ಪತ್ನಿಯನ್ನು ಕೊಂದ ಕೇಸ್‌ನಲ್ಲಿ ಜಾಮೀನು ಪಡೆದು ಕೇರಳಕ್ಕೆ ಪರಾರಿಯಾಗಿದ್ದ ಆರೋಪಿ ಬಂಧನ

Public TV
1 Min Read

ಬೆಂಗಳೂರು: ಪತ್ನಿಯನ್ನು ಕೊಂದ ಕೇಸ್‌ನಲ್ಲಿ ಜಾಮೀನು (Bail) ಪಡೆದು ಕೇರಳಕ್ಕೆ (Kerala) ಎಸ್ಕೇಪ್ ಆಗಿ 31 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹೆಬ್ಬಾಳ ಪೊಲೀಸರು (Hebbala Police) ಕೊನೆಗೂ ಬಂಧಿಸಿದ್ದಾರೆ.

ಸುಬ್ರಮಣಿ ಬಂಧಿತ ಆರೋಪಿ. ಈತ 1993ರಲ್ಲಿ ಪತ್ನಿ ಸುಧಾಳ ಶೀಲ ಶಂಕಿಸಿ ಕೊಲೆ ಮಾಡಿದ್ದ. ಈ ಹಿನ್ನೆಲೆ ಹೆಬ್ಬಾಳ ಪೊಲೀಸರು ಕೊಲೆ ಆರೋಪದಡಿ ಈತನನ್ನು ಬಂಧಿಸಿದ್ದರು. ಇದಾದ ಬಳಿಕ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೇ ಆರೋಪಿ ಪರಾರಿಯಾಗಿದ್ದ. ಪರಾರಿಯಾದ ಸಂದರ್ಭ ಈತ ಹಿಂದೂ ಆಗಿದ್ದು ಬಳಿಕ ಮುಸ್ಲಿಂ ಹೆಸರು ಇಟ್ಟುಕೊಂಡು ತಲೆಮರೆಸಿಕೊಂಡಿದ್ದ. ಇದನ್ನೂ ಓದಿ: ರೈತರನ್ನು ಹಿಮ್ಮೆಟ್ಟಿಸಲು ʻಶಬ್ದಾಸ್ತ್ರʼ ಪ್ರಯೋಗ – ಇದು ಹೇಗೆ ಕೆಲಸ ಮಾಡುತ್ತೇ?

ಬೆಂಗಳೂರಿನಿಂದ ಎಸ್ಕೇಪ್ ಆಗಿ ಕೇರಳ ಸೇರಿದ್ದ ಆರೋಪಿ ಸುಬ್ರಮಣಿ ಅಲ್ಲಿ ಅನ್ಯಧರ್ಮದ ಆಚರಣೆ ಮತ್ತು ಪದ್ಧತಿ ಕಲಿತಿದ್ದ. ತನ್ನ ಹೆಸರನ್ನು ಹುಸೇನ್ ಸಿಕಂದರ್ ಎಂದು ಬದಲಾಯಿಸಿಕೊಂಡಿದ್ದ. ಅಲ್ಲದೇ ಸ್ಥಳೀಯರ ಸ್ನೇಹ ಸಂಪಾದಿಸಿ ಕೆಲಕಾಲ ಅಲ್ಲೇ ಉಳಿದು ಕೊಂಡಿದ್ದ. ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದು, ಮಸೀದಿಯಲ್ಲಿ ಮೌಲ್ವಿಯಾಗಿದ್ದ ಎನ್ನಲಾಗುತ್ತಿದೆ. ಸದ್ಯ ಆರೋಪಿಯನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸಚಿವರ ಸ್ಪರ್ಧೆ ಅನಿವಾರ್ಯ: ಸಿಎಲ್‌ಪಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

Share This Article