ನವದೆಹಲಿ: 12 ಪ್ರತಿಪಕ್ಷದ ಸಂಸದರನ್ನು ಚಳಿಗಾಲದ ಆಧಿವೇಶನದಿಂದ ಅಮಾನತುಗೊಳಿಸುವ ನಿರ್ಧಾರಕ್ಕೆ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ವಾಗ್ದಾಳಿ ನಡೆಸಿದ್ದಾರೆ.
ಇದು ಪ್ರಜಾಪ್ರಭುತ್ವಕ್ಕೆ ವಿರೋಧವಾದುದು, ತಮ್ಮ ವಿರುದ್ಧ ಮಾತನಾಡುವವರನ್ನು ಮೌನಗಳಿಸಲು ಸರ್ಕಾರ ಯತ್ನಿಸುತ್ತಿದೆ. ಸಂಸತ್ತಿನ ಪ್ರಜಾಪ್ರಭುತ್ವದಲ್ಲಿ ಇದೊಂದು ಕೇಳರಿಯದ ಘಟನೆ ಎಂದು ಕಿಡಿಕಾರಿದ್ದಾರೆ.
ಅವರು ಯಾವ ನಿಯಮದ ಬಗ್ಗೆ ಮಾತನಾಡುತ್ತಿದ್ದಾರೆ? ನಮಗೆ ನಿಯಮಗಳ ಬಗ್ಗೆ ಅರಿವಿಲ್ಲವೇ? ತನ್ನನ್ನು ಅಮಾನತು ಮಾಡಿದ್ದನ್ನು ರಾಜ್ಯಸಭೆಯ ಅಧ್ಯಕ್ಷರೊಡನೆ ಮಾತನಾಡುವುದಾಗಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ತಾಕತ್ತಿದ್ದರೆ ಬಿಜೆಪಿ ಸರ್ಕಾರದ ವಿರುದ್ಧದ 40% ಆರೋಪ ಸಾಬೀತು ಪಡಿಸಲಿ: ಶ್ರೀರಾಮುಲು
An angry #ShivSena MP @priyankac19 lashes out for the #RajyaSabha’s decision to suspend her for the rest of the winter session of #Parliament
She is among 12 MPs suspended pic.twitter.com/2D4n8Ut1bs
— Poulomi Saha (@PoulomiMSaha) November 29, 2021
ಮುಂಗಾರು ಅಧಿವೇಶನದ ಕೊನೆಯ ದಿನದಂದು ಮೇಲ್ಮನೆಯಲ್ಲಿ ಗದ್ದಲ ಸೃಷ್ಟಿಸಿ ಅಶಿಸ್ತು ತೋರಿದ್ದಕ್ಕೆ ಅವರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲಾಗಿದೆ.
ಯಾರೆಲ್ಲ ಅಮಾನತು?
ಪ್ರಿಯಾಂಕಾ ಚತುರ್ವೇದಿ ಮತ್ತು ಡೋನಾ ಸೇನ್, ಎಳಮರಮ್ ಕರೀಂ (ಸಿಪಿಎಂ), ಕಾಂಗ್ರೆಸ್‍ನ ಫುಲೋ ದೇವಿ ನೇತಮ್, ಛಾಯಾ ವರ್ಮಾ, ಆರ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸಿರ್ ಹುಸೇನ್, ಅಖಿಲೇಶ್ ಪ್ರಸಾದ್ ಸಿಂಗ್, ಸಿಪಿಐನ ಬಿನೋಯ್ ವಿಶ್ವಂ, ಟಿಎಂಸಿಯ ಶಾಂತಾ. ಛೆಟ್ರಿ ಮತ್ತು ಶಿವಸೇನೆಯ ಅನಿಲ್ ದೇಸಾಯಿ ಅಮಾನತುಗೊಂಡಿದ್ದಾರೆ.
ಅಮಾನತು ನೋಟಿಸ್‍ನಲ್ಲಿ ಏನಿದೆ?
ಮುಂಗಾರು ಅಧಿವೇಶನದ ಕೊನೆಯ ದಿನವಾದ ಆಗಸ್ಟ್ 11 ರಂದು ಸಂಸದರು ಭದ್ರತಾ ಸಿಬ್ಬಂದಿಯ ಮೇಲೆ ಉದ್ದೇಶಪೂರ್ವಕವಾಗಿ ದುರ್ನಡತೆ, ಅವಹೇಳನಕಾರಿ, ಅಶಿಸ್ತಿನ ಮತ್ತು ಹಿಂಸಾತ್ಮಕ ನಡವಳಿಕೆ ತೋರಿದ್ದಾರೆ. ಈ ಮೂಲಕ ಸದನದ ಘನತೆಯನ್ನು ಕಡಿಮೆಗೊಳಿಸಿ ಅಪಖ್ಯಾತಿ ತಂದಿದ್ದಾರೆ. ಈ ಕಾರಣದಿಂದ ಸದಸ್ಯರನ್ನು 255ನೇ ಅಧಿವೇಶನದ ಉಳಿದ ಅವಧಿಗೆ ಸದನದ ಸೇವೆಯಿಂದ ರಾಜ್ಯಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ನಿಯಮ 256 ರ ಅಡಿಯಲ್ಲಿ ಅಮಾನತುಗೊಳಿಸಲಾಗಿದೆ.