ಬೆಂಗಳೂರಲ್ಲಿ ಕಟ್ಟಡ ಕುಸಿದು 8 ಕಾರ್ಮಿಕರು ಸಾವು ಪ್ರಕರಣ – ಎಇಇ ಅಮಾನತು

Public TV
1 Min Read

ಬೆಂಗಳೂರು: ಬಾಬುಸಾಬ್‌ಪಾಳ್ಯದಲ್ಲಿ (Babusapalya) ಭಾರೀ ಮಳೆಗೆ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದಾಗಿ 8 ಮಂದಿ ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಇಇ ಕೆ.ವಿನಯ್‌ ಅವರನ್ನು ಅಮಾನತು ಮಾಡಲಾಗಿದೆ.

ಹೊರಮಾವು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ವಿನಯ್‌ ಅವರನ್ನು ಅಮಾನತು ಮಾಡಿ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಕಟ್ಟಡ ಕುಸಿತ- ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಮಾಲೀಕ ಅರೆಸ್ಟ್

ನಿಗದಿ ಅವಧಿಯಲ್ಲಿ ನೋಟಿಸ್‌ ನೀಡಿದ್ದರೂ, ಅಕ್ರಮ ಕಟ್ಟಡ ಎಂದು ತಿಳಿದರೂ ತೆರವು ಮಾಡುವಲ್ಲಿ ಎಇಇ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಬಿಬಿಎಂಪಿ ಮಹದೇವಪುರ ವಲಯ ಆಯುಕ್ತರ ವರದಿ ಮೇರೆಗೆ ಅಮಾನತು ಮಾಡಿ ಆದೇಶಿಸಲಾಗಿದೆ.

ಭಾರೀ ಮಳೆಗೆ ಕಾರಣಕ್ಕೆ ಮಂಗಳವಾರ ಮಧ್ಯಾಹ್ನ 6 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ (Bengaluru Building Collapse) ಬುಡಮೇಲಾಗಿ ಬಿದ್ದಿತು. ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಹಲವಾರು ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದರು. ಅವರ ಪೈಕಿ 8 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಉಳಿದವರ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು ಕಟ್ಟಡ ಕುಸಿತ- ಮಾಲೀಕ, ಮಗನ ವಿರುದ್ಧ ಎಫ್‌ಐಆರ್ ದಾಖಲು

Share This Article