ನಗರಗಳಲ್ಲಿನ ಬೀದಿನಾಯಿ, ಅನಾಥ ಪ್ರಾಣಿಗಳ ತೆರವಿಗೆ ವಿಶೇಷ ಅಭಿಯಾನ – ರಾಜಸ್ಥಾನ ಹೈಕೋರ್ಟ್

Public TV
1 Min Read

ಜೈಪುರ: ಜೋಧ್‌ಪುರ, ಉದಯಪುರ ಹಾಗೂ ಜೈಪುರ ನಗರಗಳ ಬೀದಿನಾಯಿ (Street Dogs) ಮತ್ತು ಅನಾಥ ಪ್ರಾಣಿಗಳನ್ನು ತೆರೆವುಗೊಳಿಸುವುದಕ್ಕಾಗಿ ವಿಶೇಷ ಅಭಿಯಾನ ಕೈಗೊಳ್ಳುವಂತೆ ರಾಜಸ್ಥಾನ ಹೈಕೋರ್ಟ್ (Rajasthan Highcourt) ಆದೇಶಿಸಿದೆ.

ಅಭಿಯಾನದ ವೇಳೆ ತೆರವಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸೇರಿದಂತೆ ಇನ್ನಿತರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅವಕಾಶವಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಕುಲದೀಪ್ ಮಾಥುರ್ ಮತ್ತು ರವಿ ಚಿರಾನಿಯಾ ಅವರಿದ್ದ ದ್ವಿ-ಸದಸ್ಯ ಪೀಠ ಹೇಳಿದೆ. ಆದರೆ ಅಭಿಯಾನದ ವೇಳೆ ಪ್ರಾಣಿಗಳಿಗೆ ಹಾನಿಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಕೂಡ ಸ್ಪಷ್ಟಪಡಿಸಿದೆ.ಇದನ್ನೂ ಓದಿ: `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

ಈ ಕುರಿತು ನಾಗರಿಕರು ದೂರು ಸಲ್ಲಿಸಲು ಅನುಕೂಲವಾಗುವಂತೆ ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಐಡಿ ಒದಗಿಸಬೇಕು. ಅದಲ್ಲದೇ ಬೀದಿ ನಾಯಿಗಳು ಹಾಗೂ ಅನಾಥ ಪ್ರಾಣಿಗಳಿಗೆ ಪುರಸಭೆಗಳು, ಖಾಸಗಿ ವ್ಯಕ್ತಿಗಳು ಅಥವಾ ಇನ್ಯಾವುದೇ ಸಂಸ್ಥೆಗಳು ತಾವು ನಿರ್ವಹಿಸುವ ಆಶ್ರಯ ಕೇಂದ್ರಗಳಲ್ಲಿ ತಮಗಿಷ್ಟವಿದ್ದಲ್ಲಿ ಆಹಾರ ನೀಡಬಹುದು ಎಂದು ಹೇಳಿದೆ.

ಸಾಮಾನ್ಯ ಜನರು ಭಾವನೆ, ಧಾರ್ಮಿಕ ನಂಬಿಕೆ ಅಥವಾ ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ಆಹಾರ ನೀಡಲು ಅಥವಾ ಅವುಗಳನ್ನು ನೋಡಿಕೊಳ್ಳಲು ಬಯಸಿದರೆ ಅಂತಹ ಚಟುವಟಿಕೆಗಳನ್ನು ಪ್ರಾಣಿ ಆಶ್ರಯ ಕೇಂದ್ರದಲ್ಲಿ ಮಾಡಬಹುದು ಎಂದು ತಿಳಿಸಿದೆ.

ರಸ್ತೆಗಳಿಂದ ಬೀದಿ ಪ್ರಾಣಿಗಳನ್ನು ತೆರವುಗೊಳಿಸುವಂತೆ ಮತ್ತು ವಾಹನಗಳ ಮುಕ್ತ ಸಂಚಾರಕ್ಕಾಗಿ ನಿಯಮಿತವಾಗಿ ಗಸ್ತು ತಿರುಗುವಂತೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಅಧಿಕಾರಿಗಳಿಗೆ ಪೀಠ ನಿರ್ದೇಶಿಸಿದೆ. ರಾಜ್ಯದಲ್ಲಿ ನಾಯಿ ಕಡಿತ, ಹೆದ್ದಾರಿಯಲ್ಲಿ ಅನಾಥ ದನಗಳ ಹಾವಳಿಯಿಂದ ಹೆಚ್ಚು ಸಾವು-ನೋವು ಸಂಭವಿಸುತ್ತಿದ್ದ ಹಿನ್ನೆಲೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಈ ಕುರಿತು ಪ್ರತಿಕ್ರಿಯಿಸಲು ರಾಜ್ಯ ಸರ್ಕಾರ ಮತ್ತು ಪುರಸಭೆ ಸಮಯಾವಕಾಶದ ಅಗತ್ಯವಿದೆ ಎಂದು ಸೋಮವಾರ (ಆ.11) ಕೋರಿದ್ದವು. ಸದ್ಯ ಹೈಕೋರ್ಟ್ ಸೆ.8ಕ್ಕೆ ವಿಚಾರಣೆಯನ್ನು ಮುಂದೂಡಿದೆ.ಇದನ್ನೂ ಓದಿ: ಯಾವ ಕಾರಣಕ್ಕೆ ರಾಜಣ್ಣ ಅವ್ರನ್ನ ವಜಾ ಮಾಡಿದ್ದಾರೆ ಗೊತ್ತಿಲ್ಲ: ಪರಮೇಶ್ವರ್

Share This Article