ಕೊನೆಗೂ ಈಡೇರಿದ ಅದಿತಿ ಪ್ರಭುದೇವ ಮನದಾಸೆ- ಬೇಬಿ ಬಂಪ್‌ ಫೋಟೋ ಹಂಚಿಕೊಂಡ ನಟಿ

Public TV
1 Min Read

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ (Aditi Prabhudeva) ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಅದಿತಿ ಮನದಾಸೆಯಂತೆ ಫೋಟೋಶೂಟ್ ಅದ್ಭುತವಾಗಿ ಮೂಡಿ ಬಂದಿದೆ. ಪತಿ ಜೊತೆ ಕ್ಯಾಮೆರಾಗೆ ಅದಿತಿ ಸಖತ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.

ತುಂಬು ಗರ್ಭೀಣಿಯಾಗಿರುವ ನಟಿ ಅದಿತಿ ಪ್ರಭುದೇವ ಅವರು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಇತ್ತೀಚೆಗೆ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಗಿತ್ತು. ಈ ಬೆನ್ನಲ್ಲೇ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿ. ಕೊನೆಗೂ ನನ್ನ ಪುಟ್ಟ ನೆರವೇರಿದೆ ಎಂದಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಸಿನಿಮಾಗಳಲ್ಲಿ ನಟಿಸದಿರಲು ಕಾರಣ ತಿಳಿಸಿದ ತ್ರಿಶಾ

ಕೆಂಪು ಬಣ್ಣದ ಸೀರೆಯುಟ್ಟು ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ತಾಯ್ತನದ ಕಳೆ ಎದ್ದು ಕಾಣುತ್ತಿದ್ದು, ಸಂಭ್ರಮದಿಂದ ಫೋಟೋಶೂಟ್ ಮಾಡಿಸಿದ್ದಾರೆ. ಬಿಳಿ ಬಣ್ಣದ ಶೆರ್ವಾನಿಯಲ್ಲಿ ಅದಿತಿ ಪತಿ ಹೈಲೆಟ್ ಆಗಿದ್ದಾರೆ.

ಜನವರಿಯಲ್ಲಿ ನಟಿ ಅದಿತಿ ಅವರು ಅಮ್ಮನಾಗುತ್ತಿರುವ ಸುದ್ದಿ ತಿಳಿಸಿದ್ದರು. ವಿಶೇಷ ಫೋಟೋಶೂಟ್ ಮಾಡಿಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಮೊದಲ ಮಗು ಆಗಮನವಾಗುತ್ತಿರುವ ಖುಷಿಯಲ್ಲಿದ್ದಾರೆ.

ಕೊಡಗು ಮೂಲದ ಬ್ಯುಸಿನೆಸ್ ಮ್ಯಾನ್ ಯಶಸ್ ಪಾಟ್ಲಾ ಜೊತೆ 2022ರಲ್ಲಿ ಅದಿತಿ ಪ್ರಭುದೇವ ಅವರು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ನಟಿ ಅದ್ಧೂರಿಯಾಗಿ ಮದುವೆಯಾದರು.

Share This Article