ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗಕ್ಕೆ ಕೈ ಹಾಕಿ ವಿಕೃತಿ – ಆಟೋ ಚಾಲಕ ಅರೆಸ್ಟ್

1 Min Read

ಬೆಂಗಳೂರು: ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗಕ್ಕೆ ಕೈ ಹಾಕಿ ಆಟೋ ಚಾಲಕ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ (Bengaluru) ಜೆಪಿ ನಗರದಲ್ಲಿ (JP Nagar) ನಡೆದಿದೆ.

ಆಟೋ ಚಾಲಕನನ್ನು ಹನುಮಂತಪ್ಪ ಹೆಚ್ ತಳವಾರ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಉಳ್ಳವರು ಮೀಸಲಾತಿ ಬಿಟ್ಟು ಕೊಡಬೇಕು – ಖರ್ಗೆ ಮಗನಿಗೂ ಮೀಸಲಾತಿ, ಇದು ಸರಿನಾ: ವಿಶ್ವನಾಥ್ ಪ್ರಶ್ನೆ

ಓರ್ವ ಯುವತಿ ಜೆಪಿ ನಗರದ ಏಳನೇ ಹಂತದಿಂದ ಆಟೋ ಬುಕ್ ಮಾಡಿದ್ದರು. ಆಟೋ ಲೋಕೇಶನ್‌ಗೆ ಬಂದ ತಕ್ಷಣ ಚಾಲಕ ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಮೈ ಮುಟ್ಟಿದ್ದ. ಅಲ್ಲದೇ ನೀನು ಸಿನಿಮಾ ಹಿರೋಯಿನ್ ತರಾ ಇದೀಯಾ ಎಂದಿದ್ದನಂತೆ. ಬಳಿಕ ಯುವತಿ ಆಟೋ ಒಳಗೆ ಕುಳಿತುಕೊಳ್ಳುತ್ತಿದ್ದಂತೆ ಜ್ವರ ಇದೀಯಾ ಎಂದು ಹಣೆ ಮುಟ್ಟಿ ಖಾಸಗಿ ಅಂಗಕ್ಕೆ ಕೈ ಹಾಕಿದ್ದಾನೆ. ಕೂಡಲೇ ಯುವತಿ ಆಟೋದಿಂದ ಜಿಗಿದು ಓಡಿಹೋಗಿದ್ದಾರೆ.

ಈ ಕುರಿತು ಯುವತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಜೊತೆಗೆ ಆತ ಕೆಲಸ ಮಾಡುತ್ತಿದ್ದ ಕ್ಯಾಬ್ ಕಂಪನಿಗೂ ಮಾಹಿತಿ ನೀಡಿ, ಆತನ ಲೈಸೆನ್ಸ್ ವಿರುದ್ಧ ಕ್ರಮ ತೆಗದುಕೊಳ್ಳಲು ಸೂಚಿಸಿದ್ದಾರೆ. ಸದ್ಯ ಪುಟ್ಟೇನಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.ಇದನ್ನೂ ಓದಿ: ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವಂತೆ ರಿಟ್ ಅರ್ಜಿ – ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆದ ಎಸ್‌ಐಟಿ

Share This Article