ಕೊನೆಗೂ ಗಾಢ ನಿದ್ರೆಯಿಂದ ಎದ್ದ ಪಾಲಿಕೆ – ಟ್ರಾಫಿಕ್ ಪೊಲೀಸರ ಬಳಿ ರಸ್ತೆ ಗುಂಡಿಗಳ ಮಾಹಿತಿ ಕೇಳಿದ BBMP

Public TV
1 Min Read

ಬೆಂಗಳೂರು: ಕೊನೆಗೂ ಬಿಬಿಎಂಪಿ (BBMP) ಕುಂಭಕರ್ಣ ನಿದ್ರೆಯಿಂದ ಎದ್ದಂತೆ ಕಾಣುತ್ತಿದೆ. ನಗರದ ರಸ್ತೆ ಗುಂಡಿಗಳಿಗೆ (Road Potholes) ಬಿದ್ದು ಅನಾಹುತಗಳು ಸಾವು-ನೋವು ವರದಿಯಾಗುತ್ತಿದ್ದಂತೆ ಜನರು ಪಾಲಿಕೆಗೆ ಹಿಡಿಶಾಪ ಹಾಕುತ್ತಿರುವುದರಿಂದ ಎಚ್ಚೆತ್ತಂತೆ ಕಾಣುತ್ತಿದೆ.

ಬೆಂಗಳೂರು ಸಂಚಾರ ಪೊಲೀಸರ (Bangaluru Traffic Police) ಬಳಿ ನಗರದ ರಸ್ತೆಗಳಲ್ಲಿರೋ ಗುಂಡಿಗಳ ಮಾಹಿತಿ ಕೇಳಿದೆ. 8 ವಲಯದ ಪ್ರಮುಖ ರಸ್ತೆಗಳಲ್ಲಿರೋ ಗುಂಡಿಗಳ ಸಂಪೂರ್ಣ ಮಾಹಿತಿ ನೀಡುವಂತೆ ಪಾಲಿಕೆ ಕೇಳಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರೈನೇಜ್ ಬ್ಲಾಕ್ ದಂಧೆ – ಹಣಕ್ಕಾಗಿ ಮಿಡ್‌ನೈಟ್‌ ಆಪರೇಷನ್‌

ಪಾಲಿಕೆಯ ಮನವಿ ಮೇರೆಗೆ ಸಂಚಾರ ಪೊಲೀಸರು ನಿರಂತರ ಮಳೆಯಿಂದ ನಗರದಲ್ಲಿ ಹೊಸದಾಗಿ ರಸ್ತೆಯಲ್ಲಿ ಬಾಯಿ ತೆರೆದಿರೋ ಗುಂಡಿಗಳ ಸಂಪೂರ್ಣ ಮಾಹಿತಿ ಸಿದ್ದಪಡಿಸಿದ್ದು, ಒಂದು ವಾರದ ಒಳಗಾಗಿ ನಗರದ ರಸ್ತೆಗಳಲ್ಲಿರೋ ಗುಂಡಿಗಳ ಮಾಹಿತಿ ಕೊಡಲು ಸಂಚಾರಿ ಪೊಲೀಸರು (Police) ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಸಾವನ್ನಪ್ಪುವ ಮೊದಲು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೆರಳಿದ್ದ ಮೇಸ್ತಾ – ಸಿಬಿಐ ವರದಿಯಲ್ಲಿ ಬಯಲು

ತಪ್ಪೊಪ್ಪಿಕೊಂಡ ಸಿಎಂ:
ಬೆಂಗಳೂರು (Bengaluru) ರಸ್ತೆಗಳ ಗುಂಡಿಗಳಿಗೆ ಮತ್ತೊಬ್ಬರ ಬಲಿ ಆಗಿದೆ. ಓಕುಳಿಪುರಂನ ಸುಜಾತಾ ಸ್ಟಾಪ್ ಬಳಿ ನಡೆದ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಉಮಾ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನಿನ್ನೆಯೆಲ್ಲಾ ಈ ದುರಂತ, ರಸ್ತೆ ಗುಂಡಿಯಿಂದ ಆಗಿದ್ಯೋ ಅಥವಾ ಬೇರಾವ ಕಾರಣದಿಂದ ಆಗಿದ್ಯೋ ಎಂದು ಅನುಮಾನ ವ್ಯಕ್ತಪಡಿಸಿದ್ದ ಪಾಲಿಕೆ, ನಿನ್ನೆ ತರಾತುರಿಯಲ್ಲಿ ಗುಂಡಿ ಮುಚ್ಚಿದೆ. ನಾಮ್‌ಕಾವಾಸ್ತೆಗೆ ಎಂಬಂತೆ ಡಾಂಬರು ಸುರಿದು ಹೋಗಿದೆ. ಇದು ಯಾವಾಗ ಮತ್ತೆ ಬಾಯ್ತೆರೆಯುತ್ತೋ ಗೊತ್ತಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ, ಹೌದು ಇಲ್ಲಿ ಗುಂಡಿ ಇದೆ. ಇದ್ರಿಂದ್ಲೇ ಅಪಘಾತವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಸಿಎಂ ಬೊಮ್ಮಾಯಿ (CM Basavaraj Bommai) ಕೂಡ, ಇದು ಕಳಪೆ ಕಾಮಗಾರಿಯಿಂದಾದ ಅವಾಂತರ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಮೃತರ ಪುತ್ರಿ ನೀಡಿದ ದೂರಿನ ಮೇರೆಗೆ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *