ಡಿಸೆಂಬರ್ ನಲ್ಲಿ ಕೊಹ್ಲಿ-ಅನುಷ್ಕಾ ಮದುವೆ ಆಗ್ತಾರಾ? ಕೊನೆಗೂ ಸಿಕ್ತು ಉತ್ತರ

Public TV
1 Min Read

ಮುಂಬೈ: ಕ್ರಿಕೆಟ್‍ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ಎಂದು ಸುದ್ದಿಯೊಂದು ಬಾಲಿವುಡ್ ಮತ್ತು ಕ್ರಿಕೆಟ್ ಅಂಗಳದಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದೆ.

ಬಾಲಿವುಡ್ ಟಾಪ್ ನಟಿಯಾಗಿರುವ ಅನುಷ್ಕಾ ಶರ್ಮಾ ಬಹು ದಿನಗಳ ಗೆಳೆಯ ವಿರಾಟ್ ಕೊಹ್ಲಿಯನ್ನು ವರಿಸಲಿದ್ದು, ಮದುವೆಗಾಗಿ ಕೊಹ್ಲಿ ಡಿಸೆಂಬರ್ ನಲ್ಲಿ ದೀರ್ಘಕಾಲದ ರಜೆ ಪಡೆದಿದ್ದಾರೆ ಅಂತಾ ಹೇಳಲಾಗಿತ್ತು. ಆದರೆ ಅನುಷ್ಕಾರ ಟ್ಯಾಲೆಂಟ್ ಏಜೆನ್ಸಿ, ಅವರು ಡಿಸೆಂಬರ್ ನಲ್ಲಿ ಮದುವೆ ಆಗುತ್ತಿಲ್ಲ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದೆ.

ಇತ್ತೀಚೆಗೆ ವಿರಾಟ್ ಮತ್ತು ಅನುಷ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡು, ಮದುವೆಯ ಬಗ್ಗೆ ಮಾತುಗಳನ್ನು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಆದರೆ ಇದೀಗ ತಾವು ಮದುವೆ ಆಗುತ್ತಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆಯನ್ನು ಮೂಡಿಸಿದ್ದಾರೆ.

ಜಾಹೀರಾತಿನಲ್ಲಿ ಏನಿತ್ತು?:
ಈ ಜಾಹೀರಾತಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸುವ ಈ ಜೋಡಿ ವಧು-ವರರು ಮಾತನಾಡಿಕೊಳ್ಳುತ್ತಿರುವ ಶೈಲಿಯನ್ನ ಕಾಮಿಕ್ ಆಗಿ ಪ್ರಸ್ತುತಪಡಿಸಿದ್ದಾರೆ. ತಿಂಗಳಲ್ಲಿ 15 ದಿನ ವಿರಾಟ್ ಅಡುಗೆ ಮಾಡೋದಾಗಿ ಒಪ್ಪಿಕೊಂಡರೆ ಯಾವುದೇ ಕಂಪ್ಲೇಂಟ್ ಇಲ್ಲದೆ ಅನುಷ್ಕಾ ಸೇವಿಸೋದಾಗಿ ಹೇಳಿದ್ದಾರೆ. ಇನ್ನು ವಿರಾಟ್ ಅನುಷ್ಕಾರನ್ನ ಯಾವುತ್ತೂ ಕೈಹಿಡಿದು ಕಾಪಾಡೋದಾಗಿ ಹೇಳಿರುವ ಮಾತು ಇವರಿಬ್ಬರ ಪ್ರೀತಿ ಪ್ರೇಮವನ್ನ ಸಾರಿ ಸಾರಿ ಹೇಳುತ್ತಿತ್ತು.

ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಕೆಲವು ಸರಣಿಯಲ್ಲಿ ತಮಗೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಬಿಸಿಸಿಐಗೆ ಕೊಹ್ಲಿ ಮನವಿಯಲ್ಲಿ ತಿಳಿಸಿದ್ದರು. ಜನವರಿಯಿಂದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಳ್ಳಲಿದ್ದು, ನಿರಂತರ ಕ್ರಿಕೆಟ್ ಆಡುತ್ತೀರೋ ಕೊಹ್ಲಿ ಅದಕ್ಕೂ ಮೊದಲು ಕೊಂಚ ವಿರಾಮ ಬಯಸಿದ್ದರು. ಹೀಗಾಗಿ ಡಿಸೆಂಬರ್ ನಲ್ಲಿ ಅನುಷ್ಕಾ ಜೊತೆ ಮದುವೆ ಮಾಡಲು ರಜೆಗೆ ಮನವಿ ಮಾಡಿದ್ದರು ಎನ್ನುವ ಸುದ್ದಿ ಬಾಲಿವುಡ್, ಕ್ರಿಕೆಟ್ ವಲಯದಲ್ಲಿ ಹರಿದಾಡುತಿತ್ತು.

https://www.youtube.com/watch?v=G6xhtjAA7WA

https://www.instagram.com/p/BaL6GSJgd2r/?taken-by=virushka_slayz

https://www.instagram.com/p/BaG3kbPAgsM/?taken-by=virushka_slayz

https://www.instagram.com/p/BaEKoW6APKn/?taken-by=virushka_slayz

https://www.instagram.com/p/BZ-W1s4AnHO/?taken-by=virushka_slayz

https://www.instagram.com/p/BZ9LGKDAGDg/?taken-by=virushka_slayz

https://www.instagram.com/p/BZ1Ht0bguK4/?taken-by=virushka_slayz

https://www.instagram.com/p/BZrSdyBA8yB/?taken-by=virushka_slayz

https://www.instagram.com/p/BZqmYwZAKvO/?taken-by=virushka_slayz

https://www.instagram.com/p/BZqDne_ARAG/?taken-by=virushka_slayz

https://www.instagram.com/p/BZnyoZWgL__/?taken-by=virushka_slayz

https://www.instagram.com/p/BZjLyWzAqOH/?taken-by=virushka_slayz

https://www.instagram.com/p/BZd5m_SAksf/?taken-by=virushka_slayz

https://www.instagram.com/p/BZfkpf9AQJ9/?taken-by=virushka_slayz

https://www.instagram.com/p/BZYWWK2gy5U/?taken-by=virushka_slayz

https://www.instagram.com/p/BZQLfbmgnDr/?taken-by=virushka_slayz

https://www.instagram.com/p/BZL0jVHApMk/?taken-by=virushka_slayz

https://www.instagram.com/p/BZH5FqiALw7/?taken-by=virushka_slayz

https://www.instagram.com/p/BY9fht1AA8z/?taken-by=virushka_slayz

https://www.instagram.com/p/BY3jv_1gf-B/?taken-by=virushka_slayz

https://www.instagram.com/p/BY2TmCwgLGz/?taken-by=virushka_slayz

https://www.instagram.com/p/BY0NcNkADkz/?taken-by=virushka_slayz

https://www.instagram.com/p/BYsa_MCAQ3R/?taken-by=virushka_slayz

Share This Article
Leave a Comment

Leave a Reply

Your email address will not be published. Required fields are marked *