ಬೆಂಗಳೂರು ಹೋಟೆಲಿನಲ್ಲಿ ಅಗ್ನಿ ಅವಘಡಕ್ಕೆ ಬೊಲೇರೋ ವಾಹನ ಕಾರಣ?

Public TV
1 Min Read

ಬೆಂಗಳೂರು: ಎಂಜಿ ರಸ್ತೆಯಯಲ್ಲಿರುವ ಅಜಂತಾ ಟ್ರಿನಿಟಿ ಹೋಟೆಲ್ ನಲ್ಲಿ ನಿನ್ನೆ ರಾತ್ರಿ ಬೆಂಕಿ ಅವಘಡವೊಂದು ನಡೆದಿದ್ದು, ಇದಕ್ಕೆ ಬೊಲೇರೋ ವಾಹನ ಕಾರಣವಾಗಿರಬಹುದು ಎಂಬ ಅನುಮಾನ ಎದ್ದಿದೆ.

ಬೆಂಕಿ ಆಕಸ್ಮಿಕವಾಗಿ ಹೇಗೆ ಕಾಣಿಸಿತು ಎನ್ನುವುದರ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ತನಿಖೆಯನ್ನು ಮಾಡುತ್ತಿದ್ದಾರೆ. ಈ ವೇಳೆ ಬೊಲೇರೋ ವಾಹನದಿಂದ ಬೆಂಕಿ ಸೃಷ್ಟಿಯಾಗಿರಬಹುದು ಎಂಬ ಅನುಮಾನ ಬಂದಿದೆ. ಇದನ್ನೂ ಓದಿ:  ನಿವಾಸದಲ್ಲಿದ್ದ ಮರಗಳಿಗೆ ಕೊಡಲಿ – ಮಂಡ್ಯ ಎಸ್‍ಪಿಯಿಂದ ಸರ್ವಾಧಿಕಾರಿ ಧೋರಣೆ

ಕೊರೊನಾ ಕಾರಣದಿಂದ ಹೋಟೆಲ್‍ನಲ್ಲಿದ್ದ 96 ರೂಮ್ ಗಳನ್ನು ಸಹ ಬಂದ್ ಮಾಡಲಾಗಿದೆ. ಮಾಲೀಕರು ಮತ್ತು ಅವರ ಸ್ನೇಹಿತರು ನಿನ್ನೆ ರಾತ್ರಿ ಹೋಟೆಲ್ ಗೆ ಬಂದಿದ್ದು, ಅವರಿಗೂ ಹೋಟೆಲ್‍ನ ಮೂರನೇ ಮಹಡಿಯ ರೂಮ್ ಅನ್ನು ಸಿಬ್ಬಂದಿ ನೀಡಿದ್ದಾರೆ.

ಹೋಟೆಲ್ ಮಾಲೀಕರ ಸ್ನೇಹಿತರಾದ ರಾಚಪ್ಪಜಿ ಮೈಸೂರಿನಿಂದ ರಾತ್ರಿ 10:15 ಕ್ಕೆ ಹೋಟಲಿಗೆ ಬೊಲೇರೋ ವಾಹನದಲ್ಲಿ ಆಗಮಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ರೈಲಿನಲ್ಲಿ 15 ಕೆಜಿ ಹಸಿ ಗಾಂಜಾ ಪತ್ತೆ! 

ಹೋಟೆಲ್ ಸಿಬ್ಬಂದಿ ಪ್ರಕಾರ, ಪಾರ್ಕಿಂಗ್ ನಲ್ಲಿದ್ದ ಬೊಲೇರೋ ಕಾರಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಪಕ್ಕದಲ್ಲೇ ಇದ್ದ ಆಟೋಗೆ ಬೆಂಕಿ ತಗುಲಿದೆ. ಅದು ಮುಂದುವರೆದು ಇಡೀ ಹೋಟೆಲ್‍ನ ನೆಲಮಹಡಿಗೆ ಬೆಂಕಿ ಆವರಿಸಿದೆ. ಬೆಂಕಿಯ ತೀವ್ರತೆ ಮೂರು ಅಂತಸ್ತಿಗೂ ಹಬ್ಬಿದ್ದು, ಇಡೀ ಹೋಟೆಲ್ ಪೀಠೋಪಕರಣಗಳು ಸುಟ್ಟು ಕರಕಲಾಗಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಲಸಕ್ಕೆ ಹಾಜರಾಗಿ – ಪೊಲೀಸರಿಗೆ ತಾಲಿಬಾನ್ ಕಮಾಂಡರ್​ಗಳಿಂದ ಕರೆ

ಅಗ್ನಿ ಅವಘಡಕ್ಕೆ ಬೊಲೇರೋ ಕಾರ್ ನ ಇಂಜಿನ್ ನಲ್ಲಿ ಕಾಣಿಸಿಕೊಂಡ ಬೆಂಕಿಯೇ ಕಾರಣವಿರಬಹುದು ಅನ್ನುವ ಮಾತುಗಳು ಕೇಳಿಬಂದಿದೆ. ಜೊತೆಗೆ ಶಾಟ್ ಸಕ್ರ್ಯೂಟ್ ಆಗಿದೆ ಎನ್ನುವ ಅನುಮಾನವನ್ನು ಅಗ್ನಿಶಾಮಕ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸಮಯಕ್ಕೆ ಸರಿಯಾಗಿ ಬಂದ ಅಗ್ನಿಶಾಮಕ ಸಿಬ್ಬಂದಿಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಕೂದಳೆಲೆ ಅಂತರದಲ್ಲಿ ತಪ್ಪಿದೆ.

Share This Article
Leave a Comment

Leave a Reply

Your email address will not be published. Required fields are marked *