ಉದ್ಭವ್ ಠಾಕ್ರೆ ರಾಜೀನಾಮೆ ಬೆನ್ನಲ್ಲೆ ಮತ್ತೆ ಸಿಡಿದೆದ್ದ ಕಂಗನಾ ರಣಾವತ್

Public TV
1 Min Read

ಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ರಾಜೀನಾಮೆ ಕೊಡುತ್ತಿದ್ದಂತೆಯೇ ಕಂಗನಾ ರಣಾವತ್, ತುಂಬಾ ಆಕ್ಟಿವ್ ಆಗಿದ್ದಾರೆ. ಠಾಕ್ರೆ ಸಿಎಂ ಖುರ್ಚಿಯಿಂದ ಇಳಿಯುತ್ತಿದ್ದಂತೆಯೇ ವಿಡಿಯೋವೊಂದನ್ನು ಮಾಡಿರುವ ಕಂಗನಾ, ಒಂದಷ್ಟು ಇತಿಹಾಸದ ಪಾಠವನ್ನು ಮಾಡಿದ್ದಾರೆ.  ಪ್ರಜಾಪ್ರಭುತ್ವದ ಮಹತ್ವದ ಬಗ್ಗೆಯೂ ಮಾತನಾಡಿದ್ದಾರೆ. ಜೆ.ಪಿ ನಾರಾಯಣ್ ಅವರನ್ನು ಅವರು ನೆನಪಿಸಿಕೊಂಡಿದ್ದಾರೆ. 1975ರ ಘಟನೆಯನ್ನೂ ಅವರು ನೆನಪಿಸಿಕೊಂಡಿದ್ದಾರೆ.

ಹನುಮಾನ್ ಚಾಲೀಸ್ ಕುರಿತಾಗಿಯೂ ವಿಡಿಯೋದಲ್ಲಿ ಹೇಳಿರುವ ಕಂಗನಾ ರಣಾವತ್, “ಶಿವನ 12ನೇ ಅವತಾರವೇ ಹನುಮಂತ. ಶಿವನ ಆರಾಧನೆಯನ್ನೂ ಮಾಡುವ ಶಿವಸೇನೆಯು ಹುನುಮಾನ್ ಚಾಲೀಸ್ ಅನ್ನು ಬ್ಯಾನ್ ಮಾಡಲು ಹೊರಟಿತ್ತು. ಹಾಗೇನಾದರೂ ಮಾಡಿದ್ದರೆ ಶಿವನೂ ಅವರನ್ನು ಕಾಪಾಡುವುದಿಲ್ಲ. ಹರಹರ ಮಹಾದೇವ್” ಎಂದು ಕಂಗನಾ ವಿಡಿಯೋದಲ್ಲಿ ಹೇಳಿದ್ದಾರೆ. ಅದನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದಾರೆ. ಇದನ್ನೂ ಓದಿ:ಪವಿತ್ರ ಲೋಕೇಶ್ ದೂರು : ತನಿಖೆ ಆರಂಭಿಸಿದ ಸೈಬರ್ ಪೊಲೀಸ್

ಕಂಗನಾ ರಣಾವತ್ ಗೂ ಹಾಗೂ ಉದ್ಭವ ಠಕ್ರೆಗೂ ಎರಡ್ಮೂರು ವರ್ಷಗಳಿಂದ  ಮಾತಿನ ಚಕಮಕಿ ನಡೆದೇ ಇದೆ. ಮುಂಬೈನಲ್ಲಿರುವ ಕಂಗನಾ ರಣಾವತ್  ಆಫೀಸಿನ ಕಟ್ಟಡವು ನಿಯಮಬಾಹಿರವಾಗಿ ಕಟ್ಟಿದ್ದಾರೆ ಎಂದು ಆರೋಪಿಸಿ 2020ರಲ್ಲಿ ತೆರೆವುಗೊಳಿಸಲಾಗಿತ್ತು. ಅಲ್ಲಿಂದ ಠಾಕ್ರೆ ಸರಕಾರದ ವಿರುದ್ಧ ಕಂಗನಾ ಸಿಡಿದೆದ್ದಿದ್ದರು. ಶಿವಸೇನೆ ಕಾರ್ಯಕರ್ತರು ಕಂಗನಾ ವಿರುದ್ಧ ಪ್ರತಿಭಟನೆ ಮಾಡಿದ್ದರಿಂದ ಈ ಕಾರಣಕ್ಕಾಗಿ ಕಂಗನಾ ಅವರಿಗೆ ಭದ್ರತೆಯನ್ನೂ ನೀಡಲಾಗಿತ್ತು.

Live Tv

Share This Article
Leave a Comment

Leave a Reply

Your email address will not be published. Required fields are marked *