ಜೈಲಲ್ಲಿ ಧ್ಯಾನ, ಅಧ್ಯಾತ್ಮ ಪುಸ್ತಕಗಳ ಓದು – ಅಧ್ಯಾತ್ಮದತ್ತ ದರ್ಶನ್ ಒಲವು?

Public TV
1 Min Read

ದರ್ಶನ್ ಜೈಲು ದಿನಚರಿ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು?

ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಜೈಲಲ್ಲಿ ದಿನಕಳೆಯುತ್ತಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಕುಂದಿರುವ ದರ್ಶನ್ ಅಧ್ಯಾತ್ಮದತ್ತ ಒಲವು ಹೊಂದಿದ್ದಾರೆ. ಅವರ ದಿನಚರಿ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಕೊಲೆ ಕೇಸಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ ದಿನಚರಿ ಎಂಬ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿರುವಂತೆ, ದರ್ಶನ್‌ಗೆ ಚಾಪೆಯೇ ಹಾಸಿಗೆಯಾಗಿದೆ. ಕಂಬಳಿ ಹೊದ್ದು ನಿದ್ರೆ ಮಾಡ್ತಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅರ್ಧ ಗಂಟೆ ಧ್ಯಾನ ಮಾಡುತ್ತಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬಜೆಟ್‌ನಲ್ಲಿ ಅನ್ಯಾಯ – ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ ಕರ್ನಾಟಕ

ಬೆಳಗ್ಗೆ ಆರು ಗಂಟೆಯಿಂದ ಏಳು ಗಂಟೆ ತನಕ ದರ್ಶನ್ ವಾಕಿಂಗ್ ಮಾಡುತ್ತಾರೆ. ತಿಂಡಿ ಮುಗಿಸಿ ಅಧ್ಯಾತ್ಮದ ಪುಸ್ತಕಗಳನ್ನು ಓದುತ್ತಿದ್ದಾರೆ. ಬರೋಬ್ಬರಿ ಹದಿನಾರು ಪುಸ್ತಕಗಳನ್ನು ಜೊತೆಗೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಅವುಗಳಲ್ಲಿ ಬಹುತೇಕ ಅಧ್ಯಾತ್ಮದ ಪುಸ್ತಕಗಳೇ ಎನ್ನುವುದು ವಿಶೇಷ.

ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಭಗವದ್ಗೀತೆ ಸಂಬಂಧಿಸಿದ ಪುಸ್ತಕ ಓದುತ್ತಿದ್ದಾರೆ. ಯಾವುದೇ ಸಿಬ್ಬಂದಿಯ ಜೊತೆಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಜೈಲು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Valmiki Scam | ಇಡಿ ಅಧಿಕಾರಿಗಳ ಮೇಲಿನ ಎಫ್‌ಐಆರ್‌ಗೆ ತಡೆ

ಕಳೆದ ಒಂದು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅಧ್ಯಾತ್ಮದತ್ತ ಒಲವು ತೋರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Share This Article