ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಸೊನ್ನೆ – 7 ಇನ್ನಿಂಗ್ಸ್‌ ಪೈಕಿ 5 ರಲ್ಲಿ ಶೂನ್ಯಕ್ಕೆ ಅಭಿಷೇಕ್‌ ಔಟ್‌

1 Min Read

ಅಹಮದಾಬಾದ್‌: ಟೀಂ ಇಂಡಿಯಾದ (Team India) ಆರಂಭಿಕ ಆಟಗಾರ, ಟಿ20 ಕ್ರಿಕೆಟ್‌ನ ನಂ.1 ಆಟಗಾರ ಅಭಿಷೇಕ್‌ ಶರ್ಮಾ(Abhishek Sharma) ಮತ್ತೆ ಶೂನ್ಯಕ್ಕೆ ಔಟಾಗಿದ್ದಾರೆ.

ಇಂದು ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನೆದರ್‌ಲ್ಯಾಂಡ್ಸ್‌(Netherlands) ವಿರುದ್ಧ ಪಂದ್ಯದಲ್ಲಿ 3 ಎಸೆತ ಎದುರಿಸಿ ಬೌಲ್ಡ್‌ ಆಗಿದ್ದಾರೆ.

ಅಭಿಷೇಕ್‌ ಶರ್ಮಾ ಈ ವಿಶ್ವಕಪ್‌ನಲ್ಲಿ ನಮೀಬಿಯಾದ ವಿರುದ್ಧ ಅನಾರೋಗ್ಯದ ಕಾರಣ ಪಂದ್ಯ ಆಡಲಿಲ್ಲ. ಆದರೆ ಅಮೆರಿಕ, ಪಾಕಿಸ್ತಾನ, ನೆದರ್‌ಲ್ಯಾಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದು ಭಾರತದ ಆತಂಕಕ್ಕೆ ಕಾರಣವಾಗಿದೆ. ಕಳೆದ 7 ಇನ್ನಿಂಗ್ಸ್‌ನ 5 ಪಂದ್ಯಗಳಲ್ಲಿ ಅಭಿಷೇಕ್‌ ಸೊನ್ನೆ ರನ್‌ಗೆ ಔಟಾಗಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ – ಪಾಕ್‌ ಆಟಗಾರರ ಕಥೆ ಏನು?

ಯಾವ ಪಂದ್ಯದಲ್ಲಿ ಎಷ್ಟು ರನ್‌?
O(1) vs ನ್ಯೂಜಿಲೆಂಡ್‌
68*(20) vs ನ್ಯೂಜಿಲೆಂಡ್‌
0(1) vs ನ್ಯೂಜಿಲೆಂಡ್‌
30(16) vs ನ್ಯೂಜಿಲೆಂಡ್‌
0(1) vs ಅಮೆರಿಕ
0(4) vs ಪಾಕಿಸ್ತಾನ
0(3) vs ನೆದರ್‌ಲ್ಯಾಂಡ್‌

ನ್ಯೂಜಿಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಅಭಿಷೇಕ್‌ 35 ಎಸೆತಗಳಲ್ಲಿ 84 ರನ್‌ಗಳಿಸಿದ್ದರು. ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಭಾರತ ಈಗಗಲೇ ಸೂಪರ್‌ 8 ಹಂತವನ್ನು ಪ್ರವೇಶಿಸಿದ್ದು ಯಾವುದೇ ಆತಂಕ ಇಲ್ಲ. ಆದರೆ ಸೂಪರ್‌ 8 ರಲ್ಲಿ ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌, ಜಿಂಬಾಬ್ವೆ ವಿರುದ್ಧ ಆಡಬೇಕಿದೆ.

ಮೂರು ತಂಡಗಳು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಹೀಗಾಗಿ ಉತ್ತಮ ಆರಂಭವಿದ್ದರೆ ಮಾತ್ರ ಉಳಿದ ಬ್ಯಾಟರ್‌ಗಳಿಗೆ ಸಹಾಯವಾಗುತ್ತದೆ.

Share This Article