ಕೆಂಪು ಇರುವೆ ಚಟ್ನಿ ಮಾಡಿದ ‘ಬಿಗ್‌ ಬಾಸ್‌’ ಕಿಶನ್‌ಗೆ ಕಾಲೆಳೆದ ನೆಟ್ಟಿಗರು

Public TV
2 Min Read

‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಕಿಶನ್ ಬಿಳಗಲಿ (Kishen Bilagali) ಅವರು ಡ್ಯಾನ್ಸರ್, ಆಕ್ಟರ್, ರೀಲ್ಸ್ ಸ್ಟಾರ್ ಹೀಗೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ತಮ್ಮೂರು ಮಲೆನಾಡು ಚಿಕ್ಕಮಗಳೂರಿಗೆ ಹೋಗಿರುವ ಕಿಶನ್, ಕೆಂಪು ಇರುವೆ ಚಟ್ನಿ (Red Ant Chutney) ಮಾಡಿ ಊಟ ಮಾಡಿದ್ದಾರೆ. ಈ ವಿಡಿಯೋವನ್ನ ನಟ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದಂತೆ ನೆಗೆಟಿವ್- ಪಾಸಿಟಿವ್ ಕಾಮೆಂಟ್ಸ್ ಹರಿದು ಬರುತ್ತಿದೆ.

ಹಿಂದಿ ಕಿರುತೆರೆಯ ರಿಯಾಲಿಟಿ ಶೋನಲ್ಲಿ ತಾವೆಂತಹ ಡ್ಯಾನ್ಸರ್ ಎಂಬುದನ್ನ ಕಿಶನ್ ಬಿಳಗಲಿ ಪ್ರೂವ್ ಮಾಡಿದ್ದಾರೆ. ಬಳಿಕ ದೊಡ್ಮನೆ ಆಟಕ್ಕೆ ಕಾಲಿಟ್ಟು, ಕನ್ನಡ ಪ್ರೇಕ್ಷಕರಿಗೆ ಕಿಶನ್ ಪರಿಚಿತರಾದರು. ಡ್ಯಾನ್ಸ್ ದಿವಾನೆ ಶೋನ ವಿನ್ನರ್ ಕೂಡ ಆಗಿದ್ರು.

ಚಾಗಲಿ ಇರುವೆ, ಮಲೆನಾಡಿನ ವಿಶೇಷ. ಇದರ ಬಗ್ಗೆ ಕಾಮೆಂಟ್ ಮಾಡುವ ಮುನ್ನ ಗೂಗಲ್ ಮಾಡಿ ಸ್ವಲ್ಪ ವಿಷಯ ತಿಳಿದುಕೊಳ್ಳಿ. ನಿಮಗೆ ಇದು ಇಷ್ಟ ಆಗಿಲ್ಲ ಅಂದರೆ ತು, ಚಿ ಎನ್ನಬೇಡಿ. ಈ ಚಟ್ನಿಯಲ್ಲಿ ಜಿಂಕ್, ಕ್ಯಾಲ್ಸಿಯಂ, ಪ್ರೋಟೀನ್ ಇರುತ್ತದೆ, ಇದು ನಮಗೆ ರೋಗ ನಿರೋಧಕ ಶಕ್ತಿ ನೀಡುವುದು. ಅಷ್ಟೇ ಅಲ್ಲದೆ ಕಫ, ನೆಗಡಿ, ಉಸಿರಾಟ ಸಮಸ್ಯೆ ಮುಂತಾದ ರೋಗಗಳಿಗೆ ಉತ್ತಮ ಔಷಧಿ ಎಂದು ಕಿಶನ್ ಬಿಳಗಲಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ಕೆಂಪು ಇರುವೆ ಚಟ್ನಿ ಮಾಡುವ ವಿಧಾನವನ್ನು ವಿಡಿಯೋ ಮೂಲಕ ಅವರು ತೋರಿಸಿದ್ದಾರೆ. ಇದನ್ನೂ ಓದಿ:ರಮ್ಯಾ ಬದಲು ರಚಿತಾ ರಾಮ್: ಎರಡು ಬಾರಿ ರಮ್ಯಾ ಸ್ಥಾನ ತುಂಬಿದ ರಚ್ಚು

ಕೆಂಪು ಇರುವೆ ಚಟ್ನಿಗೆ ಎಣ್ಣೆ ಹಾಕಿ ರೊಟ್ಟಿ ಜೊತೆ ತಿಂದಿದ್ದಾರೆ. ಕಿಶನ್ ಈ ವೀಡಿಯೋ ಶೇರ್ ಮಾಡ್ತಿದ್ದಂತೆ ಚಿಕನ್, ಮಟನ್, ಹಂದಿ ತಿನ್ನುವವರನ್ನ ನೋಡಿದ್ದೀವಿ. ಇವನ ಯಾರು ಗುರು ಇರುವೆ ತಿನ್ನತ್ತಾನೆ ಅಂತಾ ಬಗೆ ಬಗೆಯ ರೀತಿಯಲ್ಲಿ ನೆಟ್ಟಿಗರು ಕಾಮೆಂಟ್ಸ್ ಹಾಕಿದ್ದಾರೆ.

ಕಳೆದ ವರ್ಷ ಕಿಶನ್ ಬಿಳಗಲಿ- ಗೀತಾ ಖ್ಯಾತಿಯ ಭವ್ಯಾ ಗೌಡ ಜೊತೆ ಸಿನಿಮಾ ಮಾಡುವ ಬಗ್ಗೆ ಅನೌನ್ಸ್ ಆಗಿತ್ತು. ಆದರೆ ಈಗ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಬೇರೇ ಪ್ರಾಜೆಕ್ಟ್ ಬ್ಯುಸಿಯಾಗಿದ್ದಾರಾ ಎಂಬ ಮಾಹಿತಿ ತಿಳಿದು ಬಂದಿಲ್ಲ. ಎಲ್ಲದ್ದಕ್ಕೂ ಕಾಯಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್