ನಯನತಾರಾ ಜೊತೆ ಮದುವೆ ಆಗಲು ‘ನಾನುಂ ರೌಡಿ ದಾನ್’ ಕಾರಣ ಎಂದ ವಿಘ್ನೇಶ್

Public TV
1 Min Read

ಕಾಲಿವುಡ್ ಹೆಸರಾಂತ ಜೋಡಿ ನಯನತಾರಾ (Nayanthara), ವಿಘ್ನೇಶ್ ಶಿವನ್ (Vignesh Shivan) ವೈವಾಹಿಕ ಬದುಕಿನಲ್ಲಿ ಖುಷಿಯಾಗಿದ್ದಾರೆ. ಇಬ್ಬರ ಅವಳಿ ಮಕ್ಕಳ ಜೊತೆ ಸಂಭ್ರಮದಿಂದ ಜೀವನ ಸಾಗಿಸುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ವಿಘ್ನೇಶ್ ಶಿವನ್ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಅಶ್ವಿನಿ ಪರ ನಿಂತ ದರ್ಶನ್ ಅಭಿಮಾನಿಗಳು: ದೂರು ದಾಖಲು

ನಟಿ ನಯನತಾರಾ ಜೊತೆ ಮದುವೆ ಆಗಲು ಕಾಲಿವುಡ್‌ ನಟ ಧನುಷ್‌ ಕಾರಣ ಎಂದು  ವಿಘ್ನೇಶ್‌ ಶಿವನ್‌ ರಿಯಲ್‌ ಕಥೆ ಬಿಚ್ಚಿಟ್ಟಿದ್ದಾರೆ. 2015ರಲ್ಲಿ ವಿಘ್ನೇಶ್ ಶಿವನ್ ‘ನಾನುಂ ರೌಡಿ ದಾನ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಧನುಷ್ ಈ ಸಿನಿಮಾ ನಿರ್ಮಾಪಕರಾಗಿದ್ದರು. ಈ ವೇಳೆ, ವಿಘ್ನೇಶ್‌ಗೆ ನಯನತಾರಾರನ್ನು ಪರಿಚಯ ಮಾಡಿಸಿದ್ದರು ಧನುಷ್. ಮೊದಲು ಈ ಕಥೆಯನ್ನು ನಯನತಾರಾಗೆ ಹೇಳಿದ್ದರು. ಅವರಿಗೆ ಕಥೆ ಇಷ್ಟ ಆಗಿತ್ತು. ಆದರೆ, ಈ ಮೊದಲು ವಿಜಯ್ ಸೇತುಪತಿಗೆ ಈ ಕಥೆ ಇಷ್ಟ ಆಗಿರಲಿಲ್ಲ. ನಯನತಾರಾ ಓಕೆ ಎಂದಿದ್ದಾರೆ ಎಂಬ ಕಾರಣಕ್ಕೆ ವಿಜಯ್ ಸೇತುಪತಿ ಕೂಡ ನಟಿಸಲು ಒಪ್ಪಿಕೊಂಡರು. ಸುಮಾರು ಒಂದು ವರ್ಷ ಈ ಸಿನಿಮಾದ ಶೂಟಿಂಗ್ ನಡೆದಿತ್ತು. ಈ ವೇಳೆ, ವಿಘ್ನೇಶ್ ಹಾಗೂ ನಯನತಾರಾ ನಡುವೆ ಉತ್ತಮ ಒಡನಾಟ ಬೆಳೆದಿತ್ತು.

ಅಂದು ಧನುಷ್ ನನ್ನನ್ನು ನಯನತಾರಾ ಬಳಿ ಕರೆದುಕೊಂಡು ಹೋಗದೆ ಇದ್ದಿದ್ರೆ ನಮ್ಮ ಮದುವೆ ಆಗುತ್ತಿರಲಿಲ್ಲ. ನಮ್ಮ ಮದುವೆಗೆ ಕಾರಣ ಧನುಷ್ ಎಂದು ವಿಘ್ನೇಶ್ ಶಿವನ್ ಮಾತನಾಡಿದ್ದಾರೆ. ಅಲ್ಲಿಂದ ಪರಿಚಯವಾದ ಸ್ನೇಹ, 7 ವರ್ಷಗಳ ಕಾಲ ಡೇಟಿಂಗ್ ನಂತರ 2022ರಲ್ಲಿ ನಯನತಾರಾ ಮತ್ತು ವಿಘ್ನೇಶ್ ಮದುವೆಯಾದರು.

ಮದುವೆ ನಂತರ ‘ಜವಾನ್’ (Jawan Film) ಸಿನಿಮಾದಲ್ಲಿ ನಾಯಕಿಯಾಗಿ ನಯನತಾರಾ ಬಾಲಿವುಡ್‌ನಲ್ಲಿ ಸೈ ಎನಿಸಿಕೊಂಡಿದ್ದರು. ಇದೀಗ ಅವರ ಬೇಡಿಕೆ ಜಾಸ್ತಿ ಆಗಿದೆ. ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವಿಘ್ನೇಶ್ ಶಿವನ್ ಕೂಡ ಸಿನಿಮಾ ಕಥೆ, ಡೈರೆಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Share This Article