ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ರಣಜಿ ಟ್ರೋಫಿಯಲ್ಲಿ DRS ಬಳಸಲು ಹಣವಿಲ್ಲ!

Public TV
2 Min Read

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಡಿಆರ್‌ಎಸ್ (ಮೈದಾನದ ಅಂಪೈರ್ ತೀರ್ಪಿನ ವಿರುದ್ಧ ಮೂರನೇ ಅಂಪೈರ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶ) ಇಲ್ಲದೆ ಹಲವು ಗೊಂದಲಕ್ಕೆ ಕಾರಣವಾಗಿದೆ. ಈ ಮೂಲಕ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ಡಿಆರ್‌ಎಸ್ ತಂತ್ರಜ್ಞಾನ ಅಳವಡಿಸಲು ಹಣವಿಲ್ಲದ ಪರಿಸ್ಥಿತಿ ಬಂದಿದೆ ಎಂಬ ಟೀಕೆಗೆ ಗುರಿಯಾಗಿದೆ.

ರಣಜಿ ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಫೈನಲ್‍ನಲ್ಲಿ ಮುಂಬೈ ಮತ್ತು ಮಧ್ಯಪ್ರದೇಶ ತಂಡ ಕಾದಾಡುತ್ತಿದೆ. ಈ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟ್ಸ್‌ಮ್ಯಾನ್‌ ಸರ್ಫರಾಜ್ ಖಾನ್ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದರೂ ಮೈದಾನದ ಅಂಪೈರ್ ನೀಡಿದ ತೀರ್ಪಿನಿಂದ ಬಚಾವ್ ಆಗಿ ಅಮೋಘ ಶತಕ ಸಿಡಿಸಿ ಬೀಗಿದ್ದರು. ಈ ವೇಳೆ ಮಧ್ಯಪ್ರದೇಶ ತಂಡ ಮೂರನೇ ಅಂಪೈರ್‌ಗೆ ಮನವಿ ಸಲ್ಲಿಸುವ ಡಿಆರ್‌ಎಸ್ ಅವಕಾಶ ಇದ್ದಿದ್ದರೆ ಅದರ ಲಾಭ ಪಡೆಯುತ್ತಿತ್ತು. ಈ ಪಂದ್ಯದಲ್ಲಿ ಡಿಆರ್‌ಎಸ್ ತಂತ್ರಜ್ಞಾನವನ್ನು ಬಿಸಿಸಿಐ ಬಳಸಿರಲಿಲ್ಲ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

ಈ ಬಗ್ಗೆ ತೀವ್ರ ಟೀಕೆಗಳು ಕೇಳಿಬರುತ್ತಿದ್ದು ಬಿಸಿಸಿಐ ಮಹತ್ವದ ಪಂದ್ಯಗಳಿಗೆ ಡಿಆರ್‌ಎಸ್ ಬಳಸಲಾಗದಷ್ಟು ಸೊರಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಬಿಸಿಸಿಐ ಹಿರಿಯ ಅಧಿಕಾರಿಗಳನ್ನು ಕೇಳಿದಾಗ ಡಿಆರ್‌ಎಸ್ ವ್ಯವಸ್ಥೆ ಬಳಸಲು ದುಬಾರಿ ವೆಚ್ಚವಾಗುತ್ತದೆ. ಹಾಕ್ ಐ ಸೌಲಭ್ಯಕ್ಕೆ ಹೆಚ್ಚುವರಿ ಕ್ಯಾಮೆರಾಗಳನ್ನು ಬಳಸಬೇಕಾಗುತ್ತದೆ. ಇದನ್ನು ಕೇವಲ ಒಂದು ಪಂದ್ಯಕ್ಕೆ ಜೋಡಿಸುವುದು ವ್ಯರ್ಥ ಮತ್ತು ದುಬಾರಿ ಖರ್ಚು ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ತಂಡಕ್ಕೆ ಸ್ಫೂರ್ತಿ ತುಂಬಲು ಲಕ್ಷ, ಲಕ್ಷ ಸುರಿದು ಜ್ಯೋತಿಷಿಯನ್ನು ನೇಮಕ ಮಾಡಿದ AIFF

ದುಬಾರಿ ವೆಚ್ಚ ಖರ್ಚು ಮಾಡಿ ಪಂದ್ಯ ನಡೆಸುವುದರ ಬದಲು ನಮ್ಮ ಅಂಪೈರ್‌ಗಳ ಮೇಲೆ ನಂಬಿಕೆ ಇದೆ. ಅಂಪೈರ್‌ಗಳು ಉತ್ತಮ ನಿರ್ಧಾರಗಳನ್ನು ನೀಡುತ್ತಾರೆ. ನಾವು ಒಂದು ಪಂದ್ಯಕ್ಕೆ ಡಿಆರ್‌ಎಸ್‌ ಬಳಸಿದರೆ ಉಳಿದ ಲೀಗ್‌ ಪಂದ್ಯಗಳಿಗೂ ಡಿಆರ್‌ಎಸ್‌ ಬಳಸಬೇಕಾಗುತ್ತದೆ ಎಂದು ಸಮಜಾಯಿಷಿ ನೀಡಿದ್ದಾರೆ. ಈ ಬಗ್ಗೆ ಪ್ರಶ್ನೆ ಎತ್ತಿರುವ ಅಭಿಮಾನಿಗಳು ಬಿಸಿಸಿಐ ನಡೆಸುವ ಐಪಿಎಲ್‍ನ ಪ್ರಸಾರ ಹಕ್ಕು 48.390 ಕೋಟಿ ರೂ.ಗೆ ಸೇಲ್ ಆಗಿ ದಾಖಲೆ ಬರೆದಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆ ಇರುವ ಬಿಸಿಸಿಐ ಈ ರೀತಿ ಡಿಆರ್‌ಎಸ್ ವ್ಯವಸ್ಥೆ ಅವಳವಡಿಸಲು ಜಿಪುಣತನ ಮಾಡುವುದೇಕೆ ಎಂದು ಕಾಲೆಳೆದಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *