ಪ್ರೇಮಾ ನಂಬರ್‌ ಬ್ಲಾಕ್, ಮಾಜಿ ಲವರ್ ಸಂಪರ್ಕದಲ್ಲಿದ್ದ ಕಿರಣ್‌ – ಬ್ಯಾಡರಹಳ್ಳಿ ಕೇಸ್‌ಗೆ ಹೊಸ ಟ್ವಿಸ್ಟ್

1 Min Read

– ಆನ್‌ಲೈನಲ್ಲಿ ಹ್ಯಾಂಡ್ ಕಪ್, ಬೆಲ್ಟ್‌ ಖರೀದಿ
– ಕೇವಲ ಎರಡೇ ದಿನದಲ್ಲಿ ಕೊಲೆಗೆ ನಡೆದಿತ್ತಾ ಪ್ಲ್ಯಾನ್‌?

ಬೆಂಗಳೂರು: ಪ್ರಿಯಕರನನ್ನ (Lover) ಮನೆಗೆ ಕರೆಸಿಕೊಂಡು ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡ್ತೀನಿ ಅಂತಾ ಕೈಕಾಲು ಕಟ್ಟಿ ಬಟ್ಟೆ ಬಿಚ್ಚಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ. ಬ್ಯಾಡರಹಳ್ಳಿ ಪೊಲೀಸ್‌ ಠಾಣಾ (Byadarahalli Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

ಪ್ರಿಯತಮೆ ಪ್ರೇಮಾಳಿಂದ ಕೊಲೆಯಾದ ಕಿರಣ್‌, ಈಕೆಯನ್ನ ಅವಾಯ್ಡ್‌ ಮಾಡಿ ಮಾಜಿ ಲವರ್‌ ಜೊತೆಗೆ ಸಂಪರ್ಕದಲ್ಲಿದ್ದ, ಕೊಲೆಗೆ ಇದೇ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

- Advertisement -

- Advertisement -

ಹೌದು. 4 ವರ್ಷಗಳಿಂದ ಪರಿಚಿತಳಾಗಿದ್ದ ಪ್ರೇಮಾ ಜೊತೆಗೆ ಕಿರಣ್‌ಗೆ 2 ವರ್ಷದಿಂದ ಪ್ರೇಮವಾಗಿತ್ತು. ಆದ್ರೆ ಇದ್ದಕ್ಕಿದ್ದಂತೆ ಪ್ರೇಮಾಳನ್ನ ಅವಾಯ್ಡ್‌ ಮಾಡಲು ಶುರು ಮಾಡಿದ್ದ ಕಿರಣ್‌ ಮಾಜಿ ಪ್ರಿಯತಮೆಯೊಂದಿಗೆ ಸಂಪರ್ಕದಲ್ಲಿದ್ದನಂತೆ, ಇತ್ತೀಚೆಗೆ ಆಕೆಯ ಬರ್ತ್‌ಡೇ ಕೂಡ ಸೆಲಬ್ರೇಷನ್‌ ಮಾಡಿ ಫೋಟೋಸ್‌ ಕೂಡ ತೆಗೆದುಕೊಂಡಿದ್ದ. ಇದನ್ನ ನೋಡಿದ ಪ್ರೇಮಾ, ಕಿರಣ್‌ ಜೊತೆಗೆ ಗಲಾಟೆ ಮಾಡಿದ್ದಳು. ಆ ಬಳಿಕ ಕಿರಣ್‌, ಪ್ರೇಮಾಳ ನಂಬರನ್ನೇ ಬ್ಲಾಕ್‌ ಮಾಡಿದ್ದಾನೆ.

- Advertisement -

ಬಳಿಕ ಬೇರೊಂದು ನಂಬರ್‌ನಿಂದ ಕಿರಣ್‌ಗೆ ಕರೆ ಮಾಡಿದ್ದ ಪ್ರೇಮಾ ನೀನು ಹೇಳಿದ್ದ ದಿನವೇ ಮದುವೆ ಆಗೋಣ ಅಂತ ಹೇಳಿದ್ದಾಳೆ. ಅಷ್ಟರಲ್ಲೇ ಕೊಲೆಗೆ ಪ್ಲ್ಯಾನ್‌ ನಡೆದಿತ್ತು ಅಂತ ಹೇಳಲಾಗ್ತಿದೆ.

ಕೇವಲ ಎರಡೇ ದಿನದಲ್ಲಿ ಕೊಲೆಗೆ ಪ್ಲ್ಯಾನ್‌ ಮಾಡಲಾಗಿದೆ, ಅದಕ್ಕಾಗಿ ಹ್ಯಾಂಡ್ ಕಪ್, ಬೆಲ್ಟನ್ನ ಆನ್ ಲೈನ್ ನಲ್ಲಿ ಖರೀದಿ ಮಾಡಿದ್ದಳು. ಅನ್ನೋದು ಗೊತ್ತಾಗಿದೆ.

ಸದ್ಯ ತನಿಖೆ ಚುರುಕುಗೊಳಿಸಿರುವ ಪೊಲೀಸರು ಕೇವಲ ಪ್ರೇಮಾ ಗೂಗಲ್ ನಲ್ಲಿ ನೋಡಿ ಕೊಲೆಗೆ ಪ್ಲ್ಯಾನ್‌ ಮಾಡಿದ್ಳಾ? ಅಥವಾ ಯಾರದ್ದಾದ್ರು ಸಹಕಾರ ಇತ್ತಾ? ಅನ್ನೋ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Share This Article