ಭುವನ್ ತೊಡೆಯನ್ನು ಕಚ್ಚಿದ ಬಿಗ್‍ಬಾಸ್ ವಿನ್ನರ್ ಪ್ರಥಮ್

Public TV
3 Min Read

ಬೆಂಗಳೂರು: ಬಿಗ್ ಬಾಸ್ ವಿನ್ನರ್ ಪ್ರಥಮ್ ಧಾರಾವಾಹಿ ಶೂಟಿಂಗ್ ವೇಳೆ ಭುವನ್ ತೊಡೆಯನ್ನು ಕಚ್ಚುವ ಮೂಲಕ ಮತ್ತೊಮ್ಮೆ ತಮ್ಮ ಹುಚ್ಚಾಟವನ್ನು ಪ್ರದರ್ಶನ ಮಾಡಿದ್ದಾರೆ.

ಭುವನ್, ಸಂಜನಾ ಮತ್ತು ಪ್ರಥಮ್ ಖಾಸಗಿ ಚಾನೆಲ್‍ನ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಶನಿವಾರ ಧಾರಾವಾಹಿಯ ಕೊನೆಯ ಶೂಟಿಂಗ್ ದಿನವಾಗಿತ್ತು. ಶೂಟಿಂಗ್ ವೇಳೆ ಪ್ರಥಮ್ ಮತ್ತು ಭುವನ್ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಒಬ್ಬರ ಮೇಲೊಬ್ಬರ ಮೇಲೆ ಹಲ್ಲೆ ಮಾಡುವ ಪರಿಸ್ಥಿತಿ ತಲುಪಿತ್ತು. ಈ ವೇಳೆ ಪ್ರಥಮ್ ನೇರವಾಗಿ ಬಂದು ಭುವನ್‍ರ ತೊಡೆಯ ಭಾಗವನ್ನು ಕಚ್ಚಿ ಗಾಯಗೊಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಥಮ್, ನಾನು ಯಾರನ್ನು ಕಚ್ಚಿಲ್ಲ. ಸ್ಥಳದಲ್ಲಿ ಯಾವುದೋ ಒಂದು ನಾಯಿ ಕಚ್ಚಿದೆ. ಅವರು ನನ್ನನ್ನು ಒಂದು ರೀತಿ ನೋಡ್ತಾಯಿದ್ದರು. ಇದಕ್ಕೆ ನನಗೂ ಯಾವುದೇ ಸಂಬಂಧವಿಲ್ಲ. ಈ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲ. ಭುವನ್ ಮತ್ತು ಸಂಜನಾ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು, ಬೇಕಾದ್ರೆ ನಿರ್ದೇಶಕ ರಾಜೇಶ್ ಅವರನ್ನು ಸಂಪರ್ಕಿಸಿ. ಕೊನೆಗೆ ಇಲ್ಲಾ ಸಂಜನಾನೇ ಭುವನ್ ತೊಡೆಯ ಭಾಗವನ್ನು ಕಚ್ಚಿದ್ದಾರೆ ಎಂದು ದ್ವಂದ್ವ ಹೇಳಿಕೆಯನ್ನು ನೀಡಿ ಫೋನ್ ಕಟ್ ಮಾಡಿದ್ದಾರೆ.

ಪ್ರಥಮ್ ಮತ್ತು ಭುವನ್ ನಡುವೆ ಜಗಳ ನಡೀತಾಯಿದ್ದಾಗ ನಾನು ಅಲ್ಲಿರಲಿಲ್ಲ, ಸೆಟ್ ಒಳಗಡೆ ನಾನು ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದೆ ಹಾಗಾಗಿ ನಾನು ಜಗಳ ನೋಡಿಲ್ಲ. ನಾನು ಹೊರ ಬಂದಾಗ ಭುವನ್ ಪ್ರಥಮ್ ಕತ್ತನ್ನು ಹಿಡಿದಿದ್ರು. ಇಬ್ಬರ ನಡುವೆ ಗಲಾಟೆ ನಡೆಯುತಿತ್ತು, ಕೂಡಲೇ ಪಕ್ಕದ ರೂಮಿನಲ್ಲಿ ಕರೆದುಕೊಂಡು ಹೋಗಿ ನೋಡಿದಾಗ ಭುವನ್ ತೊಡೆಯ ಭಾಗದಲ್ಲಿ ಹಲ್ಲಿನ ಗುರುತುಗಳಿದ್ದವು. ಈ ವೇಳೆ ನಾನು, ಭುವನ್ ಹಾಗೂ ವಿಶಾಲಮ್ಮ ಎಂಬವರು ಸಹ ಇದ್ದರು. ಭುವನ್ ಗೆ ಯಾವ ನಾಯಿಯೂ ಕಚ್ಚಿಲ್ಲ. ಪ್ರಥಮ್ ಕಚ್ಚಿದ್ದು ಎಂದು ಸೆಟ್‍ನಲ್ಲಿ ಎಲ್ರೂ ಹೇಳ್ತಾಯಿದ್ರು. ಪ್ರಥಮ್ ಯಾವಗಲೂ ಕೆಟ್ಟದಾಗಿ ಕಮೆಂಟ್, ಟಾಂಟ್ ಮಾಡ್ತಾಯಿದ್ದ ಎಂದು ನಟಿ ಸಂಜನಾ ತಿಳಿಸಿದರು.

ಇದೊಂದು ದೊಡ್ಡ ಸ್ಟೋರಿ ಕಳೆದ ಮೂರು ತಿಂಗಳಿನಿಂದ ಪ್ರಥಮ್ ಟಾರ್ಚರ್ ಕೊಡುತ್ತಿದ್ದ. ಆದ್ರೆ ನಿನ್ನೆ ಧಾರಾವಾಹಿಯ ಲಾಸ್ಟ್ ಶಾಟ್ ನಡೀತಾಯಿತ್ತು. ಶೂಟಿಂಗ್‍ನಲ್ಲಿ ಸಂಜನಾ ಕೈ ಹಿಡಿದು ಮಾತನಾಡುವ ದೃಶ್ಯದ ಚಿತ್ರೀಕರಣ ನಡೀತಿತ್ತು. ಈ ವೇಳೆ ಪ್ರಥಮ್ ನನಗೆ ತುಂಬಾ ಟಾಂಟ್ ಕೊಡುತ್ತಿದ್ದ. ತುಂಬಾ ಚೀಪ್ ಆಗಿ ಪ್ರಥಮ್ ಮಾತನಾಡುತ್ತಿದ್ದ. ಇನ್ನೂ ಸಂಜನಾ ನಾನು ಇದ್ದಾಗ ಇಬ್ಬರ ಬಗ್ಗೆ ಕಮೆಂಟ್ ಕೊಡ್ತಿದ್ದ ಎಂದು ನಟ ಭುವನ್ ಆರೋಪಿಸಿದ್ದಾರೆ.

ಆಗಿದ್ದೇನು?: ಶೂಟಿಂಗ್ ವೇಳೆ ಪ್ರಥಮ್ ಪದೇ ಪದೇ ನನ್ನ ಕಿವಿಯಲ್ಲಿ ಬಂದು ಕಿರುಚುತ್ತಿದ್ದ. ಹೀಗೆ ಮಾಡಬೇಡ ಎಂದು ಹೇಳಿದ್ರೂ ಪ್ರಥಮ್ ಪದೇ ಪದೇ ಕಿವಿಯ ಹತ್ರ ಕಿರುಚುವ ಮೂಲಕ ತೊಂದರೆ ಕೊಡುತ್ತಿದ್ದ. ಇದ್ರಿಂದ ನಾನು ಬೇಸರಗೊಂಡು ಪ್ರಥಮ್‍ನನ್ನು ತಳ್ಳಿದೆ. ಈ ವೇಳೆ ಸ್ಥಳದಲ್ಲಿದ್ದ ಸಿಬ್ಬಂದಿ ನನ್ನನ್ನು ಬಿಗಿಯಾಗಿ ಹಿಡಿದ್ರು. ಕೆಳಗೆ ಬಿದ್ದ ಪ್ರಥಮ್ ನೇರವಾಗಿ ಬಂದು ನನ್ನ ತೊಡೆಯನ್ನು ಕಚ್ಚಿ ಬಳಿಕ ಕಾರು ಹತ್ತಿ ಹೋಗಿಬಿಟ್ಟ. ಕೂಡಲೇ ನಾನು ಆಸ್ಪತ್ರೆಗೆ ಹೋಗಿ ಪೇನ್ ಕಿಲ್ಲರ್ ತೊಗೊಂಡಿದ್ದೇನೆ ಎಂದು ಘಟನೆ ಬಗ್ಗೆ ಭುವನ್ ವಿವರಿಸಿದ್ರು.

ಭುವನ್‍ಗೆ ಕಚ್ಚಿದು ನಾಯಿ ಅಲ್ಲ, ಪ್ರಥಮ್. ಶನಿವಾರ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಜಗಳ ಆಡಿ ಸುಮ್ಮನಾಗಿ ಬಿಡ್ತಾರೆ ಅಂತ ನಾವು ಸುಮ್ಮನಿದೆ. ಆದ್ರೆ ಪ್ರಥಮ್ ಮತ್ತು ಭುವನ್ ಒಬ್ಬರ ಮೇಲೊಬ್ಬರು ಬಿದ್ದು ಜಗಳ ಮಾಡಲು ಪ್ರಾರಂಭಿಸಿದರು. ನೋಡ ನೋಡುತ್ತಿದ್ದಂತೆ ಪ್ರಥಮ್ ಭುವನ್‍ರನ್ನು ಕಚ್ಚಿ ಗಾಯಗೊಳಿಸಿದರು. ಪ್ರಥಮ್ ಯಾವಗಲೂ ಭುವನ್ ಮತ್ತು ಸಂಜನಾ ಬಗ್ಗೆ ತುಂಬ ಕೆಟ್ಟದಾಗಿ ಕಮೆಂಟ್ ಮತ್ತು ಟಾಂಟ್ ಮಾಡುತ್ತಿದ್ದರು ಎಂದು ಧಾರವಾಹಿ ಸಹ ನಿರ್ದೇಶಕ ಓಂಕಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಈ ಸಂಬಂಧ ಭುವನ್ ನಗರದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ್ ವಿರುದ್ಧ ದೂರು ದಾಖಲಿಸಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *