ಕೋತಿ ರಕ್ಷಿಸಲು ಸಡನ್‌ ಬ್ರೇಕ್‌ – ಆಟೋ ಚಾಲಕ‌‌ ಸಾವು

1 Min Read

ತುಮಕೂರು: ರಸ್ತೆ ದಾಟುತ್ತಿದ್ದ ಕೋತಿಯನ್ನು (Monkey) ರಕ್ಷಿಸಲು ಹೋಗಿ ರಿಕ್ಷಾ ಚಾಲಕರೊಬ್ಬರು (Auto Driver) ಮೃತಪಟ್ಟ ಘಟನೆ ಕೊರಟಗೆರೆಯ ಜಂಪೇನಹಳ್ಳಿ ಬಳಿ ನಡೆದಿದೆ.

- Advertisement -

ಸೋಂಪುರ‌ ನಿವಾಸಿ‌ ಮಹೇಂದ್ರಕುಮಾರ್ ಸಾವನಪ್ಪಿದ ಚಾಲಕ. ಕೊರಟಗೆರೆಯಿಂದ ತುಮಕೂರು (Tumkakuru) ಕಡೆಗೆ ಆಟೋ‌‌ ಹೋಗುತ್ತಿದ್ದಾಗ ಜಂಪೇನಹಳ್ಳಿ‌ ಬಳಿ ಕೋತಿಯೊಂದು ಅಡ್ಡ ಬಂದಿದೆ.

- Advertisement -

 

- Advertisement -

ರಸ್ತೆ ದಾಟುತ್ತಿದ್ದ ಕೋತಿಯನ್ನು ‌ಬಚಾವ್ ಮಾಡಲು ಹೋಗಿ ಚಾಲಕ ಮಹೇಂದ್ರ ಕುಮಾರ್ ಸಡನ್‌ ಬ್ರೇಕ್ ಹಾಕಿದ್ದಾರೆ. ಪರಿಣಾಮ ಆಟೋ ಪಲ್ಟಿಯಾಗಿದೆ. ಪಲ್ಟಿಯಾದ ಆಟೋಗೆ ತುಮಕೂರು ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಡಿಕ್ಕಿ ‌ಹೊಡೆದಿದೆ. ಇದನ್ನೂ ಓದಿ: ನೀನೇ ಖುಷಿಯಾಗಿರು, ನಾನು ಪ್ರಪಂಚನೇ ಬಿಟ್ಟು ಹೋಗ್ತಿದಿನಿ – ಸ್ಟೇಟಸ್ ಹಾಕಿ ನೀರಿಗೆ ಬಿದ್ದು ವಿದ್ಯಾರ್ಥಿ ಸೂಸೈಡ್

- Advertisement -

ಕಾರು ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಮಹೇಂದ್ರ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
Share This Article