ವರ್ಷ ಜೊತೆಗಿನ ಬ್ರೇಕಪ್ ಬೆನ್ನಲ್ಲೇ ಹೀರೋ ಆದ ವರುಣ್ ಆರಾಧ್ಯ

Public TV
1 Min Read

ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ವರುಣ್ ಆರಾಧ್ಯ (Varun Aradhya) ಇದೀಗ ಸೀರಿಯಲ್ ಲೋಕಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ವರ್ಷ ಕಾವೇರಿ (Varsha Kaveri) ಜೊತೆಗಿನ ಬ್ರೇಕಪ್ ಬೆನ್ನಲ್ಲೇ ‘ಬೃಂದಾವನ’ ಸೀರಿಯಲ್ ಹೀರೋ ಆಗಿ ಬಣ್ಣದ ಜಗತ್ತಿಗೆ ಪರಿಚಯವಾಗುತ್ತಿದ್ದಾರೆ. ಇದನ್ನೂ ಓದಿ:ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್- ‌ಇಂದು ಇನ್ನೊಬ್ಬರಿಗೆ ಕಾದಿದೆ ಶಾಕ್

ಕೆಲ ದಿನಗಳ ಹಿಂದಷ್ಟೇ ಕಲರ್ಸ್ ಕನ್ನಡ ವಾಹಿನಿಯ ‘ಬೃಂದಾವನ’ (Brindavana) ಸೀರಿಯಲ್ ಅದ್ದೂರಿಯಾಗಿ ಲಾಂಚ್ ಆಗಿತ್ತು. ಸಿಂಗರ್ ಕಮ್ ಬಿಗ್ ಬಾಸ್ ಸ್ಪರ್ಧಿ ವಿಶ್ವನಾಥ್ ಹಾವೇರಿ ಹೀರೋ ಆಗಿ ಪರಿಚಯವಾಗಿದ್ದರು. ಇದೀಗ ಅದೇ ಪಾತ್ರಕ್ಕೆ ವರುಣ್ ಆರಾಧ್ಯ ಎಂಟ್ರಿ ಕೊಟ್ಟಿದ್ದಾರೆ. ವಿಶ್ವನಾಥ್ ಆಕಾಶ್ ಪಾತ್ರದಿಂದ ಹೊರನಡೆದಿದ್ದಾರೆ.

ಟಿಕ್ ಟಾಕ್ ಆ ನಂತರ ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಮನೆ ಮಾತಾಗಿದ್ದ ವರುಣ್ ಅವರು ಕಳೆದ ಕೆಲ ತಿಂಗಳುಗಳಿಂದ ವರ್ಷ ಕಾವೇರಿ ಜೊತೆಗಿನ ಲವ್ ಬ್ರೇಕಪ್ ವಿಷ್ಯವಾಗಿ ಟಾಕ್‌ನಲ್ಲಿದ್ರು. ಬೇಕಂತಲೇ ಸುದ್ದಿ ಮಾಡುತ್ತಾ ಬಿಗ್ ಬಾಸ್‌ಗೆ ಹೋಗೋಕೆ ಹೀಗೆ ಮಾಡ್ತಿದ್ದಾರೆ ಎನ್ನಲಾಗಿತ್ತು. ಆದರೆ ಬಿಗ್ ಬಾಸ್‌ನಲ್ಲಿ ಇಬ್ಬರಲ್ಲಿ ಒಬ್ಬರು ಕೂಡ ಎಂಟ್ರಿ ಕೊಟ್ಟಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬ್ರೇಕಪ್ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡಿ ಸುಮ್ಮನಾಗಿ ಬಿಟ್ಟಿದ್ದರು.

‘ಬೃಂದಾವನ’ ಸೀರಿಯಲ್ 25 ಎಪಿಸೋಡ್ ಪೂರೈಸಿದ ಬೆನ್ನಲ್ಲೇ ಹೀರೋ ಜೇಂಜ್ ಆಗಿದ್ದಾರೆ. ಟಿಕ್ ಟಾಕ್ ಸ್ಟಾರ್ ಆಗಿ ಮನಗೆದ್ದಿದ್ದ ವರುಣ್, ಈಗ ನಟನಾಗಿ ಕೂಡ ಸೈ ಎನಿಸಿಕೊಳ್ಳುತ್ತಾರಾ ಕಾದುನೋಡಬೇಕಿದೆ.

Share This Article