚ್ಚಿನಿಂದ ಅಟ್ಯಾಕ್

ಹತ್ಯೆಯಾದ ಮೊಹಮ್ಮದ್ ಅಖ್ತರ್ ಅಲಿಗೆ ಆತನ ನಾದಿನಿಯೊಂದಿಗೆ ಅಕ್ರಮ ಸಂಬಂಧವಿತ್ತು ಎಂದು ಹೇಳಲಾಗಿದೆ. ನಾದಿನಿಯ ಪತಿ ಷಹನವಾಜ್‌ನಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಷಹನವಾಜ್ ಸೂಚನೆಯ ಮೇರೆಗೆ ಸೋಮವಾರ ಕಬ್ಬನ್ ಪೇಟೆಯ ಜುಮ್ಮಾ ಮಸೀದಿ ಬಳಿಯಿಂದ ಮೊಹಮದ್ ಅಖ್ತರ್ ಅಲಿಯನ್ನು ಅಪಹರಿಸಿರುವ ಆರೋಪಿಗಳು, ಬಳಿಕ ಚಲಿಸುತ್ತಿದ್ದ ಕಾರಿನಲ್ಲೇ ಆತನ ಕತ್ತು ಬಿಗಿದು ಹತ್ಯೆಗೈದಿದ್ದಾರೆ. ಬಳಿಕ ಹೊಸಕೋಟೆಯ ಬಳಿ ಕಾಲುವೆಯಲ್ಲಿ ಶವವನ್ನು ಎಸೆದು ವಾಪಸ್ಸಾಗಿದ್ದಾರೆ. ಇತ್ತ ಪತಿ ನಾಪತ್ತೆಯಾಗಿರುವುದಾಗಿ ಅಖ್ತರ್ ಅಲಿ ಪತ್ನಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರು ಗೇಟ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: ಚಂದಗಾಣಲೆಂದು ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ಮದುಮಗ ದುರ್ಮರಣ!

ಕೃತ್ಯಕ್ಕೆ ಬಳಸಿದ್ದ ಕಾರಿನಲ್ಲಿ ಮೃತನ ಮೊಬೈಲ್ ಫೋನ್ ಪತ್ತೆಯಾಗಿದ್ದು, ಕೊಲೆ ಆರೋಪಿಗಳು ಯಾರು ಎಂಬುದು ಪತ್ತೆಯಾಗಿದೆ. ಸದ್ಯ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ಸುಪಾರಿ ನೀಡಿದ ನಾದಿನಿಯ ಗಂಡ ಷಹನವಾಜ್ ಸೇರಿದಂತೆ ಎಲ್ಲರಿಗೂ ಡ್ರಿಲ್ ನಡೆಸಲಾಗುತ್ತಿದೆ. ಇದನ್ನೂ ಓದಿ: 84,000 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರಿಟ್ಟ ಮಹಿಳಾ ಅಧಿಕಾರಿ

Share This Article