ಚುನಾವಣೆ ಗೆಲ್ಲಲು BJP ಹಣ, ಹೆಂಡದ ಹೊಳೆ ಹರಿಸುತ್ತಿದೆ- ಡಿಂಪಲ್ ಯಾದವ್ ಕಿಡಿ

Public TV
2 Min Read

ಲಕ್ನೋ/ಗಾಂಧಿನಗರ: ಬಿಜೆಪಿ (BJP) ಚುನಾವಣೆ ಗೆಲ್ಲಲು ಗಣ, ಹೆಂಡದ ಹೊಳೆ ಹರಿಸುತ್ತಿದೆ ಎಂದು ಲೋಕಸಭಾ ಚುನಾವಣಾ ಆಕಾಂಕ್ಷಿ ಹಾಗೂ ಸಮಾಜವಾದಿ ಪಕ್ಷದ (Samajwadi Party) ನಾಯಕಿ ಡಿಂಪಲ್ ಯಾದವ್ (Dimple Yadav) ಎಂದು ಆರೋಪಿಸಿದ್ದಾರೆ.

ನೂರಾರು ಬಿಜೆಪಿ (BJP) ಮುಖಂಡರು ಕಾರ್ಯಕರ್ತರು ಹೋಟೆಲ್‌ನಲ್ಲಿ ಜಮಾಯಿಸಿದ್ದಾರೆ. ಮತದಾರರಿಗೆ ನಿರಂತರವಾಗಿ ಹಣ, ಹೆಂಡದ ಹೊಳೆ ಹರಿಸುತ್ತಿದ್ದಾರೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಾಂಶುಪಾಲರಿಗೆ ಜೈಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯಿಸಿದ ABVP ಕಾರ್ಯಕರ್ತರು

ಈ ಬಗ್ಗೆ ಚುನಾವಣಾ ಆಯೋಗಕ್ಕೂ ಈ ಬಗ್ಗೆ ದೂರು ನೀಡಲಾಗುವುದು. ಅಲ್ಲದೇ ಮತದಾನ ಪ್ರಾರಂಭವಾಗುವ 24 ಗಂಟೆಗಳ ಮೊದಲು ಸಮಾಜವಾದಿ ಪಕ್ಷದ ಶಾಸಕರು ಬಿಜೆಪಿಯ ಅಕ್ರಮ ಚಟುವಟಿಕೆಯ ವಿರುದ್ಧ ಧರಣಿ ಕೂರಲಿದ್ದರೆ ಎಂದು ಎಚ್ಚರಿಸಿದ್ದಾರೆ.

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದ ಮೈನ್‌ಪುರಿ ಉಪಚುನಾವಣೆ ಅಗತ್ಯವಾಗಿದ್ದು, ಉತ್ತರಪ್ರದೇಶದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದನ್ನೂ ಓದಿ: ಗ್ಯಾಂಗ್ ರೇಪ್ – ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು ವಿಕೃತಿ

ಉತ್ತರ ಪ್ರದೇಶದಲ್ಲಿ, ರಾಮ್‌ಪುರ್ ಸದರ್ ಮತ್ತು ಖತೌಲಿ ವಿಧಾನಸಭಾ ಕ್ಷೇತ್ರಗಳು ಮತ್ತು ಮೈನ್‌ಪುರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷ-ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಗುಜರಾತ್‌ನಲ್ಲಿಂದು ಮತದಾನ ಅಂತ್ಯ:
ಗುಜರಾತ್ ವಿಧಾನಸಭೆ ಚುನಾವಣೆಯ (Gujarat Election) 2ನೇ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದೆ. 93 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಡಳಿತ ವಿರೋಧಿ ಅಲೆ ಮೀರಿ ಐತಿಹಾಸಿಕ ಗೆಲವು ಸಾಧಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದರೇ, ಕಾಂಗ್ರೆಸ್ ಕೂಡಾ ಹೋರಾಟ ತೀವ್ರಗೊಳಿಸಿದೆ. ಇತ್ತ ಆಪ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಖಾತೆ ತೆರೆಯುವ ಲೆಕ್ಕಚಾರದಲ್ಲಿದೆ.

2ನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ 61 ರಾಜಕೀಯ ಪಕ್ಷಗಳ 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು ಎರಡು ಕೋಟಿ 51 ಲಕ್ಷದ 58 ಸಾವಿರದ 730 ಮತದಾರರು ಮತದಾನಕ್ಕೆ ಅರ್ಹವಾಗಿದ್ದಾರೆ. ಇದರಲ್ಲಿ ಒಂದು ಕೋಟಿ 29 ಲಕ್ಷದ 26 ಸಾವಿರದ 501 ಪುರುಷ ಹಾಗೂ ಒಂದು ಕೋಟಿ 22 ಲಕ್ಷದ 31 ಸಾವಿರದ 335 ಮಹಿಳಾ ಮತದಾರರಿದ್ದಾರೆ. ಮತದಾನಕ್ಕಾಗಿ 26,409 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಂದು ಲಕ್ಷದ 13 ಸಾವಿರದ 325 ಮತಗಟ್ಟೆ ಸಿಬ್ಬಂದಿ ಬೂತ್ ಗಳಲ್ಲಿ ಸಿದ್ಧತೆ ನಡೆಸಿದ್ದಾರೆ.

ಮೋದಿಯಿಂದ (Narendra Modi) ಮತ ಚಲಾವಣೆ:
2ನೇ ಹಂತದಲ್ಲಿ ಬನಸ್ಕಾಂತ, ಪಟಾನ್, ಮೆಹ್ಸಾನಾ, ಸಬರ್ಕಾಂತ, ಅರಾವಳಿ, ಗಾಂಧಿನಗರ, ಅಹಮದಾಬಾದ್, ಆನಂದ್, ಖೇಡಾ, ಮಹಿಸಾಗರ್, ಪಂಚ ಮಹಲ್, ದಾಹೋದ್, ವಡೋದರಾ ಮತ್ತು ಛೋಟಾ ಉದಯಪುರ ಸೇರಿ 14 ಜಿಲ್ಲೆಗಳಲ್ಲಿ 2ನೇ ಹಂತದ ಮತದಾನ ನಡೆಯಲಿದೆ. ಮಧ್ಯ ಮತ್ತು ಉತ್ತರ ಗುಜರಾತ್‌ನ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಪ್ರಮುಖರು ಇಂದು ಮತದಾನ ಮಾಡಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *