ಗೃಹಲಕ್ಷ್ಮಿಯಂತೆ ಅನ್ನಭಾಗ್ಯ ಹಣವೂ ಬಾಕಿ ಆರೋಪ – ಒಂದೂವರೆ ಕೋಟಿ ಪಡಿತರದಾರರಿಗೆ ಜಮೆ ಆಗಿಲ್ವಾ 657 ಕೋಟಿ?

2 Min Read

– ಬಿಜೆಪಿ ಆರೋಪ ಅಲ್ಲಗಳೆದ ಮುನಿಯಪ್ಪ

ಬೆಂಗಳೂರು: ಗೃಹಲಕ್ಷ್ಮಿ (Gruhalakshmi Scheme) ಹಣ ಬಾಕಿ ಆಯ್ತು.. ಇದೀಗ ಅನ್ನಭಾಗ್ಯದ (Annabhagya) ಹಣದಲ್ಲೂ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಬಿಜೆಪಿ ಶಾಸಕ (BJP MLA) ಮಹೇಶ್ ಟೆಂಗಿನಕಾಯಿ ಸದನದಲ್ಲಿ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.

2025 ರ ಜನವರಿ ತಿಂಗಳಲ್ಲಿ ಅನ್ನಭಾಗ್ಯ ಫಲಾನುಭವಿಗಳಿಗೆ ಹಣ ಜಮೆ ಆಗಿಲ್ಲ. 1.27 ಕೋಟಿ ಪಡಿತರದಾರರಿಗೆ 657 ಕೋಟಿ ರೂ. ಇನ್ನೂ ಜಮೆ ಆಗಿಲ್ಲ. 1 ವರ್ಷ ಆದರೂ ಹಣ ಜಮೆ ಆಗಿಲ್ಲ ಅಂತ ಟೆಂಗಿನಕಾಯಿ (Mahesh Tenginakai) ಅವರು ಸದನದ ಗಮನ ಸಳೆದರು. ಇದನ್ನೂ ಓದಿ: ಟೆಂಡರ್‌ಗೂ ಮಂತ್ರಿಗಳಿಗೂ ಏನ್‌ ಸಂಬಂಧ? – ಗಾಳಿಯಲ್ಲಿ ಗುಂಡು ಹಾರಿಸಬೇಡಿ: ಬೈರತಿ ಸುರೇಶ್ ತಾಕೀತು

ಇದಕ್ಕೆ ಆಹಾರ ಸಚಿವ ಮುನಿಯಪ್ಪ ಉತ್ತರಿಸಿ, ಅನ್ನಭಾಗ್ಯ ಯೋಜನೆ ಆರಂಭಿಸಿದಾಗ ಕೇಂದ್ರ ಸರ್ಕಾರ ಸ್ಟಾಕ್ ಇದ್ರೂ ಅಕ್ಕಿ ಕೊಟ್ಟಿರಲಿಲ್ಲ. ಹಾಗಾಗಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲು 170 ರೂ. ಡಿಬಿಟಿ ಮೂಲಕ ಕೊಡ್ತಾ ಬಂದಿದ್ವಿ. 2023 ಜುಲೈಯಿಂದ 2024-25 ರವರೆಗೆ ಹಣ ಕೊಟ್ಟಿದ್ದೇವೆ. ನಮ್ಮ ಕಡೆಯಿಂದ ವ್ಯತ್ಯಾಸ ಆಗಿಲ್ಲ, ಅಕ್ಕಿ ಕೊಟ್ಟಿದೀವಿ ಅಂದರು.

ಇದಕ್ಕೆ ಟೆಂಗಿನಕಾಯಿ ಮತ್ತೆ ದನಿಯೆತ್ತಿ, ಅಕ್ಕಿ ಕೊಡಲು ಶುರು ಮಾಡಿದ್ದು 2025 ರ ಫೆಬ್ರವರಿಯಿಂದ ಆದರೂ ಆ ವರ್ಷದ ಜನವರಿಯಲ್ಲಿ ಹಣ ಕೊಡಬೇಕಿತ್ತು. ಜನವರಿ ಬಾಕಿ ಹಣ ಕೊಡ್ತೀರೋ? ಅಕ್ಕಿ ಕೊಡ್ತೀರೋ? ಹೇಳಿ ಅಂತ ಟೆಂಗಿನಕಾಯಿ ಪಟ್ಟು ಹಿಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – 1.96 ಕೋಟಿ ವಿದ್ಯುತ್ ಬಿಲ್ ಪಾವತಿಸಿದ KIADB

ಮತ್ತೆ ಮುನಿಯಪ್ಪ ಮಾತಾಡಿ, ಜನವರಿಗೆ ಕೊಡಲು ಅವಕಾಶ ಆಗಲಿಲ್ಲ, ಕೊಟ್ಟಿಲ್ಲ. ಕೇಂದ್ರ ಅಕ್ಕಿ ಕೊಟ್ಟಾಗ ಫೆಬ್ರವರಿಗೆ ಅಕ್ಕಿ ಕೊಟ್ಟಿದೀವಿ. ಕೇಂದ್ರ ಸರ್ಕಾರ ಸಕಾಲಕ್ಕೆ ಅಕ್ಕಿ ಕೊಡಲಿಲ್ಲ, ಹಾಗಾಗಿ ಕೊಟ್ಟಿಲ್ಲ ಅನ್ನೋ ಮೂಲಕ 2025 ರ ಜನವರಿಯಲ್ಲಿ ಹಣವೂ ಇಲ್ಲ ಅಕ್ಕಿಯೂ ಇಲ್ಲ ಅಂತ ಪರೋಕ್ಷವಾಗಿ ಒಪ್ಪಿಕೊಂಡರು. ಇದನ್ನೂ ಓದಿ: ಸಿಎಂ ಎಂಟ್ರಿ ಬೆನ್ನಲ್ಲೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಮುಂದೂಡಿಕೆ

Share This Article