ಅನ್ನಭಾಗ್ಯದಿಂದ ಹೊರಗುಳಿಯುತ್ತಾರಾ 6 ಲಕ್ಷ ಜನ?

Public TV
2 Min Read

ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Guarantee) ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆ ಸದ್ಯ ಸದ್ದು ಮಾಡುತ್ತಿದೆ. ಇದೀಗ ಅನ್ನಭಾಗ್ಯದಿಂದ (Annabhagya Scheme)  6 ಲಕ್ಷ ಜನ ಹೊರಗುಳಿಯುತ್ತಾರಾ ಎಂಬ ಪ್ರಶ್ನೆಯೊಂದು ಎದ್ದಿದೆ.

6 ಲಕ್ಷ ಜನರ ದಾಖಲೆ ಇಲ್ಲದಿರುವುದು ಆಹಾರ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಲಿಂಕ್ ಮಾಡದವರ ಖಾತೆಗಳಿಗೆ ಹಣ ಸಿಗುವುದಿಲ್ಲ. ಇದನ್ನೂ ಓದಿ: ಅನ್ನಭಾಗ್ಯ ಹಣ ಜುಲೈ 1 ರಂದೇ ಕೊಡ್ತೀವಿ ಅಂತಾ ಹೇಳಿಲ್ಲ – ಸಿಎಂ ಸ್ಪಷ್ಟನೆ

ಯಾರಿಗೆಲ್ಲ ಸಿಗಲ್ಲ ದುಡ್ಡು..?: ರಾಜ್ಯದಲ್ಲಿ 6 ಲಕ್ಷ ಜನ ಬಿಪಿಎಲ್ ಕಾರ್ಡ್‍ದಾರರ (BPL Card) ಬ್ಯಾಂಕ್ ಖಾತೆ ಆಧಾರ್ ಗೆ ಲಿಂಕ್ (Aadhaar Card Link to Bank Account) ಆಗಿಲ್ಲ. ಇವರು ಲಿಂಕ್ ಮಾಡಿಸುವವರೆಗೆ ದುಡ್ಡು ಬರಲ್ಲ. ಈಗ ಲಿಂಕ್ ಮಾಡಿದ್ದರೆ ಜುಲೈ 2ನೇ ವಾರದಲ್ಲಿ ಹಣ ಬರುವ ಸಾಧ್ಯತೆಗಳಿವೆ.

ಇಂದು ದುಡ್ಡು ಬರಲ್ಲ ಯಾಕೆ?: ಅಧಿಕಾರಿಗಳು ಪ್ರತಿ ಅಕೌಂಟ್‍ನ ಡೇಟಾ ಪರಿಶೀಲಿಸಬೇಕು. ಕುಟುಂಬದ ಸದಸ್ಯರು ಎಷ್ಟು ಜನ, ಎಷ್ಟು ದುಡ್ಡು ಕಳಿಸಬೇಕು ಅಂತಾ ಪರಿಶೀಲಿಸಬೇಕು. ಆಧಾರ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಪರಿಶೀಲಿಸಬೇಕು. ಖಾತೆ ನಿಷ್ಕ್ರಿಯವಾದರೆ ದುಡ್ಡು ಬೌನ್ಸ್ ಆಗಿ ವಾಪಸ್ ಬರುತ್ತೆ. ಹೀಗಾಗಿ ಕೆಲ ಸಮಯ ಬೇಕಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ (BPL Card) ಪಡಿತರದಾರರ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿತ್ತು. ಆದರೆ ಈಗ ಅಗತ್ಯ ಪ್ರಮಾಣದ ಅಕ್ಕಿ ಸಿಕ್ಕಿಲ್ಲ. ಹೀಗಾಗಿ 5 ಕೆಜಿ ಅಕ್ಕಿ ಹಾಗೂ ಬಾಕಿ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಸರ್ಕಾರ ತಿಳಿಸಿದೆ.

ಪ್ರತಿ ಕೆಜಿಗೆ 34 ರೂ. ಲೆಕ್ಕದಲ್ಲಿ ತಲಾ ಒಬ್ಬರಿಗೆ 170 ರೂ. ಸಿಗಲಿದೆ. ಬಿಪಿಎಲ್ ಕಾರ್ಡ್‍ದಾರರ ಅಕೌಂಟ್‍ಗೆ ದುಡ್ಡು ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಅನ್ನಭಾಗ್ಯದ ದುಡ್ಡು ಬಿಪಿಎಲ್ ಕಾರ್ಡ್‍ದಾರರ ಖಾತೆಗೆ ಬೀಳಲು ಷರತ್ತುಗಳು ಅನ್ವಯವಾಗಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್