ದುಡ್ಡು ಕೊಟ್ರೆ ಟ್ರೈನಿಂಗ್‌ ಇಲ್ಲದೇ ಸಿಗುತ್ತೆ ಬ್ಯೂಟಿಪಾರ್ಲರ್ ಸರ್ಟಿಫಿಕೇಟ್..!

Public TV
2 Min Read

ಬೆಂಗಳೂರು: ಬ್ಯೂಟಿ ಪಾರ್ಲರ್‌ಗೆ ಹೆಣ್ಣುಮಕ್ಕಳು ಹೋಗೋದು ಕಾಮನ್. ಕೆಲವರಂತೂ ತಿಂಗಳಿಗೆ ಒಂದು ಬಾರಿಯಾದ್ರೂ ಹೋಗೇ ಹೋಗ್ತಾರೆ. ಆದರೆ ಈಗ ಶಾಕಿಂಗ್ ವಿಷಯ ಬಯಲಾಗಿದೆ.

ಬ್ಯೂಟಿಷಿಯನ್ಸ್ ಗಳು ನೋಂದಾಯಿತ ಬ್ಯೂಟಿಪಾರ್ಲರ್ ನಲ್ಲಿ ವರ್ಷಗಟ್ಟಲೇ ಟ್ರೈನಿಂಗ್‌ ಮಾಡಿ ಪ್ರಾಕ್ಟಿಕಲ್ ತರಬೇತಿಯನ್ನೂ ಪಡೆದುಕೊಂಡು ಅದಾದ ಬಳಿಕ ಅವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಆದರೀಗ ನೋಂದಾಯಿತ ಪಾರ್ಲರ್ ಅಸೋಸಿಯೇಷನ್ ಹೆಸರಿನಲ್ಲಿಯೇ 10 ಸಾವಿರ ದುಡ್ಡು ಕೊಟ್ರೇ ಯಾರಿಗೆ ಬೇಕಾದ್ರೂ, ಎಷ್ಟು ಬೇಕಾದ್ರೂ ಪಟಾಫಟ್ ಅಂತಾ ಟ್ರೈನಿಂಗ್‌ ಕೇಳದೇ ಸರ್ಟಿಫಿಕೇಟ್ ಕೊಡುವ ಏಜೆಂಟರು ಹುಟ್ಟುಕೊಂಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಇದನ್ನೂ ಓದಿ: ಹನುಮನ ಜನ್ಮಸ್ಥಳಕ್ಕಾಗಿ ನಿಲ್ಲದ ರಾಜ್ಯಗಳ ಕ್ಯಾತೆ – ಹನುಮಂತ ಹುಟ್ಟಿದ್ದು ಗೋವಾದಲ್ಲಿ ಎಂದ ಶ್ರೀನಿವಾಸ್ ಖಲಾಪ್

ಸ್ವತಃ ಈ ಆರೋಪ ಮಾಡ್ತಾ ಇರೋದು ಕರ್ನಾಟಕ ಬ್ಯೂಟಿ ಪಾರ್ಲರ್ ಅಸೋಸಿಯೇಷನ್. ಇವರದ್ದೇ ಸಂಸ್ಥೆಯ ಹೆಸರು ಬಳಸಿಕೊಂಡು ಸರ್ಟಿಫಿಕೇಟ್ ಮಾಡಿ ಕೆಲ ಏಜೆಂಟ್‌ರು ಮಾರಾಟ ಮಾಡುತ್ತಾ ಇದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಈ ಸಂಬಂಧ ಮಾತನಾಡಿರುವ ಆಡಿಯೋ ಸಹ ಲೀಕ್ ಆಗಿದೆ. ಇದನ್ನೂ ಓದಿ: ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ – ಷರತ್ತು ವಿಧಿಸಿ ಆರೋಪಿಗೆ ಜಾಮೀನು

ಈ ರೀತಿ ಬೇಕಾಬಿಟ್ಟಿ ದುಡ್ಡಿಗೆ ಸರ್ಟಿಫಿಕೇಟ್ ಮಾರಾಟ ಮಾಡೋದ್ರಿಂದ ಸೈಡ್‌ಎಫೆಕ್ಟ್ ಉಂಟಾಗುತ್ತದೆ. ಸಾಮಾನ್ಯವಾಗಿ ಆಯಾಯ ಚರ್ಮಕ್ಕೆ ಹೊಂದುವ ಪ್ರಾಡೆಕ್ಟ್ ಬಳಕೆ ಮಾಡಬೇಕು. ಕೆಲವು ಬಿಪಿ ಶುಗರ್ ಸಮಸ್ಯೆ ಇರೋರಿಗೆ ಕೆಲ ಪ್ರಾಡೆಕ್ಟ್ ಅಲರ್ಜಿ ಇರುತ್ತೆ. ಇದೆಲ್ಲವನ್ನು ತರಬೇತಿ ಪಡೆದುಕೊಂಡವರಿಗೆ ಅಷ್ಟೇ ಅರ್ಥವಾಗುತ್ತದೆ. ಆದರೆ ಹೀಗೆ ಟ್ರೈನಿಂಗ್‌ ಇಲ್ಲದೇ ಸರ್ಟಿಫಿಕೇಟ್ ಕೊಡುವ ದಂಧೆಯಿಂದ ನಿಜವಾಗಿಯೂ ತರಬೇತಿ ಪಡೆದವರಿಗೆ ಸಮಸ್ಯೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಆಡಿಯೋ ನಲ್ಲಿ ಏನಿದೆ?

  • ಏಜೆಂಟ್ – ಅದು ಮಾಡಿಸಿರೋದು ಏಜೆಂಟ್
    ಅನಿತಾ – ಯಾರು?
  • ಏಜೆಂಟ್ – ಅದಕ್ಕೆ ಒಬ್ರು ಏಜೆಂಟ್ ರ‍್ತಾರೆ ಅವ್ರು ಮಾಡಿಸೋದು
    ಅನಿತಾ – ಹೋ ಅದಕ್ಕೆ ಏಜೆಂಟ್ ಬೇರೆ ರ‍್ತಾರಾ?
  • ಅನಿತಾ – ನಮ್ಗೆ ಬೇಕು ಅಂದ್ರೆ?
    ಏಜೆಂಟ್ – ಅದನ್ನು ಹತ್ತುಸಾವಿರ ಕೊಟ್ಟುಮಾಡಿಸಿರೋದು
  • ಏಜೆಂಟ್ – ನಿಮ್ಗೆ ಬೇಕಾದ್ರೇ ಹೇಳಿ ಮಾಡಿಸಿಕೊಡ್ತೀನಿ ನಾನು
    ಅನಿತಾ – ಹಂಗಾದ್ರೇ ಬೇಕು 2 ಸರ್ಟಿಫಿಕೇಟ್
  • ಏಜೆಂಟ್ – 2 ಯಾಕೆ 10 ಕೊಡ್ತೀನಿ ಬೇಕಾದ್ರೇ

Share This Article
Leave a Comment

Leave a Reply

Your email address will not be published. Required fields are marked *