ಮಾಜಿ ಸಚಿವರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಲು ರಕ್ಷಣೆ ಕೋರಿದ ರೈತರು!

Public TV
2 Min Read

ಬಾಗಲಕೋಟೆ: ಮಾಜಿ ಸಚಿವ ಎಸ್‌.ಆರ್‌.ಪಾಟೀಲ್ ಮಾಲೀಕತ್ವದ ಬೀಳಗಿ ಸಕ್ಕರೆ ಕಾರ್ಖಾನೆ ವಿರುದ್ಧ ರೈತರಲ್ಲದವರು ದರ ವಿಚಾರವಾಗಿ ಬಿತ್ತಿಪತ್ರ ಹರಿಬಿಟ್ಟು ಕಬ್ಬು ಪೂರೈಸುವ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಬೀಳಗಿ ಕಬ್ಬು ಬೆಳೆಗಾರರು ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಬಾಡಗಂಡಿ ಬಳಿಯಿರುವ ಬೀಳಗಿ ಸಕ್ಕರೆ ಕಾರ್ಖಾನೆ ವಿರುದ್ಧ ಕೆಲ ಅನಾಮಿಕರು ಎಫ್‌ಆರ್‌ಪಿ ದರಕ್ಕಿಂತ ಕಡಿಮೆ ದರ ಕೊಡುತ್ತಿದ್ದಾರೆ ಎಂದು ಸಕ್ಕರೆ ಕಾರ್ಖಾನೆ ವಿರುದ್ಧ ಬಿತ್ತಿಪತ್ರ ಹರಿಬಿಟ್ಟಿದ್ದಾರೆ. ನಿಜವಾಗಿ ನಾವು ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುತ್ತಿದ್ದೇವೆ. ಅನಾಮಿಕ, ರಾಜಕೀಯ ಪ್ರೇರಿತರು ಕಬ್ಬು ಪೂರೈಸುವ ಟ್ರ್ಯಾಕ್ಟರ್‌ಗೆ ತೊಂದರೆ ಕೊಡುವ ಸಾಧ್ಯತೆಯಿದೆ. ಅದಕ್ಕೆ ಪೊಲೀಸರು ರಕ್ಷಣೆ ಕೊಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಅವರಿಗೂ ಮನವಿ ಸಲ್ಲಿಸಿದ್ದಾರೆ. ನಂತರ ಜಿಲ್ಲಾಡಳಿತ ಭವನಕ್ಕೂ ಆಗಮಿಸಿದ ರೈತರು, ಜಿಲ್ಲಾಧಿಕಾರಿ ಮೂಲಕ ಮನವಿ ಮಾಡಿದ್ದಾರೆ‌. ಇದನ್ನೂ ಓದಿ: ವಾಯುಸೇನೆ ವಿಮಾನದಲ್ಲಿ ಲ್ಯಾಂಡಿಂಗ್ – ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಮೋದಿ

2019-20ನೇ ಸಾಲಿಗೆ ಬೀಳಗಿ ಸಕ್ಕರೆ ಕಾರ್ಖಾನೆಯವರು ಕೊಟ್ಟ ಪ್ರಕಟಣೆ ಪ್ರಕಾರ ಪ್ರತಿ ಟನ್‌ಗೆ 2,500 ರೂ. ಪ್ರಥಮ ಕಂತಾಗಿ ಕೊಟ್ಟಿರುತ್ತಾರೆ. ಹೆಚ್ಚುವರಿ ಘೋಷಿಸಿದಂತೆ 200 ರೂ. ಈಗಾಗಲೇ ನವೆಂಬರ ತಿಂಗಳ ಬಿಲ್ಲನ್ನು ಕಾರ್ಖಾನೆ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಕೊಟ್ಟಿದ್ದು, ಉಳಿದ ರೈತರಿಗೆ ತಮ್ಮ ಸಮಕ್ಷಮ ನಡೆದ ಸಭೆಯಲ್ಲಿ ತಿಳಿಸಿದ ಹಾಗೆ ಈ ತಿಂಗಳ ಕೊನೆಯವರೆಗೆ ಆ ಹಣ ಸಂದಾಯ ಮಾಡಿಸಲು ನಾವು ಬದ್ಧರಿದ್ದೇವೆ. ಈ ದರವು ಕೇಂದ್ರ ಸರ್ಕಾರ ನಿಗದಿ ಪಡಿಸಿರುವ ಎಫ್.ಆರ್.ಪಿ ದರಕ್ಕಿಂತ ಪ್ರತಿ ಟನ್ 402 ರೂ. ಹೆಚ್ಚಿಗೆ ಕೊಟ್ಟಿರುತ್ತಾರೆ. ಅದೇ ರೀತಿ ಬಾಗಲಕೋಟೆ ಜಿಲ್ಲೆಯ ಬಾದಾಮಿ 2,500 ರೂ. ಹಾಗೂ ಆಲಮಟ್ಟಿ 2,252 ರೂ. ಭಾಗದ ಕಾರ್ಖಾನೆಗಿಂತ ಹೆಚ್ಚುವರಿಯಾಗಿ 200 ರೂ.ರಿಂದ 448 ರೂ.ವರೆಗೆ ಕೊಡಿಸಿದಂತಾಗುತ್ತದೆ. ಇದನ್ನೂ ಓದಿ: ಬಿಟ್ ಕಾಯಿನ್ ವಿಚಾರದಲ್ಲಿ ಬಿಜೆಪಿಗರ ಪಾತ್ರ ಬಹಿರಂಗಪಡಿಸಿ – ಕಾಂಗ್ರೆಸ್‍ಗೆ ಗೋಪಾಲಯ್ಯ ಸವಾಲು

ಬಾದಾಮಿ ಮತ್ತು ಆಲಮಟ್ಟಿ ಭಾಗದ ಕಾರ್ಖಾನೆಯವರು ಪಾವತಿಸಿದ ದರಕ್ಕಿಂತಲೂ ಹೆಚ್ಚಿಗೆ ಇದೆ. ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ ಕೆಲ ಅನಾಮಿಕರು ದರ ವಿಚಾರವಾಗಿ ಬೀಳಗಿ ಸಕ್ಕರೆ ಕಾರ್ಖಾನೆ ವಿರುದ್ಧ ವಿನಾಕಾರಣ ಸತ್ಯಾಗ್ರಹ ಎಚ್ಚರಿಕೆ ಕೊಟ್ಟಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಮಾಲೀಕತ್ವದ ಬಾದಾಮಿ ಶುಗರ್ಸ್‌ನವರು ರೈತರಿಗೆ ಸೂಕ್ತ ದರ ನೀಡುತ್ತಿಲ್ಲ. ಜೊತೆಗೆ ತೂಕದಲ್ಲೂ ವಂಚನೆ ಆಗುತ್ತಿದೆ. ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ರೈತರು ಆರೋಪಿಸಿದ್ದಾರೆ.

2020-21ಕ್ಕೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಸಕ್ಕರೆ ಕಾರ್ಖಾನೆಯವರು 2,500 ರೂ. ಕೊಟ್ಟಿರುತ್ತಾರೆ. ಈ ದರವು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್.ಆರ್.ಪಿ ದೂರು ಪ್ರತಿ ಟನ್‌ಗೆ 257 ರೂ. ಹೆಚ್ಚಿಗೆ ಕೊಟ್ಟಿರುತ್ತಾರೆ. ಬೀಳಗಿ ಕಾರ್ಖಾನೆಯ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಂಘ ಹಾಗೂ ಬೀಳಗಿ ವ್ಯಾಪ್ತಿಯ ರೈತರು ಒಪ್ಪಿಕೊಂಡು ಕಬ್ಬು ಪೂರೈಕೆ ಮಾಡುತ್ತಿದ್ದೇವೆ. ಕಬ್ಬು ಸರಬರಾಜು ಮಾಡುವ ವಾಹನಗಳಿಗೆ ಸೂಕ್ತ ರಕ್ಷಣೆ ಕೊಡಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ವಿನಂತಿಸುತ್ತೇವೆ. ಕಬ್ಬು ಸರಬರಾಜು ಮಾಡುವ ವಾಹನಗಳಿಗೆ, ಕಬ್ಬಿಗೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾದಲ್ಲಿ ಪ್ರತಿಭಟನಾಕಾರರೆ ಹೊಣೆಗಾರರಾಗುತ್ತಾರೆ ಎಂದು ಮನವಿ ವೇಳೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *