ನಟ ವಿಷ್ಣುವರ್ಧನ್‌ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಿ: ಸಿಎಂಗೆ ಅನಿರುದ್ಧ ಮನವಿ

vishnuvardhan karnataka ratna

ಟ ಸಾಹಸಸಿಂಹ ವಿಷ್ಣುವರ್ಧನ್‌ರಿಗೆ (Vishnuvardhan) ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ವಿಷ್ಣುವರ್ಧನ್ ಅಳಿಯ ಅನಿರುದ್ಧ (Aniruddha Jatkar), ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದರು. ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾಗಿ ಅನಿರುದ್ಧ ಮನವಿ ಸಲ್ಲಿಸಿದರು.

ಸಿಎಂ ಭೇಟಿ ಬಳಿಕ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದೆ. ಹಿಂದೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಇವತ್ತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ ಎಂದು ಹೇಳಿದ್ದಾರೆ ಅಂತ ತಿಳಿಸಿದರು. ಇದನ್ನೂ ಓದಿ: ವಿಷ್ಣು ಸಮಾಧಿ ನೆಲಸಮ, ಅಭಿಮಾನ್‌ ಸ್ಟುಡಿಯೋದ ಅವ್ಯವಹಾರ: ವಿಷ್ಣು ಫ್ಯಾನ್ಸ್ ಗರಂ

vishnuvardhan Aniruddha Jatkar

ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಕೊಡಿ ಎಂದು ಕೇಳುವುದು ಎಂದರೆ ತಪ್ಪು ಆಗುತ್ತದೆ. ಕರ್ನಾಟಕ ರತ್ನ ಪ್ರಶಸ್ತಿಗೆ ವಿಷ್ಣುವರ್ಧನ್ ಅವರು ಅರ್ಹರು. ಹಾಗಾಗಿ, ಕೇಳುವ ಬದಲಾಗಿ ನೆನಪು ಮಾಡುತ್ತೇನೆ. ಈ ಬಾರಿಯೂ ನೆನಪು ಮಾಡಿದ್ದೇನೆ‌‌ ಎಂದು ಹೇಳಿದರು.

ವಿಷ್ಣುವರ್ಧನ್ ಸಮಾಧಿ ಧ್ವಂಸ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ಈಗಾಗಲೇ ಸರ್ಕಾರದ ಮತ್ತು ಸಿಎಂ ಗಮನಕ್ಕಿದೆ. ಹಿಂದೆ ನಾವು ಕೇಳಿದ ಹಾಗೆ ಕರ್ನಾಟಕ ಸರ್ಕಾರ ಅಪ್ಪ ಅವರ ಸ್ಮಾರಕ ಮಾಡಿದ್ದಾರೆ. ಈಗಾಗಲೇ ಸರ್ಕಾರ ಐದು ಎಕರೆ ಜಮೀನಿನಲ್ಲಿ ಸ್ಮಾರಕ ಮಾಡಿದೆ. ಮೊನ್ನೆ ಸಮಾಧಿ ಧ್ವಂಸ ಮಾಡಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದೇನೆ. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಸರ್ಕಾರ ಮಾಡಿದೆ. ಹೀಗಾಗಿ, ಬೆಂಗಳೂರಿನಲ್ಲಿಯೂ ಸ್ಮಾರಕ ಬೇಕು ಅನ್ನೋದು ತಪ್ಪಾಗುತ್ತದೆ ಎಂದರು. ಇದನ್ನೂ ಓದಿ: ಡಾ. ವಿಷ್ಣು ಅಭಿಮಾನ ಸ್ಮಾರಕ – ಪುತ್ಥಳಿ ನಿರ್ಮಾಣಕ್ಕೆ ಚಾಲನೆ

ವಿಷ್ಣು ಸ್ಮಾರಕ ಇರೋದನ್ನ ಧ್ವಂಸ ಮಾಡಿದ್ದು ದುರಂತ. ಅಲ್ಲಿಯೇ ಅವರ ಅಂತ್ಯಕ್ರಿಯೆ ಆಗಿರೋದ್ರಿಂದ ಅದಕ್ಕೆ ಆದ್ಯತೆ ಪ್ರಾಮುಖ್ಯತೆ ಇದೆ. ಬಾಲಣ್ಣ ಅವರ ಜಾಗದಲ್ಲಿಯೂ ನಾವು ಸ್ಮಾರಕ ಬೇಕು ಅನ್ನೋದು ತಪ್ಪಾಗುತ್ತದೆ. ರಾಜ್ಯ ಸರ್ಕಾರ ಆ ಜಾಗ ಖರೀದಿ ಮಾಡುತ್ತದೆಯಾ ನೋಡಬೇಕು. ಒಂದು ದುರಂತದ ಘಟನೆಯಾಗಿದೆ. ಆ ಜಮೀನು ಬಾಲಣ್ಣ ಕುಟುಂಬಕ್ಕೆ ಸೇರಿದೆ. ಬಾಲಣ್ಣ ಕುಟುಂಬದ ಬಳಿಯೂ ಕೂಡ ಅಭಿಮಾನಿಗಳಿಗಾಗಿ 10 ಗುಂಟೆ ಜಾಗ ಕೇಳಿದ್ದೆ. ಸರ್ಕಾರ ಇದನ್ನು ಏನು ಮಾಡುತ್ತದೆ ಗೊತ್ತಿಲ್ಲ. ನಾವು ಕುಟುಂಬದವರಾಗಿ ಮತ್ತೆ ಮತ್ತೆ ಕೇಳೋದು ತಪ್ಪಾಗುತ್ತದೆ. ನಾವು ಕೇಳಿದ ಹಾಗೆ ಮೈಸೂರಿನಲ್ಲಿ ಸ್ಮಾರಕವಾಗಿದೆ. ಮತ್ತೆ ಇಲ್ಲಿಯೂ ಮಾಡಿ ಎನ್ನೋದರಲ್ಲಿ ಅರ್ಥ ಇಲ್ಲ. ಬಾಲಣ್ಣ ಕುಟುಂಬ ಮನಸು ಮಾಡಿ ಮತ್ತೆ ಸ್ಮಾರಕ ಕಟ್ಟೋಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.