ತಾಲಿಬಾನ್ ಭಾರತದತ್ತ ಬಂದರೆ ಏರ್ ಸ್ಟ್ರೈಕ್: ಯೋಗಿ ಆದಿತ್ಯನಾಥ್

Public TV
2 Min Read

ಲಕ್ನೋ: ಒಂದು ವೇಳೆ ತಾಲಿಬಾನ್ ಭಾರತದ ಕಡೆ ಬಂದರೆ ಅವರ ವಿರುದ್ಧ ವೈಮಾನಿಕ ದಾಳಿಗೆ ಭಾರತ ಸಿದ್ಧವಾಗಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.

PM MODI

ಸಾಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ನಮ್ಮ ದೇಶ ಸುರಕ್ಷಿತವಾಗಿ ನಡೆಯುತ್ತಿದೆ. ಅದಕ್ಕೆ ಬೇರೆ ದೇಶದವರು ನಮ್ಮತ್ತ ಕಣ್ಣು ಎತ್ತಿ ನೋಡಲು ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಾಲಿಬಾನ್‍ನಿಂದ ತೊಂದರೆಗೀಡಾಗಿದೆ. ಒಂದು ವೇಳೆ ಆ ತಾಲಿಬಾನ್ ಗುಂಪು ಭಾರತದತ್ತ ಸಾಗಿದರೆ, ವೈಮಾನಿಕ ದಾಳಿ ಸಿದ್ಧವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ: ಮೋದಿ ಶುಭಾಶಯ

ಆದಿತ್ಯನಾಥ್ ಅವರು ಎಸ್‍ಬಿಎಸ್‍ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‍ಭರ್ ಅವರನ್ನು ಉಲ್ಲೇಖಿಸಿ, ರಾಜ್‍ಭರ್ ಅವರ ಚಿಂತನೆಯ ಪ್ರಕ್ರಿಯೆಯು ಅವರ ಕುಟುಂಬದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದೆ ಎಂದು ವಿರೋಧಿಸಿದರು. ತಂದೆ ಮಂತ್ರಿ ಆಗಬೇಕು ಎಂದು ಬಯಸಿದರೆ, ಮಗ ಸಂಸದ ಮತ್ತು ಇನ್ನೊಬ್ಬ ಎಂಎಲ್‍ಸಿಯಾಗಲು ಬಯಸುತ್ತಾರೆ. ಮೊದಲು ಅಂತಹ ಬ್ಲ್ಯಾಕ್‍ಮೇಲ್ ಮಾಡುವವರ ಅಂಗಡಿಗಳನ್ನು ಮುಚ್ಚಬೇಕು ಎಂದರು.

ರಾಜ್‍ಭರ್ ಹೆಸರನ್ನು ಉಲ್ಲೇಖಿಸದೇ ಆದಿತ್ಯನಾಥ್ ಅವರು, ನನ್ನ ಸಂಪುಟದಲ್ಲಿ ರಾಜ್‍ಭರ್ ಸಮುದಾಯದ ಇಬ್ಬರು ಮಂತ್ರಿಗಳಿದ್ದರು. ಈ ಸಂಪುಟ ಸಭೆಯಲ್ಲಿ ಒಬ್ಬ ಸಚಿವರು ಬಹ್ರೈಚ್‍ನಲ್ಲಿ ಮಹಾರಾಜ ಸುಹೇಲ್‍ದೇವ್ ಅವರ ಗೌರವಾರ್ಥ ಸ್ಮಾರಕ ನಿರ್ಮಾಣವನ್ನು ವಿರೋಧಿಸಿದರು. ಆದರೆ ಅನಿಲ್ ರಾಜ್‍ಭರ್ ಅವರಿಗೆ ಸ್ಮಾರಕವು ಭವ್ಯವಾದ ಕಟ್ಟಡದ ರೀತಿಯಲ್ಲಿ ನಿರ್ಮಿಸಬೇಕು ಎಂಬ ಬಯಕೆ ಇತ್ತು ಎಂದು ತಿಳಿಸಿದರು.

ಇಂದು, ಬಹ್ರೈಚ್‍ನಲ್ಲಿ ಭವ್ಯವಾದ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಬಿಜೆಪಿ ಸರ್ಕಾರವು ಬಹ್ರೈಚ್‍ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಸುಹೇಲ್‍ದೇವ್ ಹೆಸರಿಟ್ಟಿದೆ. ವಿರೋಧ ಪಕ್ಷಗಳು ಮಹಾರಾಜ ಸುಹೇಲ್‍ದೇವ್‍ಗಾಗಿ ಏನು ಮಾಡಿದೆ ಎಂದು ಪ್ರಶ್ನೆಯನ್ನು ಕೇಳಿದರು.

ಮುಹಮ್ಮದ್ ಘೋರಿ ಮತ್ತು ಆಕ್ರಮಣಕಾರ ಘಾಜಿಯ ಅನುಯಾಯಿಗಳು ಸುಹೇಲ್‍ದೇವ್ ಸ್ಮಾರಕವನ್ನು ನಿರ್ಮಿಸಿದರೆ, ಜನರು ಘಾಜಿಯನ್ನು ಮರೆತುಬಿಡುತ್ತಾರೆ. ರಾಜಕೀಯ ಬ್ಲ್ಯಾಕ್‍ಮೇಲಿಂಗ್‍ನಲ್ಲಿ ತೊಡಗಿರುವವರನ್ನು ಕಸದ ಬುಟ್ಟಿಗೆ ಹಾಕುತ್ತಾರೆ, ಎಂಬ ಭಯದಿಂದ ಕೆಲವರು ಸುಹೇಲ್‍ದೇವ್‍ನ ಸ್ಮಾರಕವನ್ನು ಪರೋಕ್ಷವಾಗಿ ವಿರೋಧಿಸುತ್ತಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

ಈ ವೇಳೆ, ರಾಮ ಭಕ್ತರನ್ನು ಹತ್ಯೆ ಮಾಡಿದವರು ದೇಶದ ಜನರನ್ನು ಕ್ಷಮೆ ಕೇಳುವ ಧೈರ್ಯವಿದೆಯೇ ಎಂದು ಪ್ರಶ್ನಿಸುವ ಮೂಲಕ ರಾಜಕೀಯ ವಿರೋಧಿಗಳ ವಿರುದ್ಧವೂ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *