ಸುಹಾಸ್‌ ಹತ್ಯೆ ಕೇಸ್‌ | ಮಂಗಳೂರು – ಚಿಕ್ಕಮಗಳೂರು ಗಡಿಯಲ್ಲಿ ಭಾರೀ ಬಂದೋಬಸ್ತ್

By
2 Min Read

ಚಿಕ್ಕಮಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆ ಬಳಿಕ ಮಂಗಳೂರಿನಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಕರಣದಲ್ಲಿ ಕಳಸ ಮೂಲದ ಇಬ್ಬರು ಆರೋಪಿಗಳು ಸಹ ಭಾಗಿಯಾಗಿದ್ದು, ಪೊಲೀಸರು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಚಿಕ್ಕಮಗಳೂರು (Chikkamagaluru) – ಮಂಗಳೂರು (Mangaluru) ಗಡಿಯಲ್ಲಿ ಭಾರೀ ಭದ್ರತೆ ಕೈಗೊಂಡಿದ್ದಾರೆ.

- Advertisement -

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪೊಲೀಸರು ಚೆಕ್‌ಪೋಸ್ಟ್‌ನಲ್ಲಿ ಪ್ರತಿ ವಾಹನವನ್ನೂ ತಪಾಸಣೆ ಮಾಡಿ ಬಿಡುತ್ತಿದ್ದಾರೆ. ಕೊಟ್ಟಿಗೆಹಾರ-ಚಾರ್ಮಾಡಿ ಘಾಟಿಯಲ್ಲಿ ಗಸ್ತು ಹೆಚ್ಚಿಸಲಾಗಿದೆ. ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುವ ಪ್ರತಿಯೊಂದು ವಾಹನದ ಮೇಲೂ ತೀವ್ರ ನಿಗಾ ಇಡಲಾಗಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ವೇಳೆ ಕಾಣಿಸಿಕೊಂಡಿದ್ದ ಬುರ್ಖಾಧಾರಿ ಮಹಿಳೆಯರ ಬಗ್ಗೆ ಪೊಲೀಸ್‌ ಕಮಿಷನರ್ ಹೇಳಿದ್ದೇನು?

- Advertisement -

ಬಜ್ಪೆಯ ಕಿನ್ನಿಪದವು ಬಳಿ ಗುರುವಾರ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಲ್ಲಿ ಫಾಝಿಲ್‌ನ ಸಹೋದರ ಆದಿಲ್ ಮೆಹರೂಫ್‌ನೆ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ.

- Advertisement -

- Advertisement -

ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದವರನ್ನು ಅಬ್ದುಲ್ ಸಫ್ವಾನ್, ನಿಯಾಝ್, ಮಹಮ್ಮದ್ ಮುಸಮ್ಮೀರ್, ಕಲಂದರ್ ಶಾಫಿ, ಆದಿಲ್ ಮೆಹರೂಫ್, ರಂಜಿತ್, ಮಹಮ್ಮದ್ ರಿಝ್ವಾನ್ ಹಾಗೂ ನಾಗರಾಜ್ ಎಂದು ಗುರುತಿಸಲಾಗಿದೆ. ಹತ್ಯೆಯಲ್ಲಿ 10 ಜನ ಭಾಗಿಯಾಗಿದ್ದಾರೆ, ಇನ್ನೂ ಇಬ್ಬರ ಬಂಧನ ಬಾಕಿ ಇದೆ. ಈ ಪ್ರಕರಣವನ್ನು ರಿವೇಂಜ್ ಎಂದು ಹೇಳೊಕೆ ಈಗ ಆಗಲ್ಲ. ಸಫ್ವಾನ್‌ಗೂ ಸುಹಾಸ್‌ನಿಂದ ಕೊಲೆಯಾಗುವ ಆತಂಕ ಇತ್ತು. ಹಾಗಾಗಿ ಆದಿಲ್‌ ಸಂಪರ್ಕ ಪಡೆದು ಕೊಲೆ ಮಾಡಲಾಗಿದೆ ಎಂದು ಮಂಗಳೂರು (Mangaluru) ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಸುಹಾಸ್ ಹತ್ಯೆಗೆ 5 ಲಕ್ಷ ರೂ. ನೀಡೋದಾಗಿ ಫಾಜಿಲ್‍ನ ತಮ್ಮ ಆದಿಲ್ ಸಫ್ವಾನ್ ತಂಡಕ್ಕೆ ಹೇಳಿರುತ್ತಾನೆ. ಅದರಲ್ಲಿ 3 ಲಕ್ಷ ರೂ. ಅಡ್ವಾನ್ಸ್ ನೀಡಿರುತ್ತಾನೆ. ಬಳಿಕ ಒಂದು ತಂಡವನ್ನು ಹತ್ಯೆಗಾಗಿ ಸಫ್ವಾನ್ ರೆಡಿ ಮಾಡ್ತಾನೆ. ನಿಯಾಜ್‌ನ ಇಬ್ಬರು ಸ್ನೇಹಿತರು ನಾಗಾರಾಜ್ ಮತ್ತು ರಂಜಿತ್‌ನನ್ನು ಸಂಪರ್ಕಿಸಿ, ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ಇದ್ದು, ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Suhas Shetty Murder: 8 ಆರೋಪಿಗಳ ಬಂಧನ

Share This Article