ವರುಣ್ ಧವನ್ ಮಾಡಿದ ಎಡವಟ್ಟಿಗೆ ಬೇಸರ ಹೊರಹಾಕಿದ ಕೃತಿ ಸೆನನ್

Public TV
2 Min Read

ಬಣ್ಣದ ಲೋಕದ ಅಂದಮೇಲೆ ಇಲ್ಲಿ ಡೇಟಿಂಗ್, ಗಾಸಿಪ್ ಎಲ್ಲವೂ ಕಾಮನ್. ಒಂದು ಸಿನಿಮಾ ಒಟ್ಟಿಗೆ ಮಾಡಿದ್ರೆ ಸಾಕು. ಆ ಬೆನ್ನಲ್ಲೇ ಗಾಸಿಪ್ ಕೂಡ ಹಬ್ಬಿರುತ್ತದೆ. ಇತ್ತೀಚಿಗೆ ಪ್ರಭಾಸ್- ಕೃತಿ ಸೆನನ್ (Kriti Sanon) ಹೆಸರು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಇಬ್ಬರು ಎಂಗೇಜ್‌ಮೆಂಟ್ ಮಾಡಿಕೊಳ್ತಾರೆ ಎಂದೇ ಹೇಳಲಾಗಿತ್ತು. ಇಷ್ಟೇಲ್ಲಾ ಸಮಸ್ಯೆಯಾಗುವುದಕ್ಕೆ ಕಾರಣ ವರುಣ್ ಧವನ್ (Varun Dhawan) ಆಡಿದ ಆ ಒಂದು ಮಾತು. ಇದೀಗ ಈ ಬಗ್ಗೆ ನಟಿ ಕೃತಿ ಬೇಸರ ಹೊರಹಾಕಿದ್ದಾರೆ.

`ಆದಿಪುರುಷ್’ (Adipurush) ಚಿತ್ರದದಲ್ಲಿ ಪ್ರಭಾಸ್‌ಗೆ ಸೀತೆಯಾಗಿ ಕೃತಿ ಸೆನನ್ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ಇತ್ತೀಚಿಗೆ ನಟಿ ನೀಡಿದ ಸಂದರ್ಶನವೊಂದರಲ್ಲಿ ಪ್ರಭಾಸ್ (Prabhas) ಜೊತೆಗಿನ ಡೇಟಿಂಗ್ ವದಂತಿಯ ಬಗ್ಗೆ‌ ನಟಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಮೂಲಕ ವರುಣ್ ಧವನ್ ಮೇಲಿನ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಬಹಿರಂಗ ಪತ್ರ ಬರೆದು ಮತ್ತೆ ಗಂಭೀರ ಆರೋಪ ಮಾಡಿದ ನಟ ನವಾಜುದ್ದೀನ್ ಪತ್ನಿ

ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ, ಸಿನಿಮಾ ಪ್ರಚಾರವೊಂದಕ್ಕಾಗಿ ವರುಣ್ ಧವನ್ ಹಾಗೂ ಕೃತಿ ಸೆನನ್ ಭಾಗಿ ಆಗಿದ್ದರು. ಇದನ್ನು ಕರಣ್ ಜೋಹರ್ ನಡೆಸಿಕೊಡುತ್ತಿದ್ದರು. ನಾಯಕಿಯರ ಪಟ್ಟಿ ಮಾಡುವ ಟಾಸ್ಕ್‌ ನೀಡಲಾಗಿತ್ತು. ಈ ವೇಳೆ ವರುಣ್ ಧವನ್ ಅವರು ಹಲವು ಹೀರೋಯಿನ್‌ಗಳ ಹೆಸರು ತೆಗೆದುಕೊಂಡರು. ಆದರೆ, ಕೃತಿ ಸೆನನ್ ಹೆಸರನ್ನು ಅವರು ಕೈ ಬಿಟ್ಟಿದ್ದರು. ಈ ಬಗ್ಗೆ ಮಾತನಾಡುವಾಗ, ಈ ಪಟ್ಟಿಯಲ್ಲಿ ಕೃತಿ ಸೆನನ್ ಹೆಸರು ಇಲ್ಲ. ಯಾಕೆಂದರೆ ಅವರ ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ. ಅವರು ಈಗ ಮುಂಬೈನಲ್ಲಿ ಇಲ್ಲ. ದೀಪಿಕಾ ಪಡುಕೋಣೆ (Deepika Padukone) ಜೊತೆ ಶೂಟಿಂಗ್ ಮಾಡುತ್ತಿದ್ದಾರೆ ಎಂದು ವರುಣ್ ಹೇಳಿದ್ದರು. `ಪ್ರಾಜೆಕ್ಟ್ ಕೆ’ ಸಿನಿಮಾಗಾಗಿ ಪ್ರಭಾಸ್ ಅವರು ದೀಪಿಕಾ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ ವರುಣ್ ಧವನ್ ಹೇಳಿದ್ದು ಪ್ರಭಾಸ್ ಬಗ್ಗೆಯೇ ಎಂದು ಎಲ್ಲರೂ ಊಹಿಸಿದ್ದರು. ಇದರಿಂದಲೇ ಇವರಿಬ್ಬರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಸಾಕಷ್ಟು ಸಮಯದ ನಂತರ ನಟಿ ಕೃತಿ ಮೌನ ಮುರಿದಿದ್ದಾರೆ. ವರುಣ್ ಧವನ್ ಅಂದು ಹಾಗೇ ಹೇಳಿದಾಗ ನನಗೆ ತುಂಬಾನೇ ಬೇಸರ ಆಯಿತು. ಈ ವಿಚಾರದ ಬಗ್ಗೆ ಪ್ರಭಾಸ್‌ಗೆ ಹೇಳಬೇಕು ಎನಿಸಿತು. ನಾನು ಪ್ರಭಾಸ್‌ಗೆ ಕಾಲ್ ಮಾಡಿ ವರುಣ್ ಧವನ್ ಈ ರೀತಿ ಹೇಳಿದ್ದಾರೆ ಎಂಬುದನ್ನು ಹೇಳಿದೆ. ಅವರು ಆದರೆ ಯಾಕೆ ಎಂದು ಪ್ರಶ್ನೆ ಮಾಡಿದರು. ನನಗೆ ಗೊತ್ತಿಲ್ಲ ಎಂದು ಉತ್ತರ ಕೊಟ್ಟೆ. ವರುಣ್‌ಗೆ ಹುಚ್ಚು ಹಿಡಿದಿದೆ ಎಂದು ನಾನು ಪ್ರಭಾಸ್ ಬಳಿ ಹೇಳಿದ್ದೆ ಎಂಬುದಾಗಿ ಕೃತಿ ಹೇಳಿಕೊಂಡಿದ್ದಾರೆ. ವರುಣ್ ಧವನ್ ಹೇಳಿಕೆಯಿಂದ ಕೃತಿಗೆ ಸಾಕಷ್ಟು ಬೇಸರ ಆಗಿದೆ. ಇಬ್ಬರ ಮಧ್ಯೆ ಇರುವ ಫ್ರೆಂಡ್‌ಶಿಪ್ ಮುರಿದು ಹೋಯ್ತಾ ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳ ಮನದಲ್ಲಿ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *