ಪ್ರಭಾಸ್ ನಟನೆಯ ಸಿನಿಮಾ ಬಗ್ಗೆ ಹೊರಬಿತ್ತು ಬಿಗ್ ಅಪ್‌ಡೇಟ್

Public TV
1 Min Read

ಬಾಹುಬಲಿ (Bahubali) ಸೂಪರ್ ಸ್ಟಾರ್ ಪ್ರಭಾಸ್ (Prabhas) ಅಭಿಮಾನಿಗಳಿಗೆ ಇದು ನಿಜಕ್ಕೂ ಗುಡ್ ನ್ಯೂಸ್. ಪ್ರಭಾಸ್ ನಟನೆಯ ಸಿನಿಮಾಗಳ ಅಪ್‌ಡೇಟ್‌ಗಾಗಿ ಕಾಯ್ತಿರುವ ಫ್ಯಾನ್ಸ್‌ಗೆ ಇದೀಗ ಸಿಕ್ಕಿದೆ ಬಿಗ್ ಅಪ್‌ಡೇಟ್.

`ಬಾಹುಬಲಿ 2′ (Bahubali 2) ಚಿತ್ರದ ನಂತರ ಪ್ರಭಾಸ್ ನಟನೆಯ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡೋದರಲ್ಲಿ ಸೋತಿದೆ. ಆದರೆ ಪ್ರಭಾಸ್‌ಗೆ ಇರುವ ಡಿಮ್ಯಾಂಡ್ ಮಾತ್ರ ಕಮ್ಮಿಯಾಗಿಲ್ಲ. ಸದ್ಯ ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ `ಸಲಾರ್’ (Salaar) ಮತ್ತು `ಪ್ರಾಜೆಕ್ಟ್‌ಕೆ’ (Project k) ಚಿತ್ರಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟ ಬ್ಯುಸಿಯಿದ್ದಾರೆ. ಆದರೆ ʻಪ್ರಾಜೆಕ್ಟ್‌ಕೆʼ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಇದನ್ನೂ ಓದಿ: ಕಿರುತೆರೆಗೆ ಗುಡ್ ಬೈ, ಸಿನಿಮಾಗಳಲ್ಲಿ ʻಕನ್ನಡತಿʼ ಹೀರೋ ಕಿರಣ್ ರಾಜ್ ಬ್ಯುಸಿ

ಚಿತ್ರರಂಗದಲ್ಲಿ ಈಗ ಸೀಕ್ವೆಲ್‌ಗಳ ಅಬ್ಬರ ಜೋರಾಗಿದ್ದು, ಚಿತ್ರಗಳ ಪಾರ್ಟ್ 1 ಮತ್ತು ಪಾರ್ಟ್ 2 ಅಂತಾ ಮಾಡಿ ಚಿತ್ರಗಳು ಗೆದ್ದು ಬೀಗಿರುವ ಇತಿಹಾಸವಿದೆ. ಹೀಗಿರುವಾಗ ನಾಗ್ ಅಶ್ವಿನ್ ನಿರ್ದೇಶನದ, ಪ್ರಭಾಸ್ ನಟನೆಯ `ಪ್ರಾಜೆಕ್ಟ್‌ಕೆʼ ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರಲು ನಿರ್ಧರಿಸಿದ್ದಾರೆ.

ಬಾಹುಬಲಿ, ಕೆಜಿಎಫ್ (KGF) ಚಿತ್ರಗಳಂತೆಯೇ ಪ್ರಾಜೆಕ್ಟ್‌ಕೆ ಚಿತ್ರ ಕೂಡ ಮಾಡಲಾಗುತ್ತಿದೆ. ಮೊದಲ ಭಾಗದಲ್ಲಿ ಅದ್ಭುತ ಲೋಕದ ಪ್ರಪಂಚದ ಪರಿಚಯ ಮಾಡಿಕೊಡಲಿದ್ದು, 2ನೇ ಭಾಗದಲ್ಲಿ ಅಸಲಿ ಕಥೆಯನ್ನ ತೆರೆಯ ಮೇಲೆ ತೋರಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬಾಹುಬಲಿ ಅಂತೆಯೇ ಪಾರ್ಟ್ 2 ಫಾರ್ಮುಲಾ ಬಳಸಿ ಪ್ರಭಾಸ್ ಗೆಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *