`ಪುಷ್ಪ 2′ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ರಶ್ಮಿಕಾ ಮಂದಣ್ಣ

Public TV
1 Min Read

`ಪುಷ್ಪ’ ಬಿಗ್ ಸಕ್ಸಸ್ ನಂತರ `ಪುಷ್ಪ 2’ಗಾಗಿ (Pushpa 2) ಅಭಿಮಾನಿಗಳು ಕಾಯ್ತಿದ್ದಾರೆ. ಅಲ್ಲು ಅರ್ಜುನ್ ನಯಾ ಅವತಾರಕ್ಕೆ ಫಿದಾ ಆಗಿದ್ದ ಅಭಿಮಾನಿಗಳು, `ಪುಷ್ಪ 2′ ಚಿತ್ರದ ಅಪ್‌ಡೇಟ್ ಸಿಗದೇ ನಿರಾಸೆಯಾಗಿದ್ದರು. ಈಗ ಶ್ರೀವಲ್ಲಿಯೇ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಅಲ್ಲು ಅರ್ಜುನ್ (Allu arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ `ಪುಷ್ಪ’ (Pushpa Film) ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ, ಕೋಟಿ ಕೋಟಿ ಲೂಟಿ ಆಗಿತ್ತು. ಈ ಚಿತ್ರದ ಪಾರ್ಟ್ 2 ಯಾವಾಗ ಶುರುವಾಗುತ್ತೆ, ಸಿನಿಮಾ ತೆರೆಯ ಮೇಲೆ ಯಾವಾಗ ನೋಡುತ್ತೀವಿ ಎಂದು ಕಾದಿರುವ ಪ್ರೇಕ್ಷಕರಿಗೆ ರಶ್ಮಿಕಾ ಸಿಹಿ ಸುದ್ದಿ ಕೊಟ್ಟಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ.

ಚಿತ್ರತಂಡದವರು ಈಗಾಗಲೇ ಶೂಟಿಂಗ್ ಶುರು ಮಾಡಿದ್ದಾರೆ. ನನ್ನ ಭಾಗದ ಚಿತ್ರೀಕರಣ ಫೆಬ್ರವರಿಯಿಂದ ಶುರುವಾಗಲಿದೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ: ರವಿಚಂದ್ರನ್ ಸಿನಿಮಾದ ಹೆಸರು ಮತ್ತು ನಾಯಕಿ ಬದಲು

ಇನ್ನೂ ರಶ್ಮಿಕಾ ನಟನೆಯ ಮಿಷನ್ ಮಜ್ನು ಸಿನಿಮಾ ಜ.20ಕ್ಕೆ ತೆರೆಗೆ ಅಪ್ಪಳಿಸಲಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *