ನವದೆಹಲಿ: ಬಿಹಾರದಲ್ಲಿ (Bihar Election Results) ಎನ್‌ಡಿಎ (NDA) ಭಾರೀ ಮುನ್ನಡೆ ಸಾಧಿಸಿದೆ. ಬೆಳಗ್ಗೆ 9 ಗಂಟೆಯ ಟ್ರೆಂಡ್ ವೇಳೆ ಎನ್‌ಡಿಎ 147, ಮಹಾಘಟಬಂಧನ್ 89, ಜನಸೂರಜ್ 4, ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಅಂಚೆ ಮತ ಎಣಿಕೆಯಿಂದಲೂ ಎನ್‌ಡಿಎ ಮುನ್ನಡೆ ಸಾಧಿಸಿತ್ತು. ಇದೇ ಟ್ರೆಂಡ್ ಮುಂದುವರಿಯುತ್ತಲೇ ಇದೆ. ಒಟ್ಟು 243 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು.
ಆರಂಭಿಕ ಮುನ್ನಡೆ ಸಾಧಿಸುತ್ತಿದ್ದಂತೆ ಎನ್‌ಡಿಎ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿದೆ. ಮಹಾಘಟಬಂಧನ್ ಪೈಕಿ ಆರ್‌ಜೆಡಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ ಹಿನ್ನಡೆ ಸಾಧಿಸಿದೆ.
ವಿಶೇಷವಾಗಿ ಆರ್‌ಜೆಡಿ ಯಾದವರು ಹೆಚ್ಚು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.
