ಅಭಿಷೇಕ್ ಅಂಬರೀಶ್ ನಟನೆಯ `ಬ್ಯಾಡ್ ಮ್ಯಾನರ್ಸ್’ ಫಸ್ಟ್ ಸಾಂಗ್ ಔಟ್

Public TV
2 Min Read

ʻದು‌ನಿಯಾʼ, ʻಕೆಂಡಸಂಪಿಗೆʼ, ʻಟಗರುʼ ಸಿನಿಮಾಗಳ ನಿರ್ದೇಶಕ ಸೂರಿ (Director Soori) ಇದೀಗ ಅಂಬಿ ಪುತ್ರ ಅಭಿಷೇಕ್‌ಗೆ ನಿರ್ದೇಶನ ಮಾಡಿದ್ದಾರೆ. `ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾ ತೆರೆಗೆ ಅಬ್ಬರಿಸಲು ಸಿದ್ಧವಾಗಿದೆ. ಚಿತ್ರದ ಕಲರ್‌ಫುಲ್ ಸಾಂಗ್‌ವೊಂದು ಯುಗಾದಿ ಹಬ್ಬದಂದು ರಿಲೀಸ್ ಆಗಿದೆ. ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಂಡಿದೆ.

`ಅಮರ್’ (Amar) ಚಿತ್ರದ ನಂತರ ಮೂರು ವರ್ಷಗಳ ನಂತರ ಅಭಿಷೇಕ್ (Abhishek Ambreesh) `ಬ್ಯಾಡ್ ಮ್ಯಾನರ್ಸ್’ ರಗಡ್ ಮೂಲಕ ಬರುತ್ತಿದ್ದಾರೆ. ರಗಡ್ ಪೊಲೀಸ್ ಆಫೀಸರ್ ರುದ್ರ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಗೆ ನಾಯಕಿಯರಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್- ಪ್ರಿಯಾಂಕಾ ನಟಿಸಿದ್ದಾರೆ. ಸದ್ಯ ಚಿತ್ರದ ಫಸ್ಟ್ ಸಾಂಗ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬದಂದು ‌ʻಕಾಂತಾರ 2ʼ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಹೊಂಬಾಳೆ ಫಿಲ್ಮ್ಸ್

ಚರಣ್ ರಾಜ್ ಟ್ಯೂನ್ ಹಾಕಿರೋ ಪೆಪ್ಪಿ ಸಾಂಗ್‌ಗೆ ಧನಂಜಯ್ ರಾಜನ್ ಬೊಂಬಾಟ್ ಲಿರಿಕ್ಸ್ ಬರೆದಿದ್ದಾರೆ. ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್‌ನಲ್ಲಿ ಸಾಂಗ್ ಸಖತ್ ಮಜವಾಗಿದೆ. ಅದನ್ನು ಅಷ್ಟೇ ಸೊಗಸಾಗಿ ಸೂರಿ ಅಂಡ್ ಟೀಮ್ ಸೆರೆ ಹಿಡಿದಿರೋದು ಗೊತ್ತಾಗುತ್ತಿದೆ. ಚಿತ್ರದಲ್ಲಿ ಅಭಿ ಪಾತ್ರ ಪರಿಚಯಿಸುವ ಸಾಂಗ್ ಇದಾಗಿದೆ.

ಅಭಿಷೇಕ್- ರುದ್ರ ಎರಡನ್ನು ಸೇರಿಸಿ ಹಾಡಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ. ಕೊಂಚ ಹಿಂದಿ, ಇಂಗ್ಲೀಷ್ ಪದಗಳನ್ನು ಹೆಚ್ಚೇ ಸೇರಿಸಿ ಸಾಲುಗಳನ್ನು ಪೋಣಿಸಲಾಗಿದೆ. `ಬ್ಯಾಡ್ ಮ್ಯಾನರ್ಸ್’ (Bad Manners) ಟೈಟಲ್ ಸಾಂಗ್‌ಗೆ ಧನಂಜಯ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಷೇಕ್ ಸಿಕ್ಕಾಪಟ್ಟೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬದಂದು ‌ʻಕಾಂತಾರ 2ʼ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಹೊಂಬಾಳೆ ಫಿಲ್ಮ್ಸ್

ಅಂದಾಜು ಒಂದು ಕೋಟಿ ವೆಚ್ಚದಲ್ಲಿ ಒಂದು ವಾರ ಸಾಂಗ್ ಶೂಟ್ ಮಾಡಲಾಗಿದೆ. `ಏಕ್ ದೋ ತೀನ್ ಚಾರ್ ಹೀ ಈಸ್ ದಿ ನ್ಯೂ ರೆಬಲ್ ಸ್ಟಾರ್, `ಚೂರು ಬ್ಯಾಡ್ ಚೂರು ಮ್ಯಾಡ್’ ಅನ್ನುವ ಸಾಲುಗಳು ಇಂಟ್ರೆಸ್ಟಿಂಗ್ ಆಗಿದೆ. ಪಬ್ ಸೆಟಪ್ ರೀತಿಯಲ್ಲಿ ಸೆಟ್ ಹಾಕಿ ಸಾಂಗ್ ಸೆರೆ ಹಿಡಿದಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ಅಭಿ ಡ್ಯಾನ್ಸ್‌ಗೆ ಸಾಥ್ ಕೊಟ್ಟಿದ್ದಾರೆ. ರೆಡ್ ಥೀಮ್‌ನಲ್ಲಿ ಬ್ಯಾಕ್‌ಗ್ರೌಂಡ್ ಆಗಿ ಅಭಿ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ. ಇನ್ನೂ ಚಿತ್ರದ ಮೊದಲ ಸಾಂಗ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ಮೇ ಅಂತ್ಯಕ್ಕೆ ತೆರೆಗೆ ಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *